ಇತ್ತೀಚಿನ ಸುದ್ದಿ
ಎಣ್ಣೆಯ ದಾಸರಾಗುತ್ತಿರುವ ಯುವಪೀಳಿಗೆ: ಮದ್ಯ ಮಾರಾಟ ನಿಲ್ಲಿಸಲು ಗ್ರಾಮಸ್ಥರಿಂದ ಚಾಮುಂಡೇಶ್ವರಿಗೆ ಮೊರೆ
18/09/2025, 13:30
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಎಣ್ಣೆ ಮಾರಾಟ ನಿಲ್ಲಿಸಲು ಮಲೆನಾಡಿನ ಗ್ರಾಮಸ್ಥರು ದೇವರ ಮೊರೆ ಹೋದ ಘಟನೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಂಗಡಿಗಳಲ್ಲಿ ರಾಜಾರೋಷವಾಗಿ ಎಣ್ಣೆ ಮಾರಾಟ ಮಾಡಲಾಗುತ್ತಿದ್ದು,ಕೆಲಸ-ಕಾರ್ಯ ಬಿಟ್ಟು ಕುಡಿತಕ್ಕೆ
ಯುವ ಪೀಳಿಗೆ  ದಾಸರಾಗುತ್ತಿದ್ದಾರೆ. ಅಂಗಡಿಯವ್ರು ಎಣ್ಣೆ ಮಾರಬಾರ್ದು, ನಮ್ಮೂರ್ನೋರು ಖರೀದಿಸಬಾರ್ದು ಅಂತ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಗ್ರಾಮಸ್ಥರೆಲ್ಲಾ ಗ್ರಾಮದೇವತೆ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಕ್ರಮ ಮದ್ಯ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಏನೂ ಪ್ರಯೋಜನವಿಲ್ಲ ಎಂದು ನಾಗರಿಕರು ದೂರಿದ್ದಾರೆ. ಖಾಕಿಯಿಂದ ಆಗದ ಕೆಲಸವನ್ನು ನೀನೇ ಮಾಡು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಸಕೆರೆ ಗ್ರಾಮ  ಇದೆ.














