3:39 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

10 ಲಕ್ಷ ನೀಡುವಂತೆ ಕ್ವಾರೇ ಮಾಲೀಕನಿಗೆ ಬೆದರಿಕೆ: ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

31/10/2021, 09:26

ಉಡುಪಿ(reporterkarnataka.com):
ಬೆಳ್ಮಣ್ ಪರಿಸರದ ಕ್ವಾರೇ ಮಾಲೀಕರೊಬ್ಬರಿಗೆ 10 ಲಕ್ಷ ನೀಡುವಂತೆ ಬೆದರಿಕೆಯೊಡ್ಡಿದ ಘಟನೆ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು ಎಂಬಾತ 10 ಲಕ್ಷ ಬೇಡಿಕೆ ಇಟ್ಟಿರುವುದಾಗಿ ಶ್ರೀದುರ್ಗಾ ಕ್ರಶರ್‌ನ ಮಾಲೀಕರಾದ ಬೆಳ್ಮಣ್ ಪೇರಲ್‌ಪಾದೆಯ ನಿತ್ಯಾನಂದ ಶೆಟ್ಟಿ ಕಾರ್ಕಳ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ರವಿ ಶೆಟ್ಟಿ ಸೆ. 10ರಂದು ನನ್ನ ಮೊಬೈಲ್‌ಗೆ ಕರೆ ಮಾಡಿ, ನಾನು ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಎಂದು ಪರಿಚಯ ಮಾಡಿಕೊಂಡಿದ್ದನು. ಆ ಬಳಿಕ ಅಕ್ಟೋಬರ್ 26ರಂದು ನಾನು ಬೆಳ್ಮಣ್ ಪೆಟ್ರೋಲ್ ಬಂಕ್ ಬಳಿಯಲ್ಲಿ ಇದ್ದಾಗ ಇನೋವಾ ಕಾರಿನಲ್ಲಿ ರವಿ ಶೆಟ್ಟಿ ಅಲ್ಲಿಗೆ ಬಂದಿದ್ದನು. ನಿಮ್ಮ ಹಾಗೂ ನಿಮ್ಮ ಪಕ್ಕದಲ್ಲಿರುವ ಜೆ.ಎಲ್. ಕ್ರಶರ್‌ನ ಮಾಲೀಕ ಲ್ಯಾನ್ಸಿ ಡಿಕೋಸ್ತಾ ಒಟ್ಟು ಸೇರಿ 10 ಲಕ್ಷ ಮೊತ್ತವನ್ನು ತನಗೆ ನೀಡಬೇಕು. ಇಲ್ಲದಿದ್ದರೆ ನಿಮ್ಮ ಕ್ರಶರನ್ನು ಮುಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದನು ಎಂದು ನಿತ್ಯಾನಂದ ದೂರಿನಲ್ಲಿ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ನನ್ನ ಕ್ರಶರ್ ಬಳಿ ಮೂವರು ಗಂಡಸರು ಹಾಗೂ ಓರ್ವ ಮಹಿಳೆ ಕಾರಿನಲ್ಲಿ ಆಗಮಿಸಿ, ಕ್ರಶರ್‌ನ ಹಾಗೂ ಪಾದೆಯ ಫೋಟೋ ತೆಗೆಯುತ್ತಿರುವ ವಿಷಯ ತಿಳಿಯಿತು. ಸ್ಥಳಕ್ಕೆ ಹೋಗಿ ನೋಡಿದಾಗ ರವಿ ಶೆಟ್ಟಿ ಹಾಗೂ ಆತನ ಸಹಚರರು ಯಾವುದೋ ದುರುದ್ದೇಶ ಪೂರಕವಾಗಿ ಈ ಕೃತ್ಯ ನಡೆಸುತ್ತಿದ್ದು, ಅವರಲ್ಲಿ ವಿಚಾರಿಸಿದಾಗಿ 5 ಲಕ್ಷ ಬೇಡಿಕೆ ಮುಂದಿಟ್ಟಿದ್ದಾರೆ. ಇಲ್ಲವಾದರೆ ಕ್ರಶರ್‌ರನ್ನು ಮುಚ್ಚಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು