12:38 AM Friday25 - September 2026
ಬ್ರೇಕಿಂಗ್ ನ್ಯೂಸ್
ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ವಿಜಯನಗರ | ಹೊಸಪೇಟೆ ಬಳಿ ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವು *ಕಾಡಾನೆ ನಿಯಂತ್ರಣ ಚಟುವಟಿಕೆಗೆ ವಾಹನಗಳ ಕೊಡುಗೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕೇಂದ್ರ ಹಣಕಾಸು… ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ: ಮಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆ ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ*

ಇತ್ತೀಚಿನ ಸುದ್ದಿ

ಪಂಜಾಬ್‌: ಆಪರೇಶನ್ ಕಮಲ ಸಂಚಿಗೆ ರಾಜ್ಯಪಾಲರ ಸಾಥ್: ಆಮ್ ಆದ್ಮಿ ಪಾರ್ಟಿ ಆರೋಪ

25/09/2022, 13:38

ಚಂಡೀಗಢ(reporterkarnataka.com),: ಪಂಜಾಬ್‌ನಲ್ಲಿ ಆಪರೇಶನ್ ಕಮಲ ನಡೆಸಲು ಸಂಚು ಹೂಡಿರುವ ಬಿಜೆಪಿಯ ಅಣತಿಯಂತೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ನಡೆದುಕೊಳ್ಳುತ್ತಿದ್ದಾರೆಂದು ಭಗವಂತ ಮಾನ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರಕಾರ ಆರೋಪಿಸಿದೆ.

ಬಿಜೆಪಿಯು ಅಧಿಕಾರದಲ್ಲಿರದ ರಾಜ್ಯಗಳಲ್ಲಿ ವಿರೋಧ ಪಕ್ಷವಾಗಿ ವರ್ತಿಸುವ ಹಾಗೂ ಆಡಳಿತಾರೂಢ ಸರಕಾರವು ಕೆಲಸ ಮಾಡದಂತೆ ತಡೆಯುವ ಅದರ ಅಜೆಂಡಾವನ್ನು ಜಾರಿಗೊಳಿಸುವ ಹೊಣೆಯನ್ನು ರಾಜ್ಯಪಾಲರಿಗೆ ವಹಿಸಲಾಗಿದೆ ಎಂದು ಪಂಜಾಬ್‌ನ ಇಂಧನ ಸಚಿವ ಅಮಾನ್ ಆರೋರಾ ಆರೋಪಿಸಿದ್ದಾರೆ. ಪಂಜಾಬ್‌ನ ಆಪ್ ಸರಕಾಕ್ಕೆ ರಾಜ್ಯಪಾಲರು ಕಳುಹಿಸಿರುವ ನೋಟಿಸ್‌ಗಳು, ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಸರಕಾರವು ಕಾರ್ಯಾಚರಿಸುವುದಕ್ಕೆ ತಡೆಯೊಡ್ಡಿವೆ ಎಂದವರು ಆರೋಪಿಸಿದರು.

“ಕಳೆದ 75 ವರ್ಷಗಳಲ್ಲಿ ಯಾವುದೇ ರಾಷ್ಟ್ರಪತಿಯವರಾಗಲಿ ಅಥವಾ ರಾಜ್ಯಪಾಲರಾಗಲಿ, ಅಧಿವೇಶವನ್ನು ಕರೆಯುವುದಕ್ಕೆ ಮುನ್ನ ಶಾಸನಸಭೆಯ ಕಲಾಪಗಳ ಪಟ್ಟಿಯನ್ನು ನೀಡುವಂತೆ ಕೇಳಿರಲಿಲ್ಲ. ಆದರೆ ಈಗ ಇದೇ ಮೊದಲ ಬಾರಿಗೆ ಇದು ನಡೆದಿದೆ. ಯಾಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಆಮ್ ಆದ್ಮಿ ಸರಕಾರವು ಶ್ರಮಿಸುವುದನ್ನು ತಡೆಗಟ್ಟಲು ಪಂಜಾಬ್‌ನ ರಾಜ್ಯಪಾಲರು ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ” ಎಂದು ಆಮನ್ ಆರೋರಾ ಆರೋಪಿಸಿದರು.

ಇತ್ತೀಚೆಗೆ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಮುಖ್ಯಮಂತ್ರಿ ಭಗವಂತ ಮಾನ್ ಅವರಿಗೆ ಪತ್ರವೊಂದನ್ನು ಬರೆದು, ಸರಕಾರದ ಕಾನೂನು ಸಲಹೆಗಾರರು ತನಗೆ ಸಮರ್ಪಕವಾಗಿ ವಿವರಣೆಗಳನ್ನು ನೀಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ದಿಲ್ಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ಆಪ್ ಸರಕಾರವು ಕಾರ್ಯನಿರ್ವಹಿಸದಂತೆ ತಡೆಯುತ್ತಿದ್ದರೆ, ಪಂಜಾಬ್‌ನಲ್ಲಿ ಈ ಕೆಲಸವನ್ನು ಬಿಜೆಪಿಯು ರಾಜ್ಯಪಾಲರಿಗೆ ವಹಿಸಿದೆ. ಆಪ್‌ನ ಜನಪ್ರಿಯತೆಯಿಂದ ಅವರು ಹೆದರಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷವು ಜನತೆಯ ಪರವಾದ ವಿಷಯಗಳನ್ನು ಪ್ರಸ್ತಾವಿಸದಂತೆ ತಡೆಯಲು ಬಿಜೆಪಿಯು ಎಲ್ಲಾ ವಿಧಾನಗಳನ್ನು ಅನುಸರಿಸುತ್ತಿದೆ ಎಂದವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು