5:14 AM Friday2 - January 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಫೈಯರಿಂಗ್ | ಕೊಲೆ ಪ್ರಕರಣ ದಾಖಲಿಸಿ ಶಾಸಕರ ಕೂಡಲೇ ಬಂಧಿಸಿ: ಆರ್.ಅಶೋಕ್… ಬಳ್ಳಾರಿ ಗಲಭೆ ಸಿಬಿಐ ಅಥವಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ: ಮಾಜಿ ಸಿಎಂ… ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ನಡೆಯಲಿ: ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹ 6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಇತ್ತೀಚಿನ ಸುದ್ದಿ

100 ಹೆಚ್ಚು ಮರ-ಗಿಡಗಳು ಬೆಂಕಿಗಾಹುತಿ: ಕೈಚೆಲ್ಲಿ ಬೆಚ್ಚಗೆ ಕುಳಿತ ಅರಣ್ಯ ಇಲಾಖೆ; ಪರಿಸರ ಪ್ರೇಮಿಗಳ ಆಕ್ರೋಶ

27/02/2022, 17:27

ವಿ.ಜಿ.ವೃಷಭೇಂದ್ರ ಕೂಡ್ಲಗಿ ವಿಜಯನಗರ

info.reporterkarnataka@gmail.com  

ಜಿಲ್ಲೆಯ ಕೂಡ್ಲಿಗಿ ತಾಲೂಕಿಯಿಂದ ಹನಸಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಸಾಸಲವಾಡ ಗ್ರಾಮದ ಹತ್ತಿರದ ರಸ್ತೆ ಬದಿಯಲ್ಲಿರುವ (ಹೊಲದ ವಡ್ಡಿಗೆ ಹೊಂದಿಕೊಂಡಿರುವಂತಹ) ಸುಮಾರು 100ಕ್ಕೂ ಹಚ್ಚ ಹಸಿರ ಗಿಡಗಳು, ಹಲವು ಮರಗಳು ಹಾಡು ಹಗಲೇ ಬೆಂಕಿಗಾಹುತಿಯಾಗಿವೆ. 


ರಸ್ತೆಯಲ್ಲಿ ಹಾಕಿರುವ ತ್ಯಾಜ್ಯ ಕಸಕ್ಕೆ ಹಚ್ಚಿರುವ ಬೆಂಕಿ, ಹತ್ತಿರವಿದ್ದ ಹಚ್ಚಹಸಿರಾದ ನೂರಾರು ಗಿಡಗಳನ್ನು ಹಲವು ಮರಗಳನ್ನು ಸಂಪೂರ್ಣ ಭಸ್ಮವಾಗಿಸಿದೆ. ಬೆಂಕಿಯು ಸುಮಾರು ಒಂದು ಕಿಲೋ ಮೀಟರ್ ನಷ್ಟು ಆಕ್ರಮಿಸಿತ್ತು, ನೂರಾರು ಗಿಡ ಮರಗಳು ಸಂಪೂರ್ಣ ನಾಶ ವಾಗಿದ್ದು ಪಕ್ಷಿಗಳು ಜೀವ ಹಾಗೂ ಜೀವನ ರಕ್ಷಣೆಗಾಗಿ ಪರದಾಡುತ್ತಿದ್ದವು. ನೂರಾರು ಗಿಡ ಮರಗಳಲ್ಲಿ ವಾಸವಿದ್ದ ಪಕ್ಷಿಗಳು  ಗಿಡಗಳಲ್ಲಿನ ಆಶ್ರಯ ಕಳೆದು ಕೊಂಡು, ತಾವೂ ನಿರಾಶ್ರಿತರಾಗಿರುವುದನ್ನೇ ಮರೆತು. ಸುಡುತ್ತಿರುವ ಗಿಡ ಮರಗಳನ್ನು ಕಾಪಾಡುವ ಪ್ರಯತ್ನಿಸುತ್ತಿವೆಯೋ ಎನ್ನು ರೀತಿಯಲ್ಲಿ, ಸುತ್ತ ಹರಡಿರುವ ಹೊಗೆಯ ಮದ್ಯದಲ್ಲಿಯೂ ಹತ್ತಾರು ಹಕ್ಕಿಗಳು ಅತ್ತಿಂದತ್ತ ಆತಂಕದಿಂದ ಹಾರಾಡುತ್ತಿದ್ದವು. ಕೊನೇ ಕ್ಷಣದಲ್ಲಿ ಗಮನಿಸಿದ ಇದನ್ನ ಗಮನಿಸಿದ ಪತ್ರಕರ್ತ ಸಾಲುಮನಿ ರಾಘವೇಂದ್ರ ಅವರು, ಜರುಗುತ್ತಿರುವ ಮಾರಣ ಹೋಮದ ಕುರಿತು ಖುದ್ದು ಅರಣ್ಯ ಇಲಾಖೆಗೆ ಮೊಬೈಲ್ ಮುಖಾಂತರ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಆದರೆ ಯಾವುದೂ ಪ್ರಯೋಜನವಾಗಿಲ್ಲ, ಅಂತಿಮವಾಗಿ  ಅವರು ಹರಡುತ್ತಿರುವ ಬೆಂಕಿ ಯನ್ನ ನಂದಿಸಿ ಪರಿಸರ ಪ್ರೇಮ ತೋರಿದ್ದಾರೆ. ಇದು ಕೇವಲ ಪ್ರತ್ಯಕ್ಷ ಸಾಕ್ಷಿ ಆದರೆ ತಾಲೂಕಿನ ಹಲವೆಡೆಗಳಲ್ಲಿ, ಅರಣ್ಯದಲ್ಲಿ ಹಾಗೂ ಗುಡ್ಡಗಾಡು ಅರಣ್ಯಗಳಲ್ಲಿ ಇದೇ ರೀತಿ ಆಗಾಗ್ಗೆ ನೂರಾರು ಗಿಡ ಮರಗಳು ಬೆಂಕಿಗಾಹುತಿಯಾಗುತ್ತಿವೆ. ಗಿಡ ಮರಗಳನ್ನು. ಮಕ್ಕಳಂತೆ ಕಾಪಾಡುತ್ತೇವೆಂದು ಪ್ರಮಾಣ ಮಾಡಿ ತಿಂಗಳಾ ಸಂಬಳ ಪಡೆಯೋ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಯರು.ಈ ರೀತಿ ಗಿಡ ಮರಗಳು ಸುಟ್ಟು ಕರಕಲಾಗುತ್ತಿದ್ದರೂ ಗಮನಿಸಿಲ್ಲವೆಂದರೆ,ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ಏನೂ ಪ್ರಯೋಜವಾಗಿಲ್ಲ. ಹಾಗಾದರೆ ಅರಣ್ಯ ಇಲಾಖೆಯರು ಮಾಡುತ್ತಿರುವ ಘನಾಂದಾರಿ ಕೆಲಸವಾದರೂ ಏನು.!?, ಅರಣ್ಯ ಸಂಪತ್ತನ್ನ ಕಾಯುತ್ತೇವೆಂದು ಸಂಬಳಪಡೆಯುವ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ,ಏನನ್ನು ಕಾಯುತ್ತಿದ್ದಾರೆ.!? ಪರಿಸರದ ಶಾಪಕ್ಕೆ ಅವರು ಹಾಗೂ ಅವರ ಸಂಬಳದಲ್ಲಿ ಬದುಕುತ್ತಿರುವ  ಕುಟುಂಬ  ಒಳಗಾಗದೆ ಇರದು ಎಂದು. ಪರಿಸರ ಪ್ರೇಮಿಗಳು ಹಾಗೂ ಗ್ರಾಮಸ್ಥರು ನಾಗರೀಕರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ ಮತ್ತು ಘಟನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಕೂಡ್ಲಿಗಿ ತಾಲೂಕಿನ ಹಲವೆಡೆಗಳಲ್ಲಿ ಈ ರೀತಿಯಲ್ಲಿ, ಗಿಡ ಮರಗಳು ಗುಡ್ಡ ಗಾಡು ಪ್ರದೇಶದಲ್ಲಿನ ಅರಣ್ಯ ಬೆಂಕಿಗಾಹುತಿ ಯಾಗುತ್ತಿರುವ ಘಟನೆಗಳು ಜರುಗುತ್ತಿರುತ್ತವೆ. ಇಲಾಖೆಯ ಗಮನಕ್ಕೆ ಬಂದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ, ಎನ್ನುತ್ತಾರೆ ಗ್ರಾಮಸ್ಥರು ಹಾಗೂ ಟಿ ಪರಸಪ್ಪ ವಕೀಲರು ಅಧ್ಯಕ್ಷರು ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಸಮಿತಿ ಕೂಡ್ಲಿಗಿ ಹಾಗೂ ಪರಿಸರವಾದಿಗಳು.ಪರಿಸರ ದಿನ ಅರಣ್ಯ ದಿನಗಳ ಹಾಗೂ,ಕಾರ್ಯಕ್ರಮಗಳ ಉದ್ಘಾಟನೆಗಳ ಸಂದರ್ಭದಲ್ಲಿ. ಪೇಪರ್ ಹಾಗೂ ಮೀಡಿಯಾಗಳಿಗೆ ಸಸಿಗಳಿಗೆ ನೀರಾಕುವ ಮೂಲಕ.ಬಿಟ್ಟಿ ಪ್ರಚಾರಕ್ಕೆ ಫೋಸ್ ಕೊಡೋ ಅರಣ್ಯ ಇಲಾಖೆ ಅಧಿಕಾರಿಗಳು,  ಗಣ್ಯರು, ಜನಪ್ರತಿನಿಧಿಗಳು  ಹಾಗೂ ಅಧಿಕಾರಿಗಳು ಸೋಂಬೇರಿ  ಅರಣ್ಯ ಇಲಾಖೆಗೆ ಬುದ್ದಿಕಲಿಸಬೇಕಿದೆ.  ಇಂತಹ ಬೆಂಕಿ ಅವಘಡಗಳಲ್ಲಿ  ನೂರಾರು ಗಿಡ ಮರಗಳು,ಬೆಂಕಿಗಾಹುತಿ ಯಾಗುತ್ತಿದ್ದರೂ ಗಮನಸಿದ ಅಧಿಕಾರಿಗಳ ವಿರುದ್ಧ ಶಿಸ್ಥು ಕ್ರಮ ಜರುಗಿಸಬೇಕಿದೆ ಎನ್ನತ್ತಾರೆ ಪ್ರಜ್ಞಾವಂತರು ಹಾಗೂ ಪರಿಸರ ಪ್ರೇಮಿಗಳು

ಇತ್ತೀಚಿನ ಸುದ್ದಿ

ಜಾಹೀರಾತು