5:19 PM Sunday7 - December 2025
ಬ್ರೇಕಿಂಗ್ ನ್ಯೂಸ್
Bagalkote | ಸಿದ್ಧಶ್ರೀ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪೂರ್ವಭಾವಿ ಸಭೆ : ಚಲನಚಿತ್ರಗಳ ಆಹ್ವಾನ Kodagu | ಮಡಿಕೇರಿ: ಆಕಸ್ಮಿಕ ಗುಂಡಿನ ಚೂರು ತಗುಲಿ ಇಬ್ಬರು ಯುವಕರಿಗೆ ಗಾಯ ರಾಷ್ಟ್ರವ್ಯಾಪಿ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಸಚಿವ ಡಾ. ಶರಣಪ್ರಕಾಶ್‌ ಒತ್ತಾಯ ಸೌರಶಕ್ತಿಗೆ 3ನೇ ಅತಿದೊಡ್ಡ ಕೊಡುಗೆದಾರ ಭಾರತ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Shivamogga | ಬಸ್ ಚಾಲಕನ ಅತೀ ವೇಗ, ಅಜಾಗರೂಕತೆ: ಬೈಕ್ ಸವಾರ ಗಂಭೀರ ತೋಟಕ್ಕೆ ತೆರಳಿದ್ದ ಸಂದರ್ಭ ಏಕಾಏಕಿ ಹೆಜ್ಜೇನು ದಾಳಿ: ಮಹಿಳೆ ಸಹಿತ 3 ಮಂದಿಗೆ… ವಿರಾಜಪೇಟೆ | ಕ್ಷುಲ್ಲಕ ಕಾರಣ: ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ಯುವಕರ ಮಾರಮಾರಿ..!! “ಸ್ವಸ್ಥ ಮೈಸೂರು” ಅಭಿಯಾನ ಒಪ್ಪಂದಕ್ಕೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಹಿ New Delhi | ಬೆಳ್ಳಿ ವಸ್ತು, ಆಭರಣಗಳಿಗಿನ್ನು BIS ಹಾಲ್‌ಮಾರ್ಕ್‌, HUID ಕಡ್ಡಾಯ ರಾಜ್ಯ ಸರಕಾರ ಅನ್ನದಾತ ರೈತನ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಮಾಜಿ ಗೃಹ ಸಚಿವ…

ಇತ್ತೀಚಿನ ಸುದ್ದಿ

ಕುದ್ರೋಳಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ನಾಳೆ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರ

25/01/2025, 22:08

ಮಂಗಳೂರು(reporterkarnataka.com):ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಲಾಲ್‌ಬಾಗ್ ಶಾಖೆಯ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಕುದ್ರೋಳಿ ಯುವಕ ಸಂಘ (ರಿ) ಕುದ್ರೋಳಿ, ಇವರ ಜಂಟಿ ಸಹಯೋಗದೊಂದಿಗೆ ಎ.ಜೆ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮಂಗಳೂರು ಇದರ ನುರಿತ ವೈದರ ತಂಡದೊಂದಿಗೆ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರ ವನ್ನು ಜ.26ರಂದು ಪೂರ್ವಾಹ್ನ ಸಮಯ 9.30ರಿಂದ ಮಧ್ಯಾಹ್ನ 12.30ರವರೆಗೆ ನಗರದ ಕುದ್ರೋಳಿಯ ಕುದ್ರೋಳಿ ಯುವಕ ಸಂಘದಲ್ಲಿ ಆಯೋಜಿಸಲಾಗಿದೆ.
ಈ ವೈದ್ಯಕೀಯ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣೆ , ಮಧುಮೇಹ ತಪಾಸಣೆ , ಬಿ. ಪಿ ತಪಾಸಣೆ , ಜನರಲ್ ವೈದ್ಯಕೀಯ ಸಮಾಲೋಚನೆ, ಇ.ಸಿ.ಜಿ , ಕಿವಿ, ಮೂಗು, ಗಂಟಲು ತಪಾಸಣೆ, ಬಾಯಿ ಮತ್ತು ಹಲ್ಲುಗಳ ಆರೋಗ್ಯ ತಪಾಸಣೆ, ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು, ರೋಗಗ್ರಸ್ಥ ಹಲ್ಲುಗಳನ್ನು ಕೀಳುವುದು, ಹಲ್ಲುಗಳನ್ನು ಶುಚಿ ಮಾಡುವುದು, ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ ನೀಡುವುದು ಹಾಗೂ ಇತರ ವೈದ್ಯಕೀಯ ಸೇವೆಗಳು ಲಭ್ಯವಿದೆ.
ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು