ಇತ್ತೀಚಿನ ಸುದ್ದಿ
ಯೆನೆಪೋಯ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳ ದೇಣಿಗೆಯಿಂದ ಕೃತಕ ಕಾಲುಗಳಿಗೆ ನೆರವು
13/07/2023, 19:22

ಮಂಗಳೂರು(reporterkarnataka.com): ವಿದ್ಯಾರ್ಥಿಗಳು ತಾವು ದೇಣಿಗೆ ನೀಡುವ ಮೂಲಕ ಕೃತಕ ಕಾಲುಗಳನ್ನು ನೀಡಿರುವುದು ಇತರರಿಗೆ ಮಾದರಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಶ್ಲಾಘಿಸಿದರು.
ಅವರು ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿಂದು ಯೆನೆಪೋಯ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ಗಳು ನೀಡಿದ ದೇಣಿಗೆಯ ವತಿಯಿಂದ ಫಲಾ ನುಭವಿ ಪಡೀಲ್ ನ ಕಲಾವಿದ (ಗಾಯಕ) ಪ್ರಕಾಶ್ ಸಪಲ್ಯರ ವರಿಗೆ ವೈದ್ಯರ ಮೂಲಕ ಕೃತಕ ಕಾಲುಗಳನ್ನು ಹಸ್ತಾಂತ ರಿಸಿ ಮಾತನಾಡಿದರು.
ಈ ರೀತಿಯ ಕೆಲಸಗಳು ಇತರರಿಗೂ ಪ್ರೇರಣೆ ಯಾಗಲಿ. ಸಮಾಜಮುಖಿ ಚಟುವಟಿಕೆಗಳು ಜಿಲ್ಲೆಯ ಇನ್ನೂ ನಿರಂತರವಾಗಿ ನಡೆಯು ವಂತಾಗಲಿ ಇದರಿಂದ ಇನ್ನಷ್ಟು ಜನರಿಗೆ ಸಹಾಯ ದೊರೆಯುವಂತಾಗಲಿ ಎಂದು ಜಿಲ್ಲಾಧಿಕಾರಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್,
ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ಶ್ಯಾನ್ ಬೋಗ್,ಇಂಡಿಯನ್ ರೆಡ್ ಕ್ರಾಸ್ ಸಭಾಪತಿ ಸಿ.ಎ.ಶಾಂತರಾಮ ಶೆಟ್ಟಿ, ಯೆನೆಪೋಯ ಕಾಲೇಜಿನ ಪ್ರಾಂಶು ಪಾಲ ಅರುಣ್ ಭಾಗವತ್,(ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾನಿಲಯದ )ವೈಐಎ ಎಸ್ ಸಿಎಂ ಮತ್ತು ಯುವ ರೆಡ್ ಕ್ರಾಸ್ ಘಟಕದ ನೋಡಲ್ ಅಧಿಕಾರಿ ನಿತ್ಯಶ್ರೀ, ಕಾರ್ಯಕ್ರಮ ಸಂಯೋಜನಾಧಿಕಾರಿ ಜ್ಯೋತಿ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ವೆನ್ಲಾಕ್ ಆಸ್ಪತ್ರೆಯ ವೈದ್ಯರಾದ ಡಾ.ಕೆ.ಆರ್ ಕಾಮತ್, ಕೃತಕ ಅಂಗ ಜೋಡಿಸಿದ ಡಾ.ಆಶಿತ್ ಠಾಕೂರ್, ಯುವ ರೆಡ್ ಕ್ರಾಸ್ ಘಟಕದ ಸದಸ್ಯರು, ಇಂಡಿ ಯನ್ ರೆಡ್ ಕ್ರಾಸ್ ಘಟಕದ ಹಿರಿಯ ಸಲಹೆಗಾರರು ಮಾಜಿ ಅಪರ ಜಿಲ್ಲಾ ಧಿಕಾರಿ ಪ್ರಭಾಕರ ಶರ್ಮಾ, ಇಂಡಿಯನ್ ರೆಡ್ ಕ್ರಾಸ್ ದ.ಕ. ಜಿಲ್ಲಾ ಘಟಕದ ಹಿರಿಯ ಸದಸ್ಯರಾದ ರವೀಂದ್ರನಾಥ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.