ಇತ್ತೀಚಿನ ಸುದ್ದಿ
ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ
07/11/2025, 20:32
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸುಂಟಿಕೊಪ್ಪದ ಖಾಸಗಿ ಕ್ಲಿನಿಕ್ ವೈದ್ಯರು ಯಶೋಧರ ಪೂಜಾರಿ ಅವರು ನೀಡಿದ ಇಂಜೆಕ್ಷನ್ ಅಡ್ಡ ಪರಿಣಾಮ ಬೀರಿ 1ನೇ ವಿಭಾಗದ ನಿವಾಸಿ ವಿನೋದ್ ಎಂಬುವವರು ಅನುಮಾನಾಸ್ಪದವಾಗಿ ನಿನ್ನೆ ಸಂಜೆ ಮರಣ ಹೊಂದಿರುವ ಹಿನ್ನೆಲೆಯಲ್ಲಿ,ಸದರಿ ವೈದ್ಯರ ವಿರುದ್ದ ಕ್ರಮಕೈಗೊಂಡು ಅವರ ಕ್ಲಿನಿಕ್ ಅನ್ನು ಮುಚ್ಚಿಸಬೇಕು ಮತ್ತು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು.




ಎಂದು ಒತ್ತಾಯಿಸಿ ಮೃತನ ಸಂಬಂಧಿಕರು ಹಾಗೂ ಕೆಲ ಸಾರ್ವಜನಿಕರು ಕ್ಲಿನಿಕ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಂಬುಲೆನ್ಸ್ ನಲ್ಲಿ ಮೃತ ದೇಹವನ್ನು ಇಟ್ಟು ಪ್ರತಿಭಟನೆ ನಡೆಸುತ್ತಿರುವುದು.













