ಇತ್ತೀಚಿನ ಸುದ್ದಿ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಮಂಗಳೂರಿನಲ್ಲಿ ಯೂಟ್ಯೂಬರ್ ಬಂಧನ
27/07/2025, 11:43

ಮಂಗಳೂರು(reporterkarnataka.com): ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಯೂಟ್ಯೂಬರ್ ಒಬ್ಬನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಆರೋಪಿ ಶಾಲು ಕಿಂಗ್ಸ್ ಮೀಡಿಯಾ ಮತ್ತು ಶಾಲು ಕಿಂಗ್ಸ್ ವ್ಲಾಗ್ ಎಂಬ ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿದ್ದ ಎನ್ನಲಾಗಿದ್ದು, ಮುಹಮ್ಮದ್ ಸಾಲಿ (35) ಎಂಬಾತನನ್ನು ಬಂಧಿಸಲಾಗಿದೆ.
ಮದುವೆಯ ಭರವಸೆ ನೀಡಿ, ವಿದೇಶದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಎನ್ನಲಾಗಿದ್ದು, ಪೊಲೀಸರು ಆರೋಪಿ ಶಾಲು ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಕೇರಳದ ಕೊಯಿಲಾಂಡಿ ಪೊಲೀಸರು ಆತನನ್ನು ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಾಗ ಬಂಧಿಸಿದ್ದಾರೆ.
2016 ರಲ್ಲಿ ವಿವಾಹವಾದ ಈತನಿಗೆ ಮೂವರು ಮಕ್ಕಳಿದ್ದಾರೆ. ಅಪ್ರಾಪ್ತೆ ಮತ್ತು ಆರೋಪಿ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್ ಚಾಟ್ ಮೂಲಕ ಆಪ್ತರಾಗಿದ್ದರು. ನಂತರ, ಮದುವೆಯ ಭರವಸೆಯ ಮೇರೆಗೆ ವಿದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.