ಇತ್ತೀಚಿನ ಸುದ್ದಿ
ಯಾವುದೇ ಆಮಿಷಕ್ಕೊಳಗಾಗದೆ ಮತದಾನ ಮಾಡಿ: ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ರಾಹುಲ್ ಕಾಂಬಳೆ
14/04/2024, 12:47
ಬಂಟ್ವಾಳ(reporterkarnataka.com): ಮತದಾನ ಪ್ರತಿಯೊಬ್ಬ ಮತದಾರರ ಹಕ್ಕು, ಗೌರವ ಮತ್ತು ಜವಾಬ್ದಾರಿ. ಮತದಾರರು ಯಾವುದೇ ಆಮಿಷಕ್ಕೊಳಗಾಗದೆ ಮತದಾನ ಮಾಡಬೇಕು.ಎಂದು ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಹುಲ್ ಕಾಂಬಳೆ ಹೇಳಿದರು.
ತಾಲೂಕು ಪಂಚಾಯತ್ ಬಂಟ್ವಾಳ, ತಾಲೂಕು ಸ್ವೀಪ್ ಸಮಿತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮತದಾರರ ಸಾಕ್ಷರತಾ ಸಂಘ ಹಾಗೂ ಮೊಡಂಕಾಪು ಕಾರ್ಮೆಲ್ ಪದವಿ ಕಾಲೇಜು ಸಹಭಾಗಿತ್ವದಲ್ಲಿ ಶನಿವಾರ ಬಿ.ಸಿ.ರೋಡಿನಲ್ಲಿ ನಡೆದ ಮತದಾರರ ಜಾಗೃತಿ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾಥಾವು ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ಬಸ್ ನಿಲ್ದಾಣದವರೆಗೆ ನಡೆಯಿತು. ಇದೇ ಸಂದರ್ಭದಲ್ಲಿ ರಂಗ ನಿರ್ದೇಶಕ ಮೌನೇಶ್ ವಿಶ್ವಕರ್ಮ ನಿರ್ದೇಶನದಲ್ಲಿ ಕಾರ್ಮೆಲ್ ಕಾಲೇಜು ಎನ್.ಎಸ್.ಎಸ್ ವಿದ್ಯಾರ್ಥಿಗಳು “ಮತ ಮಾರಾಟಕ್ಕಲ್ಲ” ಎನ್ನುವ ಜಾಗೃತಿ ಬೀದಿನಾಟಕವನ್ನು ಕೈಕಂಬ ಜಂಕ್ಷನ್ ಹಾಗೂ ಬಿ.ಸಿ. ರೋಡು ಮೇಲೆತುವೆ ಬಳಿಯಲ್ಲಿ ಪ್ರದರ್ಶಿಸಿದರು.
ಪುರಸಭೆ ಮುಖ್ಯಾಧಿಕಾರಿ ಶ್ರೀಧರ್ ವಿ., ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ, ಶಿಶುಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಝ್, ಸ್ವೀಪ್ ಸಮಿತಿ ಜಿಲ್ಲಾ ತರಬೇತುದಾರ ವಿಠಲ್ ನಾಯಕ್, ನಿಕಟಪೂರ್ವ ತಾಪಂ ವ್ಯವಸ್ಥಾಪಕಿ ಶಾಂಭವಿ, ಪುರಸಭಾ ಆರೋಗ್ಯಾಧಿಕಾರಿ ರತ್ನಪ್ರಸಾದ್. ಕಾರ್ಮೆಲ್ ಕಾಲೇಜು ಪ್ರಾಂಶುಪಾಲೆ ಡಾ.ಸಿ. ಲತಾ ಫೆರ್ನಾಂಡಿಸ್, ಉಪನ್ಯಾಸಕಿ ವಿಜೇತಾ, ಸ್ವೀಪ್ ಸಮಿತಿ ಸದಸ್ಯರಾದ ಚಂದ್ರಶೇಖರ್ ಪಾತೂರು, ಪ್ರಶಾಂತ್, ಪ್ರದೀಪ್ ಕಾಮತ್, ರಾಜೇಶ್, ಮಂಗಳೂರಿನ ಶಕ್ತಿ ರೆಸಿಡೆನ್ಸಿ ಶಾಲೆಯ ಶಿಕ್ಷಕರು, ತಾಲೂಕು ಪಂಚಾಯತ್ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಪುರಸಭೆ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಮೊದಲಾದವರು ಹಾಜರಿದ್ದರು. ತಾಲೂಕು ಸ್ವೀಪ್ ತರಬೇತುದಾರೆ ಸುರೇಖಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ತಾಪಂ ಸಹಾಯಕ ನಿರ್ದೇಶಕ ವಿಶ್ವನಾಥ್ ಬಿ. ವಂದಿಸಿದರು.