4:40 PM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ಚೈತ್ರಾ ಪ್ರಕರಣ; ಬಿಜೆಪಿಯಲ್ಲಿ ಸಿಎಂ ಹುದ್ದೆ, ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್ ಗಳೂ ಮಾರಾಟವಾಗಿದೆಯೇ?: ಕಾಂಗ್ರೆಸ್ ಪ್ರಶ್ನೆ

14/09/2023, 12:43

ಬೆಂಗಳೂರು(reporterkarnataka.com):ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ, ಸಚಿವ ಸ್ಥಾನ ಮಾರಾಟವಾದಂತೆ ಟಿಕೆಟ್ ಗಳೂ ಮಾರಾಟವಾಗಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ ಹಿಂದುತ್ವದ ಭಾಷಣಕಾರ್ತಿ ಚೈತ್ರಾ ಕುಂದಾಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನ ಎಕ್ಸ್(ಟ್ವಿಟರ್) ಖಾತೆಯಲ್ಲಿ ಇಂತಹದ್ದೊಂದು ಪ್ರಶ್ನೆ ಎತ್ತಿದೆ. ಇದಕ್ಕೆ ಪೂರಕವಾಗಿ ಹಲವು ಪ್ರಶ್ನೆಗಳ ಬಾಣಗಳನ್ನೇ ಬಿಜೆಪಿಯತ್ತ ಎಸೆದಿದೆ.
ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಉದ್ಯಮಿ
ಗೋವಿಂದ ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಾಗಿ 5 ಕೋಟಿ ನೀಡಿರುವುದಾಗಿ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯನ್ನು ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ವಾಗ್ದಾಳಿ ನಡೆಸಿದೆ. ಈ ಕುರಿತಂತೆ ರಾಜ್ಯ ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದು, ”ಭಾಷಣಕಾರ್ತಿಯು ಬಿಜೆಪಿಯ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಸುಮಾರು 7 ಕೋಟಿ ಪಡೆದು ವಂಚಿಸಿದ್ದಾರೆ ಎಂದು ಕುಂದಾಪುರದ ಉದ್ಯಮಿಯೊಬ್ಬರು ದೂರಿದ್ದಾರೆ. ಬಿಜೆಪಿಯಲ್ಲಿ ಸಿಎಂ ಹುದ್ದೆ, ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್ ಗಳೂ ಮಾರಾಟವಾಗಿದೆಯೇ? ಈ ವಂಚನೆ ಪ್ರಕರಣ ಹಲವು ತಿಂಗಳ ಹಿಂದೆಯೇ ಬೆಳಕಿಗೆ ಬಂದಿದ್ದರೂ ಬಿಜೆಪಿ ದೂರು ಕೊಡದೇ ಸುಮ್ಮನಿರುವುದೇಕೆ? ಈ 7 ಕೋಟಿ ವಂಚನೆಯಲ್ಲಿ ಬಿಜೆಪಿಗರ ಪಾಲೆಷ್ಟು? ಆರೆಸ್ಸೆಸ್ ಪಾಲೆಷ್ಟು? ಈ ಮಹಾ ವಂಚನೆಯ ಬಗ್ಗೆ ಕರ್ನಾಟಕ ಬಿಜೆಪಿ ಮೌನವಹಿಸಿರುವುದೇಕೆ?” ಎಂದು ಪ್ರಶ್ನೆ ಮಾಡಿದೆ.
ಬಿಜೆಪಿ ಹಾಗೂ ಅದರ ಬಾಡಿಗೆ ಭಾಷಣಕಾರರ ಅಸಲಿ ಬಂಡವಾಳ ಬಯಲಾಗುತ್ತಿದೆ. ಹಿಂದುತ್ವದ ಹೆಸರಲ್ಲಿ ಹಿಂದುಗಳನ್ನೇ ವಂಚಿಸುವುದು ಬಿಜೆಪಿ ಹಾಗೂ ಅದರ ಪರಿವಾರದ ಹಳೇ ಚಾಳಿ. ವಂಚನೆ ಪ್ರಕರಣದಲ್ಲಿ ಬಂಧನವಾದ ಚೈನ್ ಚೈತ್ರಾ ಎಂಬಾಕೆಯ ಪ್ರಕರಣದಲ್ಲಿ ಬಿಜೆಪಿ ಮೌನವಹಿಸಿದೆ. ಟಿಕೆಟ್ ಮಾರಾಟ ಬೆಳಕಿಗೆ ಬಂದಿರುವಾಗ ಬಿಜೆಪಿಯ ಸ್ಪಷ್ಟನೆ ಏನಿರಬಹುದು? ಆಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸಿದ್ದ ವರಸೆ ಪ್ರದರ್ಶಿಸಬಹುದೇ? “ಆಕೆ ಬಿಜೆಪಿಯ ಸದಸ್ಯೆ ಅಲ್ಲ” ಎಂದು ಹೇಳಿಕೆ ಹೊರಡಿಸಬಹುದೇ?” ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಪ್ರಾಮಾಣಿಕವಾಗಿದ್ದರೆ ಪಕ್ಷದ ಹೆಸರಲ್ಲಿ ವಂಚಿಸಿದ ಆಕೆಯ ವಿರುದ್ದ ಈ ಹಿಂದೆಯೇ ದೂರು ನೀಡಲಿಲ್ಲ ಏಕೆ? ಬಿಜೆಪಿ ತನ್ನ ಆಡಳಿತದಲ್ಲಿ ಕುಮಾರಕೃಪಾ ಅತಿಥಿಗೃಹವನ್ನು ಭ್ರಷ್ಟರು, ಲಂಪಟರು, ದಗಾಕೋರರ ಅಡ್ಡೆಯಾಗಿ ಬದಲಾಯಿಸಿತ್ತೇ? ಸ್ಯಾಂಟ್ರೋ ರವಿಯೂ ವಂಚನೆಯ ಕೆಲಸಗಳಿಗೆ ಕುಮಾರಕೃಪಾವನ್ನೇ ಕಾಯಂ ಕಾರ್ಯಸ್ಥಾನ ಮಾಡಿಕೊಂಡಿದ್ದ, ಚೈತ್ರಾ ಕೂಡ ಟಿಕೆಟ್ ವಂಚನೆಗೆ ಕುಮಾರಕೃಪಾವನ್ನೇ ಆಶ್ರಯಿಸಿದ್ದಳು. ಕುಮಾರಕೃಪಾ ಅತಿಥಿಗೃಹವನ್ನು ಥರ್ಡ್ ಗ್ರೇಡ್ ಲಾಡ್ಜ್ ನಂತೆ ವ್ಯವಸ್ಥೆ ಮಾಡಿಕೊಡುವುದರ ಹಿಂದೆ ಯಾರ ಕೃಪೆ ಇತ್ತು ಎಂದು ಪ್ರಶ್ನಿಸಿದೆ.
ಬಿಜೆಪಿ ಸರಕಾರದಲ್ಲಿ ಗೃಹಮಂತ್ರಿಯಾಗಿದ್ದಾಗ ಪಿಎಸ್ಐ ಹಗರಣದ ಪ್ರಮುಖ ಆರೋಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಮಾಜಿ ಗೃಹ ಸಚಿವರು ಈಗ ವಂಚನೆ ಆರೋಪಿಯ ರಕ್ಷಣೆಗೆ ಬ್ಯಾಟ್ ಬೀಸುತ್ತಿದ್ದಾರೆ. ಆರಗ ಜ್ಞಾನೇಂದ್ರ ಅವರೇ, ಆಕೆ ವಂಚಿಸಿದ್ದು ನಿಮ್ಮದೇ ಪಕ್ಷದಲ್ಲಿರುವ ಹಿಂದೂಪರ ಉದ್ಯಮಿಗೆ, ಆಕೆಯ ವಿರುದ್ದ ದೂರು ನೀಡಿದ್ದು ಅದೇ ನಿಮ್ಮದೇ ಪಕ್ಷದ ಮುಖಂಡ, ಆದರೂ ಆಕೆಯ ಪರ ನಿಂತಿದ್ದೀರಿ ಅಂದರೆ 7 ಕೋಟಿಯಲ್ಲಿ ನಿಮಗೂ ಪಾಲಿದೆಯೇ? ಬಿಜೆಪಿ ಅಂದರೆ ಭ್ರಷ್ಟರು, ವಂಚಕರಿಗೆ ಬಲು ಪ್ರೀತಿ ಏಕೆ?” ಎಂದಿದೆ.
”ಮಾಜಿ ಗೃಹ ಸಚಿವರು ಆರೋಪಿಯ ಪರ ವಕಾಲತ್ತು ವಹಿಸುತ್ತಿರುವುದರ ಹಿಂದೆ ಯಾವ ಸತ್ಯ ಅಡಗಿದೆ? ವಂಚನೆ ಆರೋಪಿಯೊಂದಿಗೆ ವೇದಿಕೆಯಲ್ಲಿ ಯಾವ ಘನಂದಾರಿ ಚರ್ಚೆ ಮಾಡಿದ್ದಿರಿ ಆರಗ ಜ್ಞಾನೇಂದ್ರ ಅವರೇ’. ಕುಮಾರಕೃಪಾದಲ್ಲಿ ಡೀಲಿಂಗ್ ನಡೆಸಿದ ಸ್ಯಾಂಟ್ರೋ ರವಿ, ಚೈನ್ ಚೈತ್ರಾ ಜ್ಞಾನೇಂದ್ರರಿಗೆ ಪರಮಾಪ್ತರು. ವಂಚಕರಿಗೆ ಕುಮಾರಕೃಪಾ ಸಿಗಲು ಮಾಜಿ ಗೃಹ ಸಚಿವರ ಕೃಪೆ ಇತ್ತೇ? ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುತ್ತೇನೆಂದು, ಬಿಜೆಪಿಯವರಿಗೇ ವಂಚಿಸಿದರೂ ವಂಚಕಿಯ ಪರ ನಿಂತಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ?” ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬಿಜೆಪಿ ಪಕ್ಷದಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಟಿಕೆಟ್ ವಂಚನೆಯ ಪ್ರಕರಣದಲ್ಲಿ ಬಿಜೆಪಿಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಪ್ರಮುಖ ಆರೋಪಿ. ಈತನ ವಂಚನೆಯ ಬಗ್ಗೆ ಒಂದು ತಿಂಗಳ ಹಿಂದೆಯೇ ಪಕ್ಷಕ್ಕೆ ದೂರು ಬಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಏಕೆ ಬಿಜೆಪಿ? ವಂಚಕರಿಗೆ, ಭ್ರಷ್ಟರಿಗೆ ಬಿಜೆಪಿ ತವರು ಮನೆಯಾಗಿದೆಯೇ? ಬಿಜೆಪಿಯಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಸಿಎಂ ಹುದ್ದೆಗೆ 2,500 ಕೋಟಿ, ಮಂತ್ರಿಗಿರಿಗೆ 70 – 80 ಕೋಟಿ, MLA ಟಿಕೆಟ್ ಗೆ 7 ಕೋಟಿ!! ಇದೆಲ್ಲವೂ ಬಿಜೆಪಿಯವರಿಂದಲೇ ಬಯಲಾದ ಸತ್ಯಗಳು. ಯತ್ನಾಳ್ ಆಣೆಗೂ ಇದನ್ನು ನಾವು ಹೇಳಿದ್ದಲ್ಲ! ಈ ಮಾರಾಟದ ಆಟದಲ್ಲಿ “ವಿರೋಧ ಪಕ್ಷದ ನಾಯಕ”ನ ಹುದ್ದೆಗೆ ಇನ್ನೂ ಯಾರೊಬ್ಬರೂ ಬಿಡ್ ಸಲ್ಲಿಸಿಲ್ಲವೇ ಬಿಜೆಪಿ? ಎಂದು ಟೀಕಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು