6:35 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ: ಸಂಡೂರು ಚುನಾವಣೆ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ

07/11/2024, 15:37

ಗಣೇಶ್ ಇನಾಂದಾರ ಸಂಡೂರು ಬಳ್ಳಾರಿ

info.reporterkarnataka@gmail.com

ಬಡವರ ಪರ ಕಾರ್ಯಕ್ರಮ ರೂಪಿಸದ. ಬಡವರಿಗೆ ಒಂದು ಮನೆಯನ್ನೂ ಮಂಜೂರು ಮಾಡದ ಬಿಜೆಪಿಯನ್ನು ಸಂಡೂರಿನಲ್ಲಿ ಸೋಲಿಸಿ ಕಾಂಗ್ರೆಸ್‌ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
ಕ್ಷೇತ್ರದ ಬೊಮ್ಮಾಘಟ್ಟದಲ್ಲಿ ಇಂದು ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರ ಪರವಾಗಿ ಭರ್ಜರಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಬಿಜೆಪಿಯವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಎಂಎಲ್‌ಎಗಳನ್ನು ಖರೀದಿ ಮಾಡಿ ಆಪರೇಷನ್‌ ಕಮಲ ಮಾಡಿ ಅಧಿಕಾರಕ್ಕೆ ಬಂದರು. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಆದ್ದರಿಂದ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಿ ಎಂದು ಹೇಳಿದರು.
ಬಿಜೆಪಿಯವರು ಬಡವರ ಪರ ಒಂದೂ ಕಾರ್ಯಕ್ರಮ ಮಾಡಲಿಲ್ಲ. ಅವರಿಗೆ ಮಾನ ಮರ್ಯಾದೆ ಇಲ್ಲ. ಅನ್ನಭಾಗ್ಯ, ಶಾದಿ ಭಾಗ್ಯ, ಮೈತ್ರಿ, ಮನಸ್ವಿನಿ, ಶೂ ಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್‌ ಇಂತಹ ಹಲವಾರು ಯೋಜನೆ ಜಾರಿ ಮಾಡಿದ್ದು ಕಾಂಗ್ರೆಸ್‌. ಬಿಜೆಪಿಯವರು ಮಾಡಲಿಲ್ಲ. ಮೋದಿ ಅಥವಾ ಯಡಿಯೂರಪ್ಪ ಅವರು ಮಾಡಲಿಲ್ಲ. ಹಾಗಾಗಿ ಬಿಜೆಪಿ ಓಟು ಕೊಡಬೇಡಿ ಎಂದು ವಿವರಿಸಿದರು.

*ಯಾವುದೇ ಗ್ಯಾರಂಟಿ ನಿಲ್ಲಿಸುವುದಿಲ್ಲ:*
ನಾವು ಚುನಾವಣೆಗೆ ಮೊದಲು ನೀಡಿದ ವಾಗ್ದಾನದಂತೆ ಐದು ಗ್ಯಾರಂಟಿ ಜಾರಿ ಮಾಡಿದೆವು. ಆದರೆ ಈ ಗ್ಯಾರಂಟಿಗಳನ್ನು ಕಾಂಗ್ರೆಸ್‌ ನಿಲ್ಲಿಸುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡ್ತಾ ಇದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ಗ್ಯಾರಂಟಿ ನಿಲ್ಲುವುದಿಲ್ಲ. ಬಡವರ ಮನೆ ಹಾಳು ಮಾಡುವ ಬಿಜೆಪಿಯನ್ನು ಸೋಲಿಸಿ ಎಂದರು.
ಬಡವರು ತಿನ್ನುವ ಅನ್ನಕ್ಕೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡಲು ಕೇಂದ್ರದ ಬಿಜೆಪಿ ಸರ್ಕಾರ ಕೇಳಿದೆವು. ಆದರೆ ಅವರು ಅಕ್ಕಿ ಕೊಡಲಿಲ್ಲ. ಪುಕ್ಕಟೆ ಕೊಡಬೇಡಿ ಹಣ ಕೊಡ್ತಿವಿ ಕೊಡಿ ಎಂದು ಮನವಿ ಮಾಡಿದೆವು. ಆದರೂ ಕೊಡಲಿಲ್ಲ. ಆದರೆ ನಾವೇ ಬಡವರಿಗೆ ಅಕ್ಕಿ ಬದಲು ಹಣ ನೀಡಿದೆವು ಎಂದು ಮುಖ್ಯಮಂತ್ರಿಗಳು ಹೇಳಿದರು.
ನಾವು ಯಾವತ್ತೂ ಜನರಿಗೆ ಮೋಸ ಮಾಡಲಿಲ್ಲ. ಬಡವರಿಗೆ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಕೊಟ್ಟರೆ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠರಾಗುತ್ತಾರೆ ಎಂದು ಬಿಜೆಪಿಯವರು ಅವರ ಪರವಾಗಿ ಯಾವುದೇ ಕಾರ್ಯಕ್ರಮಗಳನ್ನು ನೀಡುವುದಿಲ್ಲ ಎಂದು ದೂರಿದರು.
*ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು:*
ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಆದರೆ ಬಿಜೆಪಿಯವರು ಸುಳ್ಳು ಹೇಳ್ತಾನೇ ಇದ್ದಾರೆ. ಅವರಿಗೆ ಸುಳ್ಳೇ ಮನೆ ದೇವರು. ಮೋದಿಯವರು ಹೇಳಿದ್ದಂತೆ ಎಲ್ಲರ ಖಾತೆ ಹದಿನೈದು ಲಕ್ಷ ಹಾಕ್ತೇವೆ ಎಂದು. ಎಲ್ಲಿ ಆ ಹದಿನೈದು ಲಕ್ಷ. ಯಾರ ಖಾತೆಗೆ ಬಂದಿದೆ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಅನ್ನಪೂರ್ಣ ಗೆದ್ದರೆ ಮಾತ್ರ ಅಭಿವೃದ್ಧಿ
ಅನ್ನಪೂರ್ಣ ಅವರು ಗೆದ್ದರೆ ಸಂಡೂರಿನ ಅಭಿವೃದ್ಧಿಯಾಗಲಿದೆ. ಅವರ ಪತಿ ಸಂಸದರಾಗಿದ್ದಾರೆ. ಇಬ್ಬರೂ ಸೇರಿದಂತೆ ಒಳ್ಳೆಯ ಕೆಲಸಗಳಾಗಲಿವೆ. ಒಳ್ಳೆಯ ಹೆಣ್ಣು ಮಗಳು ಅವರನ್ನು ಗೆಲ್ಲಿಸಿ. ಅವರಿಗೆ ಆಶೀರ್ವಾದ ಮಾಡಿ ಎಂದರು. ಸಂಡೂರಿನಲ್ಲಿ ರಸ್ತೆ, ಸೇತುವೆ ಆಗಿದ್ದರೆ. ಉದ್ಯೋಗ ಸಿಕ್ಕಿದ್ದರೆ ಅದಕ್ಕೆ ಕಾರಣ ತುಕಾರಾಂ ಅವರು ಎಂದು ಹೊಗಳಿದರು.
*ಬಿ ಖರಾಬು ಸರಿಪಡಿಸುವ ಕೆಲಸ ಮಾಡ್ತೇವೆ:*
ಬಿ ಖರಾಬು ಸರಿಪಡಿಸುವ ಕೆಲಸವನ್ನು ನಾವು ಮಾಡ್ತೇವೆ. ರೈತರಿಗೆ ತೊಂದರೆ ಮಾಡುವುದಿಲ್ಲ. ಬಗರ್‌ ಹುಕುಂನಲ್ಲೂ ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ.
ಈ ವೇಳೆ ಸಂಸದ ಈ ತುಕಾರಾಮ್ , ಸಚಿವರಾದ ಕೆ. ಎನ್ ರಾಜಣ್ಣ, ಸಂತೋಷ್ ಲಾಡ್, ಮಾಜಿ ಸಚಿವರಾದ ನಾಗೇಂದ್ರ, ಪಿ.ಟಿ. ಪರಮೇಶ್ವರ್ ನಾಯ್ಕರವರು, ಸೇರಿದಂತೆ ರಾಜ್ಯದ ನಾನಾ ಭಾಗದ ಶಾಸಕರು, ಕಾಂಗ್ರೆಸ್ ನಾಯಕರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು