ಇತ್ತೀಚಿನ ಸುದ್ದಿ
ಎಲೆಕ್ಷನ್ ಮುಂಚೆ ರಸ್ತೆ ಅಭಿವೃದ್ಧಿಗೆ ಜಲ್ಲಿ ತಂದು ಹಾಕಿದರು: ಎಲೆಕ್ಷನ್ ಮುಗಿದ ಬಳಿಕ ಜಲ್ಲಿ ಖಾಲಿ ಮಾಡಲು ಟ್ರಾಕ್ಟರ್ ತಂದ್ರು!!
07/01/2022, 19:51
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಣಕಲ್ ಗ್ರಾಪಂ ವ್ಯಾಪ್ತಿಯ ಇಂದಿರಾ ನಗರದಲ್ಲಿ ರಸ್ತೆ ಕಾಮಗಾರಿಗೆಂದು ತಂದು ಹಾಕಿದ್ದ ಜಲ್ಲಿಯನ್ನು ಬೇರೆಡೆ ನಡೆಯುತ್ತಿರುವ ಕಾಮಗಾರಿಗೆ ಟ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗಲು ಬಂದದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಡಿಸೆಂಬರ್ 27ರಂದು ಬಣಕಲ್ ಗ್ರಾಪಂ ಚುನಾವಣೆ ನಡೆದಿದ್ದು, ಚುನಾವಣೆಗೂ ಮುನ್ನ ಇಂದಿರಾ ನಗರದ ರಸ್ತೆ ಕಾಮಗಾರಿಗೆಂದು ಜಲ್ಲಿಯನ್ನು ತಂದು ಇಂದಿರಾ ನಗರದ ರಸ್ತೆ ಬದಿಯಲ್ಲಿ ಹಾಕಿದ್ದು ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಮುಗಿದ ನಂತರ ರಸ್ತೆ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಲಾಗಿತ್ತು. ಆದರೆ ಶುಕ್ರವಾರ ಇಂದಿರಾ ನಗರದಲ್ಲಿ ಹಾಕಿದ್ದ ಜಲ್ಲಿಯನ್ನು ಬೇರೆಡೆಗೆ ತೆಗೆದುಕೊಂಡು ಹೋಗಲು ಟ್ಯಾಕ್ಟರ್ ಬಂದಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಗೂ ಮುನ್ನ ರಸ್ತೆ ಅಭಿವೃದ್ದಿಗೆ ತಂದು ಹಾಕಿದ್ದ ಜಲ್ಲಿಯನ್ನು ಬೇರೆಡೆಗೆ ತೆಗೆದುಕೊಂಡು ಹೋಗುತ್ತಿರುವುದಕ್ಕೆ ಯಾಕೆ? ನೀತಿ ಸಂಹಿತೆ ಮುಗಿದಿದ್ದರೂ ಇನ್ನೂ ಯಾಕೆ ರಸ್ತೆ ಅಭಿವೃದ್ದಿ ಪ್ರಾರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜಲ್ಲಿ ತಗೆದುಕೊಂಡು ಹೋಗಲು ಅವಕಾಶ ಕೊಡಲಿಲ್ಲ.
ಈ ಸಂದರ್ಭದಲ್ಲಿ ಗ್ರಾಪಂ ನೂತನ ಸದಸ್ಯರಾದ ಆದಂ ಕುಟ್ಟ, ಸಿರಾಜ್, ಆತಿಕಾ ಭಾನು, ಜರಿನಾ ಭಾನು, ವಿನಯಗೌಡ, ಜರಿದಾ ಹಾಗೂ ಇಂದಿರಾನಗರದ ಗ್ರಾಮಸ್ಥರ ಅಶ್ರಫ್, ಬದ್ರುದ್ದೀನ್, ಆರೀಫ್, ವಿನಯ್, ಹನೀಫ್ ಮುಂತಾದವರು ಇದ್ದರು.