4:11 AM Monday6 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಕೇರಳದಲ್ಲಿ ವಾರಾಂತ್ಯ ಲಾಕ್‌ಡೌನ್‌ ಭಾನುವಾರಕ್ಕೆ ಮಾತ್ರ ಸೀಮಿತ: ಆ.15 ಮತ್ತು 22ರಂದು ಸ್ವಾತಂತ್ರ್ಯೋತ್ಸವ, ಓಣಂಗೆ ಓಪನ್

05/08/2021, 12:39

ತಿರುವನಂತಪುರ(reporterkarnataka.com): ಕೇರಳದಲ್ಲಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗಿದ್ದು, ವಾರಾಂತ್ಯ ಸಂಪೂರ್ಣ ಲಾಕ್ ಡೌನ್ ನ್ನು ಭಾನುವಾರ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ. 

ಎಲ್ಲ ವ್ಯಾಪಾರ ಮಳಿಗೆಗಳನ್ನು ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 7ರಿಂದ ರಾತ್ರಿ 9ರ ತನಕ ತೆರೆಯಲು ಅವಕಾಶ ನೀಡಲಾಗಿದೆ. ಜತೆಗೆ ಆಗಸ್ಟ್‌ 15ರಂದು ಹಾಗೂ ಆಗಸ್ಟ್‌ 22ರಂದು ವಾರಾಂತ್ಯ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಕೇರಳ ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ಹಾಗೂ ಓಣಂ ಹಿನ್ನಲೆಯಲ್ಲಿ ಆಗಸ್ಟ್ 22ರಂದು ಭಾನುವಾರ

ಆಗಿರುವುದರಿಂದ ಅಂದು ವಾರಾಂತ್ಯ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದ್ದು, ವ್ಯಾಪಾರ ಮಳಿಗೆಗಳನ್ನು ತೆರೆಯಬಹುದಾಗಿದೆ.

ಪ್ರಾರ್ಥನಾ ಮಂದಿರಗಳಲ್ಲಿ ವಿಸ್ತೀರ್ಣದ ಆಧಾರದಲ್ಲಿ ಭಕ್ತರಿಗೆ ಪ್ರವೇಶ ನೀಡಲಾಗುವುದು. ಒಂದು ಬಾರಿ 40 ಮಂದಿಗೆ ಮಾತ್ರ ಅವಕಾಶ. ವಿವಾಹ ಹಾಗೂ ಅಂತ್ಯಕ್ರಿಯೆ ಹಾಗೂ ಮರಣಾನಂತರ ಕಾರ್ಯಕ್ರಮಕ್ಕೆ ತಲಾ 20 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಹಬ್ಬದ ದಿನಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಕೋವಿಡ್ ಮಾನದಂಡ ಪಾಲಿಸಬೇಕು ಎಮದು ಸಚಿವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು