5:08 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಎತ್ತಿನ ಭುಜಕ್ಕೆ ಪ್ರವಾಸಿಗರ ನಿಷೇಧ: ಅಧಿಕಾರಿಗಳ ಖಡಕ್ ನಿರ್ಧಾರ;  ಮ್ಯಾರಥಾನ್ ಗೂ ನಿರ್ಬಂಧ 

27/11/2021, 16:48

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರಿಂದ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ ಎತ್ತಿನಭುಜ ಸುತ್ತಮುತ್ತಲ ಅರಣ್ಯ  ಪ್ರದೇಶದಲ್ಲಿ ಇಂದು ನಡೆಸಲು ಉದ್ದೇಶಿಸಿದ್ದ ಮ್ಯಾರಥಾನ್ ಗೆ ಬ್ರೇಕ್ ಬಿದ್ದಿದೆ .

ಅರಣ್ಯ ಪ್ರದೇಶ ಹೊರತುಪಡಿಸಿ ಉಳಿದ ಜಾಗದಲ್ಲಿ ಪೂರ್ವನಿಗದಿಯಂತೆ ಮ್ಯಾರಥಾನ್ ಓಟ ನಡೆದಿದ್ದು ಭಾರಿ ಸಂಖ್ಯೆಯಲ್ಲಿ ಸ್ಪರ್ಧಿಗಳು ಆಗಮಿಸಿದ್ದು , ಇದಕ್ಕೆ ಅನುಮತಿ ನೀಡಿದ ಕ್ರಮವು ಟೀಕೆಗೆ ಗುರಿಯಾಗಿದೆ .

ಎತ್ತಿನಭುಜ ವ್ಯಾಪ್ತಿಯಲ್ಲಿ ಮ್ಯಾರಥನ್ ನಡೆಯುತ್ತಿರುವ ಬಗ್ಗೆ ರಿಪೋರ್ಟರ್ ಕರ್ನಾಟಕ ವೆಬ್ ಸುದ್ದಿ ಮಾಡಿ ಗಮನ ಸೆಳೆದಿದ್ದು ತಕ್ಷಣ ಪರಿಸರ ಪ್ರೇಮಿಗಳು ಅರಣ್ಯ ಇಲಾಖೆ ಗಮನಕ್ಕೆ ತಂದ ಫಲವಾಗಿ ಅರಣ್ಯ ಪ್ರದೇಶದಲ್ಲಿ ಮ್ಯಾರಥಾನ್ ಓಟಕ್ಕೆ ಕಡಿವಾಣ ಬಿದ್ದಿದೆ .

ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಎತ್ತಿನ ಭುಜ ಪ್ರದೇಶ ಅತ್ಯಂತ ನೈಸರ್ಗಿಕ ಮಹತ್ವ ಇರುವ  ಪ್ರದೇಶ,

ಇಲ್ಲಿ ಪ್ರವಾಸಿಗರಿಗೆ ಯಾವುದೇ ಮಾರ್ಗಸೂಚಿ ಇಲ್ಲದೆ ಮೋಜು ಮಸ್ತಿ ,ಪಾರ್ಟಿ ,ಇತ್ಯಾದಿ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತಿತ್ತು.

ಇತೀಚೆಗೆ ಗುಡ್ಡ ಗಾಡು ಓಟ ಕಾರ್ಯಕ್ರಮ ಖಾಸಗಿ ಸಂಸ್ಥೆ ಆಯೋಜಿಸಿತ್ತು .ಇದಕ್ಕೆ ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತ ಪಡಿಸಿದರು,

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ನಿಯೋಜನೆ ಮಾಡಿ ಗುಡ್ಡ ಗಾಡು ಓಟ ಅರಣ್ಯ ಪ್ರದೇಶದಲ್ಲಿ ಸಾಗದಂತೆ ತಡೆದಿದ್ದಾರೆ.

ಎತ್ತಿನ ಭುಜಕ್ಕೆ  ಪ್ರವೇಶ ಮಾಡದಂತೆ ಮುಂದಿನ ಆದೇಶದವರೆಗೆ ನಿಷೇಧ ಹೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ  ಪ್ರದೇಶ ದ್ವಾರದಲ್ಲಿ ತಂತಿ ಬೇಲಿ  ಹಾಕಿ ಮುಚ್ಚಲಾಗಿದೆ.

ಎತ್ತಿನ ಭುಜ ಪ್ರದೇಶ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಟ್ಟಿದ್ದು ಸಾಕಷ್ಟು ಆನೆ ಇವೆ .ಪ್ರವಾಸಿಗರ ಚಟುವಟಿಕೆಗಳಿಂದ ಆನೆಗಳಿಗೆ ತೊಂದರೆ ಆಗುತ್ತಿತ್ತು.

ಅರಣ್ಯ ಇಲಾಖೆ ತಂತಿ ಬೇಲಿ ನಿರ್ಮಿಸಿ ಎತ್ತಿನ ಭುಜಕ್ಕೆ ಪ್ರವೇಶ ನಿಷೇಧ ಮಾಡಿರುವುದನ್ನು ಪರಿಸರ ಪ್ರಿಯರು ಸ್ವಾಗತಿಸಿ,ಇಲ್ಲಿ ಶಾಶ್ವತವಾಗಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು