6:53 PM Saturday18 - May 2024
ಬ್ರೇಕಿಂಗ್ ನ್ಯೂಸ್
ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ…

ಇತ್ತೀಚಿನ ಸುದ್ದಿ

ದೊಂದಿ ಬೆಳಕಿನಲ್ಲಿ ಮಂತ್ರದೇವತೆ ಕೋಲ: ಭಕ್ತಿಯ ಪರಾಕಾಷ್ಠೆಗೆ ಏರಿಸಿದ ಮಾಬೆಟ್ಟು ವಿಶ್ವನಾಥ ಶೆಟ್ರರ ದೈವಾರಾಧನೆ

04/05/2024, 21:54

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಇತ್ತೀಚಿಗಿನ‌ ದಿನಗಳಲ್ಲಿ ನಡೆಯುತ್ತಿರುವ ಅಬ್ಬರದ ಕೋಲ,ನೇಮ ಮುಂತಾದ ದೈವಕಾರ್ಯಗಳ ನಡುವೆ ಇಲ್ಲೊಂದು ಕಡೆ ಸಾಂಪ್ರದಾಯಿಕವಾಗಿ ದೊಂದಿ ದೀಪದ ಬೆಳಕಿನಲ್ಲಿ ಮಂತ್ರದೇವತೆಯ ಕೋಲ‌ ನಡೆಸಿ ಎಲ್ಲರನ್ನೂ ಭಕ್ತಿಯ ಪರಾಕಾಷ್ಠೆಗೆ ಒಯ್ಯುವಲ್ಲಿ ಯಶಸ್ವಿಯಾಗಿದೆ.


ಇದು ನಡೆದಿರುವುದು ತುಳುನಾಡಿನ ಬಂಟ್ವಾಳ ತಾಲೂಕಿನ ರಾಯಿ ಎಂಬ ಪುಟ್ಟ ಊರಿನಲ್ಲಿ.
ಆಧುನಿಕ ಯುಗದಲ್ಲಿ ಎಲ್ಲವೂ ಬದಲಾಗುತ್ತಿದ್ದರೂ ತುಳುನಾಡಿನ ದೈವಾರಾಧನೆ ಇಂದಿಗೂ ಮೂಲ‌ ಸ್ವರೂಪವನ್ನು ಉಳಿಸಿಕೊಂಡಿದೆ. ಆದರೆ ಕೆಲವೊಂದು ಕಡೆಗಳಲ್ಲಿ ಮಿತಿ ಮೀರಿದ ಅಬ್ಬರ, ಅಲಂಕಾರ ನಡೆದು ಭಕ್ತಿಗಿಂತ ಆಡಂಬರ- ಸಡಗರವೇ ಹೆಚ್ಚಾಗಿ ಎದ್ದು ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಆಡಂಬರಕ್ಕೆ ಅಪವಾದ ಎಂಬ ರೀತಿಯಲ್ಲಿ ಬಂಟ್ವಾಳದ ರಾಯಿ ಎಂಬಲ್ಲಿ ದೈವಾರಾಧನೆ ನಡೆಸಲಾಗಿದೆ. ಸಾಂಪ್ರದಾಯ ಬದ್ಧವಾಗಿ ಮಂತ್ರದೇವತೆಯ ಕೋಲ ನಡೆದಿದೆ.ದೊಂದಿಯ ಬೆಳಕಿನಲ್ಲಿ ಮಂತ್ರದೇವತೆಯ ಕೋಲ‌ ನಡೆಸಲಾಗಿದೆ.
ಬಂಟ್ವಾಳದ ರಾಯಿ ಮಾಬೆಟ್ಟು ವಿಶ್ವನಾಥ ಶೆಟ್ಟಿ ಅವರ ಮನೆಯಲ್ಲಿ ಈ ಕೋಲ ನಡೆದಿದೆ.ದೊಂದಿ ಹಾಗೂ ದೀವಟಿಗೆಯ ಬೆಳಕಿನಲ್ಲಿ ಮಂತ್ರದೇವತೆ ಮಾಯದಿಂದ ಜೋಗದ ರೂಪಕ್ಕೆ ಇಳಿದು ನಂಬಿದವರಿಗೆ ತನ್ನ ವೈಭವವನ್ನು ತೋರಿಸಿದೆ. ಸಿರಿಸಿಂಗಾರದ ಸೇವೆಯನ್ನು ಪಡೆದು ಪ್ರಸನ್ನಳಾದ ಮಂತ್ರದೇವತೆಯ ಅಬ್ಬರ ದೀವಟಿಗೆಯ ಬೆಳಕಿನಲ್ಲಿ ಬೇರೆ ಲೋಕವನ್ನೇ ಧರೆಗಿಳಿಸುವಂತೆ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು