11:36 PM Wednesday11 - March 2026
ಬ್ರೇಕಿಂಗ್ ನ್ಯೂಸ್
ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌…

ಇತ್ತೀಚಿನ ಸುದ್ದಿ

ಮೆಟಾ ಸರ್ವರ್ ಸಮಸ್ಯೆ ಪರಿಹಾರ: ಮತ್ತೆ ತೆರೆದುಕೊಂಡ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಥ್ರೆಡ್ಸ್; ಬಳಕೆದಾರರಲ್ಲಿ ಮೊಗದಲ್ಲಿ ಮಂದಹಾಸ

05/03/2024, 22:16

ಮುಂಬೈ(reporterkarnataka.com): ಮೆಟಾದಲ್ಲಿ ಕಾಣಿಸಿಕೊಂಡಿದ್ದ ಸರ್ವರ್ ಸಮಸ್ಯೆ ಪರಿಹಾರಗೊಂಡಿದ್ದು, ಲಾಗ್ ಔಟ್ ಆಗಿದ್ದ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಥ್ರೆಡ್ಸ್ ಆಟೋಮ್ಯಾಟಿಕ್ ಆಗಿ ಲಾಗ್ ಇನ್ ಆಗಿದೆ. ಹಾಗೆ ಬಳಕೆದಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಸರ್ವರ್ ಸಮಸ್ಯೆಯಿಂದ
ಬಳಕೆದಾರರಿಗೆ ಏಕಾಏಕಿಯಾಗಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು.
ಫೇಸ್‌ಬುಕ್ , ಮೆಸೇಂಜರ್, ಇನ್‌ಸ್ಟಾಗ್ರಾಂ ಬಳಕೆದಾರರು ಇದೀಗ ಲಾಗಿನ್ ಸಮಸ್ಯೆಯಿಂದ ಪರದಾಡುತ್ತಿದ್ದರು.
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಥ್ರೆಡ್ಸ್ ಲಾಗ್ ಔಟ್ ಆಗಿತ್ತು. ಬಳಿಕ ಹೊಸ ಪಾಸ್‌ವರ್ಡ್ ಸಹಿತ ಏನೇ ಮಾಡಿದರೂ ಲಾಗಿನ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಈ ಕುರಿತು ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ತಮ್ಮ ಅಳಲು ತೋಡಿಕೊಂಡಿದ್ದರು.
ಭಾರತ ಮಾತ್ರವಲ್ಲ ವಿಶ್ವದ
ಹಲವು ದೇಶಗಳಲ್ಲಿ ಮೆಟಾ ಸೇವೆ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಡೌನ್ ಡಿಟೆಕ್ಟರ್ ಡಾಟ್ ಕಾಮ್ ತಾಂತ್ರಿಕ ಸಮಸ್ಯೆ ಕುರಿತು ಮಾಹಿತಿ ನೀಡಲಾಗಿತ್ತು. ಮೆಟಾದ ಕೆಲ ಸೇವೆಗಳು ಸ್ಥಗಿತಗೊಂಡಿದೆ. ತಾಂತ್ರಿಕ ಸಮಸ್ಯೆಯಿಂದ ಬಳಕೆದಾರರು ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಅನ್ನೋ ಮಾಹಿತಿಯನ್ನು ನೀಡಿತ್ತು. ಟ್ವಿಟರ್‌ನಲ್ಲಿ ಈ ಕುರಿತು ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
300,000 ಕ್ಕೂ ಹೆಚ್ಚು ಬಳಕೆದಾರರು ಫೇಸ್‌ಬುಕ್ ಸಮಸ್ಯೆ ಕುರಿತು ಅಸಮಾಧಾನ ತೋಡಿಕೊಂಡಿದ್ದರು. 20,000ಕ್ಕೂ ಹೆಚ್ಚು ಬಳಕೆದಾರರು ಇನ್‌ಸ್ಟಾಗ್ರಾಂ ಸಮಸ್ಯೆ ಕುರಿತು ದೂರು ನೀಡಿದ್ದರು. ಮಾರ್ಚ್ 5ರಂದು ಮೆಟಾದ ಫೇಸ್‌ಬುಕ್ ಸೇರಿದಂತೆ ಇತರ ಕೆಲ ಸೇವೆಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ ಅನ್ನೋದನ್ನು ಡೌನ್‌ಡಿಟೆಕ್ಟರ್ ಹೇಳಿದೆ.
ಫೇಸ್‌ಬುಕ್ ಡೌನ್ ಕುರಿತು ಮೆಟಾ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು