ಇತ್ತೀಚಿನ ಸುದ್ದಿ
ಯುವವಾಹಿನಿ ಕಂಕನಾಡಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರು ನಮನ
16/09/2022, 08:55

ಮಂಗಳೂರು(reporterkarnataka.com):ಯುವವಾಹಿನಿ ಕಂಕನಾಡಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುನಮನ ಕಾರ್ಯಕ್ರಮ ಘಟಕದ ಕಚೇರಿಯಲ್ಲಿ ಘಟಕದ ಸಾಪ್ತಾಹಿಕ ಸಭೆಯಲ್ಲಿ ಆಚರಿಸಲಾಯಿತು.
ಘಟಕದ ಅಧ್ಯಕ್ಷ ಪೃಥ್ವಿರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಘಟಕದ ಮಾಜಿ ಅಧ್ಯಕ್ಷರು ಗಳಾದ ಶೇಖರ್ ಅಮೀನ್, ಹರೀಶ್ ಸನಿಲ್, ಗೋಪಾಲ ಎಂ.ಪೂಜಾರಿ, ಭವಿತ್ ರಾಜ್, ಸುರೇಶ್.ಎಂ.ಎಸ್. ಹಾಗೂ ಸುಮಾ ವಸಂತ್, ನಯನ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಅತಿಥಿಗಳನ್ನು, ಶಿಕ್ಷಕರನ್ನು ಹಾಗೂ ಸದಸ್ಯರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಸುರೇಖಾ ಮೋಹನ್ ಪದಗ್ರಹಣ ಹಾಗೂ ಜಂಟಿ ಸಭೆಯ ವರದಿ ಮಂಡಿಸಿ ಅನುಮೋದನೆ ಪಡೆದರು. ನಂತರ ಪರಿಸರದ ನಿವೃತ್ತ ಶಿಕ್ಷಕರಾದ ಯು.ಸದಾಶಿವ ರಾವ್,
ಪುಷ್ಪ, ಜಯಶ್ರೀ ಹಾಗೂ ಕೇಂದ್ರ ಸಮಿತಿಯ ಸಾರಥ್ಯದಲ್ಲಿ ಉಡುಪಿ ಘಟಕದ ಆತಿಥ್ಯದಲ್ಲಿ ಜರಗಿದ ಡೆನ್ನಾನ ಡೆನ್ನಾನ ಸ್ಪರ್ಧಾ ಕಾರ್ಯಕ್ರಮಕ್ಕೆ ನಮ್ಮ ಘಟಕದ ಸದಸ್ಯರಿಗೆ ನೃತ್ಯರೂಪಕ ನಿರ್ದೇಶನ ಮಾಡಿದ ಪ್ರವೀಣ್ ಬಜಾಲ್ ಹಾಗೂ
ದಿನಕರ್ ಪೂಜಾರಿ ಅವರುಗಳನ್ನು ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ಶಿಕ್ಷಕರಾದ ಯು. ಸದಾಶಿವ ರಾವ್ ಮಾತನಾಡಿ, ನಮ್ಮಲ್ಲಿರುವ ಮೆಕಾಲೆ ಶಿಕ್ಷಣ ಪದ್ಧತಿಯ ಬದಲು ಮೌಲ್ಯಯುತ ಶಿಕ್ಷಣ ನೀಡಬೇಕು. ಮೊದಲ ಗುರುವಾಗಿರುವ ಜನನಿ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡಬೇಕು. ಮೊಬೈಲ್ ಬಳಕೆಯನ್ನು ವಿದ್ಯಾರ್ಜನೆಗೆ ಅನುಕೂಲವಾಗುವಂತೆ ಬಳಸಬೇಕು ಎಂದು ತಿಳಿ ಹೇಳಿ ಕಂಕನಾಡಿ ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಘಟಕದ ವತಿಯಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳಾಗಲಿ ಎಂದು ಹಾರೈಸಿದರು.
ಸನ್ಮಾನ ಪಡೆದ ಮತ್ತೊಬ್ಬ ಅಂಗನವಾಡಿ ಶಿಕ್ಷಕಿ ಪುಷ್ಪರವರು ಸದುದ್ದೇಶದಿಂದ ಸಾರ್ವತ್ರಿಕವಾಗಿ ಉಪಯೋಗಕ್ಕೆ ಬರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಿರಿಯ ಕಿರಿಯರೆಲ್ಲರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ದಿಟ್ಟ ಹೆಜ್ಜೆಯೊಂದಿಗೆ ಕಾರ್ಯಕ್ರಮ ನಡೆಸಬೇಕೆಂದು ಸದಸ್ಯರೆಲ್ಲರಿಗೂ ಕಿವಿ ಮಾತು ನೀಡಿದರು.
ನಮಗೆ ತಿಳುವಳಿಕೆ ನೀಡುವ ಪ್ರತಿಯೊಬ್ಬರೂ ಕೂಡಾ ಶಿಕ್ಷಕರು ಎಂಬ ಶ್ರೇಷ್ಠ ಮನೋಭಾವದೊಂದಿಗೆ ಘಟಕದ ಅಧ್ಯಕ್ಷರಾದ ಪೃಥ್ವಿರಾಜ್ ನಮ್ಮ ಘಟಕದ ಎಲ್ಲಾ ಮಾಜಿ ಅಧ್ಯಕ್ಷರುಗಳನ್ನು, ಘಟಕದ ಶಿಕ್ಷಕರನ್ನು ಹಾಗೂ ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ಡಾ. ರಾಕೇಶ್ ಕುಮಾರ್ ಇವರಿಗೆ ಹೂ ನೀಡಿ ಗೌರವಿಸಲಾಯಿತು.
ನಂತರ ಘಟಕದ ಹೊಸ ಸದಸ್ಯರನ್ನು ಹೂ ನೀಡಿ ಅಭಿನಂದಿಸಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ರಚನಾ ಶೇಖರ್ ನೆರವೇರಿಸಿದರು. ಘಟಕದ ಕಾರ್ಯದರ್ಶಿ ಸುರೇಖಾ ಮೋಹನ್ ವಂದಿಸಿದರು.