2:08 AM Friday30 - January 2026
ಬ್ರೇಕಿಂಗ್ ನ್ಯೂಸ್
ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:…

ಇತ್ತೀಚಿನ ಸುದ್ದಿ

17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ | ಜನರ ಸ್ಪಂದನೆ ನೋಡಿ ಖುಷಿಯಾಗಿದೆ: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ

31/01/2026, 02:08

ಬೆಂಗಳೂರು(reporterkarnataka.com): ಬೆಂಗಳೂರಿನ ಲುಲು ಮಾಲ್‌ನಲ್ಲಿ ನಡೆಯುತ್ತಿರುವ 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಜನರು ನೀಡುತ್ತಿರುವ ಪ್ರತಿಕ್ರಿಯೆ ಕಂಡು ಬಹಳ ಖುಷಿಯಾಗಿದೆ ಎಂದು ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ʼಈ ವರ್ಷ ಸುಮಾರು 1.5-2 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆʼ ಎಂದರು.
ಕಳೆದ ವರ್ಷಕ್ಕಿಂತಲೂ ಅದ್ಭುತವಾಗಿ ಚಿತ್ರೋತ್ಸವ ನಡೆಯುತ್ತಿದೆ ಎಂದ ಅವರು, ʼಈ ವರ್ಷ ಇಷ್ಟು ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದರೆ ಕಳೆದ ವರ್ಷದ ಕಾರ್ಯಕ್ರಮವನ್ನು ಜನರು ಮೆಚ್ಚಿದ್ದಾರೆ ಎಂದರ್ಥ. ಈ ವರ್ಷ ವಿಜೃಂಭಣೆಯಿಂದ ಆಗುತ್ತಿದೆʼ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ರೆಸ್ಟೋರ್‌ ಮಾಡಿರುವ ಸಿನಿಮಾಗಳನ್ನು ಕೂಡ ಪ್ರದರ್ಶನ ಮಾಡಲಾಗುತ್ತಿದೆ. ಇದರ ಬಗ್ಗೆ ಅವರು, ʼಕಳೆದ ವರ್ಷವೇ ಇದನ್ನು ಮಾಡುವ ಯೋಚನೆಯಿತ್ತು. ಆದರೆ, ಸರಿಯಾದ ಕ್ಯಾಮರಾ ಸಿಗದಿದ್ದ ಕಾರಣ ಈ ವರ್ಷಕ್ಕೆ ಮುಂದೂಡಲಾಗಿತ್ತುʼ ಎಂದು ಹೇಳಿದ್ದಾರೆ. ಈ ವರ್ಷ ಜಾಗ ಬದಲಾವಣೆ ಬಗ್ಗೆ ಮಾತನಾಡಿದ ಅವರು, ʼಕಳೆದ ವರ್ಷದವರೆಗೂ ಒರಾಯನ್‌ ಅಲ್ಲಿ ಆಗುತ್ತಿತ್ತು. ಅದು ಖುಷಿಯಿದೆ. ಆದರೆ, ಅಲ್ಲಿ ಹೊರಗಿನ ಜನರಿಗೆ, ಸಾರ್ವಜನಿಕರಿಗೆ ಇಂತಹದೊಂದು ದೊಡ್ಡ ಮಟ್ಟದ ಫೆಸ್ಟಿವಲ್‌ ನಡೆಯುವುದು ಸರಿಯಾಗಿ ಗೊತ್ತಾಗುತ್ತಿರಲಿಲ್ಲ. ಹಾಗೆಯೇ ವಿಶಾಲವಾದ ಜಾಗವೂ ನಮಗೆ ಸಿಗುತ್ತಿರಲಿಲ್ಲ. ಇಲ್ಲಿ ಸಿನಿಮಾ ಸ್ಕ್ರೀನಿಂಗ್‌ ಜೊತೆಗೆ ಆಕರ್ಷಣೀಯ ಪ್ರದರ್ಶನಗಳಿಗೂ ಅವಕಾಶವಿದೆ. ಇದನ್ನು ಜನರು ಬಹಳ ಸಂಭ್ರಮದಿಂದ ಸ್ವೀಕರಿಸಿದ್ದಾರೆʼ ಎಂದು ಹೇಳಿದರು.
ಚಿತ್ರೋತ್ಸವ ಹೈಲೈಟ್ಸ್‌ ಲುಲು ಮಾಲ್‌ನ ಮೂರನೇ ಮಹಡಿಯಲ್ಲಿರುವ ಸುಮಾರು 11 ಸ್ಕ್ರೀನ್‌ಗಳಲ್ಲಿ ಸತತವಾಗಿ ಸಿನಿಮಾ ಪ್ರದರ್ಶನವಿರಲಿದೆ. ಕನ್ನಡ ಚಿತ್ರರಂಗಕ್ಕೆ 91 ವರ್ಷ ಆದ ಸಂಭ್ರಮದಲ್ಲಿ ಈವರೆಗಿನ ಪಯಣವನ್ನು ನೆನಪಿಸುವ ಛಾಯಾಚಿತ್ರಗಳ ಪ್ರದರ್ಶನ ಮಾಡಲಾಗಿದೆ. ಮೂರನೇ ಮಹಡಿಯ ಗೋಡೆ ಮೇಲೆ ಪ್ರಪಂಚದ ಶ್ರೇಷ್ಠ ಕಲಾವಿದರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ʼವಾಲ್‌ ಆಫ್‌ ಆನರ್‌ʼ ಮೂಲಕ ತಾರೆಯರ ಛಾಯಾಚಿತ್ರ ಹಾಕಲಾಗಿದೆ. ಕೆಳ ನೆಲಮಹಡಿಯಲ್ಲಿ ಗೋಷ್ಠಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ನಿತ್ಯವೂ ಈ ಸ್ಥಳದಲ್ಲಿ ವಿವಿಧ ವಿಷಯಗಳ ಕುರಿತು ಗೊಷ್ಠಿಗಳನ್ನು ಏರ್ಪಡಿಸಲಾಗಿದೆ. ಲುಲು ಮಾಲ್‌ ಹೊರಾಂಗಣ ಆವರಣದಲ್ಲಿ ವಿಶೇಷಾವಗಿ ಶೋಲೆ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಓಡಿಸಿದ್ದ ಬೈಕ್‌ ಪ್ರದರ್ಶನಕ್ಕೆ ಇಡಲಾಗಿದೆ. ಸಿನಿಮಾ ಪ್ರೇಮಿಗಳು, ಕಾಲೇಜು ವಿದ್ಯಾರ್ಥಿಗಳು, ಯವಕ-ಯುವತಿಯರು ಇದರ ಬಳಿಲ ಸೆಲ್ಫಿತೆಗೆದುಕೊಂಡು ಸಂಭ್ರಮಿಸಿದರು. ಹಾಗೆಯೇ ಇದೇ ಹೊರಾಂಗಣ ಆವರಣದಲ್ಲಿ ಓಪನ್‌ ಸ್ಕ್ರೀನಿಂಗ್‌ ಏರ್ಪಡಿಸಲಾಗಿದೆ.
ಏನಿದು ಓಪನ್‌ ಸ್ಕ್ರೀಣಿಂಗ್‌: ಹಳೇ ಕಾಲದಲ್ಲಿ 35 ಎಂಎಂ ಲೆನ್ಸ್‌ ಅಲ್ಲಿ ಟೆಂಟ್‌ ಸಿನಿಮಾ ನೆನಪಿಸುವಂತಹ ಒಪನ್‌ ಸ್ಕ್ರೀನಿಂಗ್‌ ಕೂಡ ಮಾಡಲಾಗಿದೆ. ಡಾ. ರಾಜಕುಮಾರ್‌, ಶಂಕರ್‌ನಾಗ್‌ ಸೇರಿದಂತೆ ಹಲವು ಸಿನಿಮಾಗಳನ್ನು ನಿತ್ಯವೂ ಸಂಜೆ 7 ಗಂಟೆಗೆ ಸರಿಯಾಗಿ ಲುಲು ಮಾಲ್‌ ಹೊರಾಂಗಣದ ಆವರಣದಲ್ಲಿ ಪ್ರದರ್ಶನ ಮಾಡಲಾಗುತ್ತದೆ. 35ಎಂಎಂ ಕ್ಯಾಮರ ತಂದು ಅದರ ಮೂಲಕವೇ ಪ್ರದರ್ಶನ ಮಾಡಲಾಗುತ್ತದೆ ಎನ್ನುವುದು ಆಕರ್ಷಕ ವಿಷಯ. ಇದಕ್ಕೆ ಯಾವುದೇ ಟಿಕೆಟ್‌ ಹಾಗೂ ಪಾಸ್‌ ಇಲ್ಲದರಿವುದರಿಂದ ಸಾರ್ವಜನಿಕರು ಕೂಡ ಬಂದು ಯಾವುದೇ ರೀತಿಯ ತೊಂದರೆ ಮಾಡದೆ ವೀಕ್ಷಣೆ ಮಾಡುವ ಅವಕಾಶವಿದೆ.
ಓಪನ್‌ ಸ್ಕ್ರೀನಿಂಗ್‌ ಅಲ್ಲಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳು:
31 ಜನವರಿ- ಒಂದಾನೊಂದು ಕಾಲದಲ್ಲಿ
1 ಫೆಬ್ರವರಿ- ಬಂಧನ
2 ಫೆಬ್ರವರಿ – ಪ್ರೇಮದ ಕಾಣಿಕೆ
3 ಫೆಬ್ರವರಿ- ಅಮೆರಿಕ ಅಮೆರಿಕ
4 ಫೆಬ್ರವರಿ- ಮುಂಗಾರು ಮಳೆ
5 ಫೆಬ್ರವರಿ- ಸತ್ಯ ಹರೀಶ್ಚಂದ್ರ

ಇತ್ತೀಚಿನ ಸುದ್ದಿ

ಜಾಹೀರಾತು