10:26 AM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ವೈಜ್ಞಾನಿಕ ಕ್ಷೇತ್ರದ ಕಲಿಕೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ವಿಜ್ಞಾನ ಮೇಳಗಳು ಅಗತ್ಯ: ಡಾ. ಸುಧಾ ಮೂರ್ತಿ

21/02/2023, 11:48

ಮಂಡ್ಯ(reporterkarnataka.com):
ವೈಜ್ಞಾನಿಕ ಕ್ಷೇತ್ರದಲ್ಲಿ ಕಲಿತವರು ನಿಖರತೆ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ, ವಿಜ್ಞಾನ ತಳಹದಿಯ ಯೋಚನೆಗಳು ಅಂಧಶ್ರದ್ಧೆಯನ್ನು ನಿವಾರಿಸಿ ಯಶಸ್ಸು ಗಳಿಸುವ ವೈಚಾರಿಕತೆಯನ್ನು ನೀಡುತ್ತದೆ ಎಂದು ಭಾರತದ ಪ್ರಥಮ ಮಹಿಳಾ ಎಂಜಿನಿಯರ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಸುಧಾಮೂರ್ತಿ ಅಭಿಪ್ರಾಯ ಪಟ್ಟರು.
ಅವರು ನಾಗಮಂಗಲ ತಾಲೂಕು ಆದಿಚುಂಚನಗಿರಿಯಲ್ಲಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಯವರ ಪಟ್ಟಾಭಿಷೇಕ ದಶಮಾನೋತ್ಸವ ಸಂದರ್ಭದಲ್ಲಿ ಶ್ರೇಷ್ಠ ವಿಜ್ಞಾನ ತಂತ್ರಜ್ಞಾನ ಸಾಧಕರಿಗೆ ಶ್ರೀಮಠದಿಂದ ಕೊಡಮಾಡುವ ಮೇರು ಪುರಸ್ಕಾರ “ವಿಜ್ಞಾತಂ ಪ್ರಶಸ್ತಿ” ಸ್ವೀಕರಿಸಿ ಮಾತನಾಡಿದರು.
ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ನಡುವೆ ಸಾಕಷ್ಟು ಅಂತರವಿರುತ್ತದೆ, ಇಂತಹ ವಿಜ್ಞಾನ ಮೇಳಗಳು ಅಧೀರತೆಯನ್ನು ಹೋಗಲಾಡಿಸಿ ಸಾಧನೆಯ ಮಾರ್ಗವನ್ನು ತೋರುತ್ತವೆ. ಹೊಸ ಆವಿಷ್ಕಾರಗಳು ಸಮಾಜವನ್ನು ಮುಂದುವರೆಸುತ್ತವೆ. ಶ್ರೀ ಬಾಲಗಂಗಾಧರನಾಥರ ಆಲದಮರವೆಂಬ ಶ್ರೀಮಠದ ಆಶ್ರಯದಲ್ಲಿ ಇಂತಹ ಶ್ರೇಷ್ಠ ಆಧ್ಯಾತ್ಮಿಕ ಗುರುಮಾನ್ಯರು ಅವತರಿಸಿ, ಸಮಗ್ರ ಭಾರತದ ಏಳಿಗೆಯಾಗಲಿ. ಶ್ರೀ ಗುರುಪೀಠದಿಂದ ಇಂತಹ ಮಹತ್ಕಾರ್ಯಗಳು ಸದಾ ನೆರವೇರುತ್ತಿರಲೆಂದು ಆಶಿಸಿದರು.

ದಿವ್ಯ ಉಪಸ್ಥಿತಿ ವಹಿಸಿದ್ದ ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಜ್ಞಾನದ ಆಳ ವಿಜ್ಞಾನದ ವ್ಯಾಸಗಳು ಮಹಾ ಶಕ್ತಿಯನ್ನು ನೀಡುತ್ತವೆ, ಅದರಂತೆಯೇ ಶ್ರೀ ಬಾಲಗಂಗಾಧರನಾಥರ ಪುಣ್ಯಪ್ರಭೆಯಿಂದ ಶ್ರೀ ನಿರ್ಮಲಾನಂದನಾಥರ ಯತಿಶ್ರೇಷ್ಟತೆಯು ಇಂಥ ಸಾಧನೆಯ ಸಂಪನ್ನತೆಯಲ್ಲಿ ಪರಿಪೂರ್ಣ ಗೊಂಡಿದೆ ಎಂದರು.

ಪಟ್ಟಾಭಿಷೇಕ ದಶಮಾನೋತ್ಸವದ ‘ಹತ್ತು’ ಎಂಬುದು ಸಂಖ್ಯೆ ಮಾತ್ರವಲ್ಲ ಮುಂದಕ್ಕೆ ಹತ್ತು ಎಂಬ ಸಂಕೇತವನ್ನು ಸೂಚಿಸುವಂತೆ, ಶ್ರೀಗಳು ತನ್ನೊಂದಿಗೆ ಶ್ರೀಮಠವನ್ನೂ ವಿಶ್ವತೋಮುಖವಾಗಿ ಬೆಳೆಸುತ್ತಿದ್ದಾರೆ ಎಂದರು.
ಜ್ಞಾನ-ವಿಜ್ಞಾನ-ತಂತ್ರಜ್ಞಾನವನ್ನು ಸಮನ್ವಯಗೊಳಿಸಿ ವಿಶೇಷ ವ್ಯಾಖ್ಯಾನ ನೀಡಿದರು.

ಮುಖ್ಯ ಅತಿಥಿಯಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ ವೇದ- ಉಪನಿಷತ್ ಕಾಲದಿಂದಲೂ ಜ್ಞಾನವು ವಿಜ್ಞಾನದ ಭಾಗವಾಗಿಯೇ ಇದೆ. ಜ್ಞಾನಿಗಳು ಕಾಲಕಾಲಕ್ಕೆ ಆಧಾರ ಸಹಿತವಾಗಿ ಧಾರೆ ಎರೆಯುತ್ತಿದ್ದಾರೆ, ಹೊಸ ಯುಗದ ಅನ್ವೇಷಣೆಗೆ ವಿಜ್ಞಾನ ತಂತ್ರಜ್ಞಾನ ಮೇಳಗಳು ಸಹಕಾರಿಯಾಗಿವೆ,
ನಿಸರ್ಗದಿಂದ ಜೀವತಳೆದು, ನಿಸರ್ಗದಲ್ಲೇ ಬೆರೆತು ಲೀನವಾಗುವ ನಿಸರ್ಗ ಜ್ಞಾನದ ಪವಿತ್ರತೆಯನ್ನು ಕಾಯ್ದುಕೊಳ್ಳಬೇಕು, ಸಂಸ್ಥಾನ ಮಠವು ಇಂಥ ಮಹತ್ಕಾರ್ಯವನ್ನು ಶ್ಲಾಘನೀಯವಾಗಿ ಪೂರ್ಣಗೊಳಿಸುತ್ತದೆ. ನವೀಕರಿಸಬಹುದಾದ ಇಂಧನ ತಯಾರಿಯಲ್ಲಿ ಭಾರತವೇ ಮೊದಲು, ಭಾರತ ಸರ್ಕಾರವು ಶಿಕ್ಷಣದ ಸರ್ವತೋಮುಖ ಅಭಿವೃದ್ಧಿಗಾಗಿ ಎನ್ ಈ ಪಿ ಜಾರಿಗೊಳಿಸಿದೆ,ಇದಕ್ಕೂ ಮೊದಲೇ ಶ್ರೀ ಮಠವು ಇಂಥ ವಿಶಿಷ್ಟ ಪರಿಕಲ್ಪನೆಯ ಯಶಸ್ವೀ ಕಾರ್ಯಕ್ರಮಗಳನ್ನು ಸಕಾರಾತ್ಮಕಗೊಳಿಸುತ್ತಿದೆ, ಆಧ್ಯಾತ್ಮಿಕ ವೈಜ್ಞಾನಿಕ ವಾಗಿ ಭಾರತ ಪ್ರಥಮ ಸ್ಥಾನ ಹೊಂದುವುದರಲ್ಲಿ ಸಂಶಯವಿಲ್ಲ ಎಂದು ಬಣ್ಣಿಸಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ,ಆದಿಚುಂಚನಗಿರಿ ಸಿದ್ಧಸಿಂಹಾಸನದ ಪೀಠಾಧಿಕಾರದ ದಶಮಾನೋತ್ಸವ ಪಟ್ಟಾಭಿಷೇಕ ನೆರವೇರಿಸಿದ ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿಯವರು “ಬಾಹ್ಯ ಬದುಕಿನ ಜಂಜಾಟ ಹಾಗೂ ಇತಿಮಿತಿಯ ಅರಿವಿನೊಂದಿಗೆ ಬದುಕುವುದೇ ಜೀವನದ ತಿಳಿವು” ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಪಾಂಡವಪುರ ಶಾಸಕ ಸಿ ಎಸ್ ಪುಟ್ಟರಾಜು, ನಾಗಮಂಗಲ ಶಾಸಕ ಕೆ ಸುರೇಶ ಗೌಡ ಮಾತನಾಡಿದರು. ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾದರು. ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮು, ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ ಎ ಶೇಖರ್, ಶ್ರೀ ಪ್ರಕಾಶನಾಥ ಸ್ವಾಮೀಜಿ ಸೇರಿದಂತೆ ಆದಿಚುಂಚನಗಿರಿ ಶಾಖಾ ಮಠಗಳ ಪೂಜ್ಯರು, ಪ್ರಾಂಶುಪಾಲರು, ಅಧಿಕಾರಿಗಳು ಹಾಗೂ ಇತರರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು