4:44 AM Monday21 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ… ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ದವಾಗಿ ನಡೆಯಲಿ: ಮಾಜಿ… ಧರ್ಮಸ್ಥಳ ಪ್ರಕರಣ; ಎಸ್‌ಐಟಿ ರಚನೆ ಸ್ವಾಗತಾರ್ಹ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ… ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ…

ಇತ್ತೀಚಿನ ಸುದ್ದಿ

ಯುವ ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯ: ಅಂತಾ ರಾಜ್ಯಮಟ್ಟದ ಮಧುಕವಿ ಗೋಷ್ಠಿಯಲ್ಲಿ ಪ್ರೊ. ಆರ್ತಿಕಜೆ

02/12/2022, 12:38

ಪುತ್ತೂರು(reporterkarnataka.com): ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ದ.ಕ.ಜಿಲ್ಲಾ ಜೇನು ವ್ಯವಸಾಯ ಸಹಕಾರಿ ಸಂಘ ನಿಯಮಿತ ಪುತ್ತೂರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದ.ಕ.ಜಿಲ್ಲಾ ಘಟಕ , ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ದ.ಕ.ಜಿಲ್ಲೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ತಾಲೂಕು ಘಟಕ ಸಹಭಾಗಿತ್ವದಲ್ಲಿ ಅಂತಾರಾಜ್ಯ ಮಟ್ಟದ “ಮಧು”ಕವಿಗೋಷ್ಠಿ ಯು ಪುತ್ತೂರಿನ ಜೇನು ಸೊಸೈಟಿಯ ಮಾಧುರಿ ಸೌಧದ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಸಾಹಿತಿಗಳಾದ ಪ್ರೊ. ವಿ ಬಿ ಆರ್ತಿ ಕಜೆ ಅವರು ಮಾತನಾಡಿ, ಉದಯೋನ್ಮುಖ ಆಸಕ್ತ ಯುವ ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯವಿದೆ. ಗಡಿನಾಡು ಪ್ರದೇಶದ ಸಾಹಿತಿಗಳನ್ನು ಹಾಗೂ ದೂರದ ಹಾಸನ,ಕಡಬ, ಮಂಗಳೂರು ಪ್ರದೇಶದಿಂದ ಸುಮಾರು 50 ಸಾಹಿತಿಗಳನ್ನು ಒಗ್ಗೂಡಿಸಿ ನಡೆಸುವಂತಹ ಈ ಮಧುಕವಿ ಗೋಷ್ಠಿ ಬಹಳ ಅಭಿನಂದನನೀಯ ಎಂದು ತಿಳಿಸಿ ತಮ್ಮ ಸ್ವರಚಿತ ಕವನವನ್ನು ವಾಚಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ)ಬೆಂಗಳೂರು ವತಿಯಿಂದ ಜಿಲ್ಲಾಘಟಕ ದ. ಕ ಪ್ರಾಯೋಜಕತ್ವದಲ್ಲಿ ಅಂತರ್ಜಾಲ ಆಧಾರಿತ ಅಂತಾರಾಷ್ಟ್ರೀಯ ಮಟ್ಟದ ಮುಕ್ತಕಗಳ ರಚನೆಯ ಸ್ಪರ್ಧೆ ಯಲ್ಲಿ ವಿಜೇತ,ಹಾಗೂ ಭಾಗವಹಿಸಿದವರ ಮುಕ್ತಕಗಳ ಕೃತಿ “ಮುಕ್ತಕ ಪುಷ್ಪ ” ವನ್ನು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ರಾದ ಪುತ್ತೂರು ಉಮೇಶ್ ನಾಯಕ್ ಬಿಡುಗಡೆ ಮಾಡುವುದರ ಮೂಲಕ ಲೋಕಾರ್ಪಣೆ ಮಾಡಿ ಸಾಹಿತ್ಯ ಪರಿಷತ್ತು ಮಾತೃ ಸ್ಥಾನದಲ್ಲಿ ನಿಂತು ತಾಲೂಕಿನಲ್ಲಿರುವ ಎಲ್ಲಾ ಸಾಹಿತ್ಯ ಬಳಗ ಹಾಗೂ ಸಾಹಿತಿಗಳನ್ನು ಬೆಳೆಸುವ ಹಾಗೂ ಅವರಿಗೆ ವೇದಿಕೆ ನೀಡುವಲ್ಲಿ ಕಟಿಬದ್ಧವಾಗಿದೆ. ಸಾಹಿತ್ಯ ಪರಿಷತ್ತು ನಮ್ಮ ಸಂಸ್ಥೆ ಎಂಬ ಮನೋಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದ ಅವರು ಎಲ್ಲಾ ಸಾಹಿತಿಗಳು ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಂಬೆ ಕಾನ ಸದಾಶಿವ ರೈ ಹಾಗೂ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕೋಲ್ಚಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕರಾದ
ಹರಿಪ್ರಸಾದ್ ಎಮ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಘಟನಾ ಕಾರ್ಯದರ್ಶಿ, ಮಕ್ಕಳ ಸಾಹಿತಿ ಸಮುದ್ರವಳ್ಳಿ ವಾಸು,ಮಧು ಪ್ರಪಂಚ ಪತ್ರಿಕೆಯ ಸಂಪಾದಕರಾದ ಜಯಾನಂದ ಪೆರಾಜೆ,
,ಡಾ.ಸುರೇಶ ನೆಗಳಗುಳಿ (ಅಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದ. ಕ ಜಿಲ್ಲೆ),ರೇಮಂಡ್ ಡಿಕೂನ ತಾಕೋಡೆ (ಪಿಂಗಾರ ಸಾಹಿತ್ಯ ಬಳಗ ಸಂಚಾಲಕರು ,ಹಿರಿಯ ಪತ್ರಕರ್ತರು),ಶಾಂತಾ ಪುತ್ತೂರು (ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷರು), ಮುಕ್ತಕ ಪುಷ್ಪ ಕೃತಿಯ ಮುಖಪುಟ ವಿನ್ಯಾಸ ಮಾಡಿದ ಸಾಹಿತಿ ಗೋಪಾಲಕೃಷ್ಣ ಶಾಸ್ತ್ರಿ (ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ), ಹರ್ಷ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಂತಾ ಪುತ್ತೂರು ಅತಿಥಿಗಳನ್ನು ಸ್ವಾಗತಿಸಿದರು
ದ.ಕ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನಿರ್ದೇಶಕ ಜಿ.ಪಿ.ಶ್ಯಾಮ ಭಟ್ ಧನ್ಯವಾದವಿತ್ತರು.ಕಾರ್ಯಕ್ರಮ ವನ್ನು ಅಪೂರ್ವ ಕಾರಂತ್ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು