ಇತ್ತೀಚಿನ ಸುದ್ದಿ
2 ವರ್ಷಗಳ ಬಳಿಕ ಇಂದಿನಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಪುನಾರಂಭ
27/03/2022, 12:38

ಹೊಸದಿಲ್ಲಿ(reporterkarnataka.com): ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಇಂದಿನಿಂದ (ಮಾರ್ಚ್ 27) ಆರಂಭಗೊಂಡಿದೆ.
ನಿಗದಿತ ವೇಳಾಪಟ್ಟಿಯ ಪ್ರಕಾರ 40 ದೇಶಗಳ 60 ವಿಮಾನಯಾನ ಸಂಸ್ಥೆಗಳಿಗೆ ಭಾರತಕ್ಕೆ ಮತ್ತು ಭಾರತದಿಂದ ಇತರ ದೇಶಗಳಿಗೆ ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗಿದೆ.