ಇತ್ತೀಚಿನ ಸುದ್ದಿ
ಯೂತ್ ಬಿಲ್ಲವ ಕಾರ್ಕಳ: ನೂತನ ಅಧ್ಯಕ್ಷ ಸುಕೇಶ್ ಕರ್ಕೇರ, ಕಾರ್ಯದರ್ಶಿ ಪ್ರಮಿತ್ ಸುವರ್ಣ ಪದಗ್ರಹಣ
16/07/2023, 19:35
ಕಾರ್ಕಳ(reporterkarnataka.com); ಯೂತ್ ಬಿಲ್ಲವ ಕಾರ್ಕಳ ಸಂಘಟನೆಯ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.
ನೂತನ ಅಧ್ಯಕ್ಷರಾಗಿ ಸುಕೇಶ್ ಕರ್ಕೇರ, ಕಾರ್ಯದರ್ಶಿಯಾಗಿ ಪ್ರಮಿತ್ ಸುವರ್ಣ, ಗೌರವಾಧ್ಯಕ್ಷರಾಗಿ ಭಾಸ್ಕರ್ ಎಸ್. ಕೋಟ್ಯಾನ್ ಹಾಗೂ ಡಿ. ಆರ್. ರಾಜು, ಕೋಶಾಧಿಕಾರಿಯಾಗಿ ಶರತ್ ಪೂಜಾರಿ ಬೈಲಡ್ಕ, ಉಪಾಧ್ಯಕ್ಷರಾಗಿ ರವಿರಾಜ್ ಪೂಜಾರಿ, ರಿತೇಶ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಅಭಿಲಾಷ್ ಕೋಟ್ಯಾನ್, ಲೆಕ್ಕ ಪರಿಶೋಧಕರಾಗಿ ಶರತ್ ಸಾಣೂರು, ಕ್ರೀಡಾ ಕಾರ್ಯದರ್ಶಿಯಾಗಿ ಸಾಯಿ ಕಿರಣ್ ಮತ್ತು ಶಮಿತ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಜಿತ್ ನಿಟ್ಟೆ ಮತ್ತು ಸವಿನ್ ಪೂಜಾರಿ ಅಧಿಕಾರ ಸ್ವೀಕರಿಸಿದರು. ಜೂ. 18ರಂದು ಪೆರ್ವಾಜೆ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಸಂಘಟನೆಯ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ಈ ಸಂದರ್ಭ ಸಂಘಟನೆಯ ಗೌರವಾಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ವಾಸ್ತು ತಜ್ಞ ಪ್ರಮಲ್ ಕುಮಾರ್, ಬೈಲಡ್ಕ ಗರಡಿ ಮನೆಯ ವಿನಾಯಕ ಚಂದರ್, ಶಿಕ್ಷಕ ವಸಂತ ಎಂ., ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಸುಭಾಶ್ ಸುವರ್ಣ, ಸ್ಥಾಪಕಾಧ್ಯಕ್ಷ ಭರತ್ ಸಿ. ಅಂಚನ್ ಮತ್ತು ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.