ಇತ್ತೀಚಿನ ಸುದ್ದಿ
ಯತ್ನಾಳ್ ಮತ್ತು ನಂದೂ ಒಂದೇ ಡಿಎನ್ ಎ, ಅದು ಬಿಜೆಪಿ ಡಿಎನ್ ಎ: ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ
26/06/2023, 19:04

ರಾಹುಲ್ ಅಥಣಿ ಬೆಳಗಾವಿ
info.reporterkarnataka@mail.com
ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ನಂದು ಒಂದೇ ಡಿಎನ್ ಎ. ಅದು ಬಿಜೆಪಿ ಡಿಎನ್ ಎ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯದ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕೋಡಿಯ ಯಕ್ಸಂಬಾ ಪಟ್ಟಣದಲ್ಲಿ ಬೊಮ್ಮಾಯಿ ಅವರು ಮಾಧ್ಯಮ ಜತೆ ಮಾತನಾಡಿದರು.
ನಾವು ಒಗ್ಗಟ್ಟಾಗಿ, ಒಂದಾಗಿ ಕಾಂಗ್ರೆಸ್ ಸೋಲಿಸುವ ಕುರಿತು ಮಾತನಾಡಿದ್ದೇವೆ ಹೊರತು ಮತ್ತೇನೂ ಅಲ್ಲ.ಬೆಳಗ್ಗೆಯಿಂದ ನಾವೆಲ್ಲರೂ ಒಟ್ಟಿಗೆ ಇದ್ದೇವೆ.
ಅವರ ಕಾರ್‌ಲ್ಲೇ ಬಂದಿದ್ದೇನೆ ಇಬ್ಬರೂ ಅಣ್ಣತಮ್ಮಂದಿರ ಹಾಗೆ ಇದ್ದೇವೆ. ಇಬ್ಬರದ್ದೂ ಮೂವತ್ತು ವರ್ಷಗಳ ದೋಸ್ತಿ.
ರಾಜಕಾರಣ ಮೀರಿ ನಮ್ಮಿಬ್ಬರ ಸ್ನೇಹವಿದೆ. ಯತ್ನಾಳ್ ಅವರದೇ ಆದ ಶೈಲಿಯಲ್ಲಿ ಆ ರೀತಿ ಹೇಳಿದ್ದಾರೆ.
ಅವರು ಸಾರ್ವಜನಿಕವಾಗಿಯೇ ಹೇಳಿದ್ದಾರೆ. ನಾನು ಸಾರ್ವಜನಿಕವಾಗಿಯೇ ಸ್ಪಷ್ಟಿಕರಣ ಕೊಟ್ಟಿದ್ದೇನೆ.
ಈಗಲೂ ಹೇಳುತ್ತೇನೆ ನಮ್ಮಿಬ್ಬರದ್ದು ಒಂದೇ ಡಿಎನ್‌ಎ, ಅದು ಬಿಜೆಪಿ ಡಿಎನ್‌ಎ ಎಂದು ಮಾಜಿ ಮುಖ್ಯಮಂತ್ರಿ ನುಡಿದರು.