ಇತ್ತೀಚಿನ ಸುದ್ದಿ
ಯಾತ್ರಾಸ್ಥಳಗಳು ಫುಲ್ ರಶ್!: ಶೃಂಗೇರಿಯಲ್ಲಿ ಡ್ರೈವರ್ ಸೀಟು ಬಾಗಿಲು ಮೂಲಕ ಬಸ್ ಏರಿದ ಮಹಿಳೆ!
18/06/2023, 13:10

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಸ್ ರಶ್ ಇದೆ ಎಂದು ಮಹಿಳೆಯೊಬ್ಬರು ಡ್ರೈವರ್ ಸೀಟಿನ ಬಾಗಿಲ ಮೂಲಕ ಬಸ್ ಹತ್ತಿದ ಘಟನೆ ಶೃಂಗೇರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಕ್ಕಳನ್ನ ಡ್ರೈವರ್ ಸೀಟಲ್ಲಿ ಹತ್ತಿಸಿದ ಮಹಿಳೆ ತಾನು ಕೂಡ ಡ್ರೈವರ್ ಸೀಟ್ ಬಾಗಿಲ ಮೂಲಕವೇ ಬಸ್ ಏರಿದ್ದಾರೆ.
ಬಸ್ ಬಂದ ಕೂಡಲೇ ಬಸ್ಸಿಗೆ ಮಹಿಳೆಯರು ಮುತ್ತಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ಹಿನ್ನೆಲೆ ಶೃಂಗೇರಿ ಸೇರಿದಂತೆ ಯಾತ್ರಾ ಸ್ಥಳಗಳಿಗೆ ಹರಿದು ಬರ್ತಿರೋ ಜನಸಾಗರ ಹೆಚ್ಚಾಗುತ್ತಿದೆ.