1:53 AM Sunday27 - July 2025
ಬ್ರೇಕಿಂಗ್ ನ್ಯೂಸ್
ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;…

ಇತ್ತೀಚಿನ ಸುದ್ದಿ

ಯಕ್ಷಗಾನದಲ್ಲಿ ಬಣ್ಣ ಹಚ್ಚಲಿದ್ದಾರೆ ತೆಲಿಕೆದ ಬೊಳ್ಳಿ ‘ಪಾಯಿಸನ್ ಸಿರಿದರೆ’ ಖ್ಯಾತಿಯ ಸುರೇಶ್ ಕುಲಾಲ್

29/07/2023, 21:45

ಯಾದವ ಕುಲಾಲ್ ಅಗ್ರಬೈಲು ಬಂಟ್ವಾಳ

info.reporterkarnataka@gmail.com

ಚಾಪರ್ಕ ತಂಡದ ಕಲಾವಿದ, ರಂಗಭೂಮಿ ಕಲಾವಿದ, ಕಿರುತೆರೆಯಲ್ಲಿ ನಟಿಸಿ, ತುಳು ತೆಲಿಕೆದಬೊಳ್ಳಿ ಸಿನಿಮಾದಲ್ಲಿ ‘ಪಾಯಿಸನ್ ಸಿರಿದರೆ’ ಮುಖ್ಯ ಖಳನಾಯಕನ ಪಾತ್ರ ವಹಿಸಿರುವ ಸುರೇಶ್ ಕುಲಾಲ್ ಇನ್ನು ಯಕ್ಷರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಟೀಲು ಮೇಳದ ಕಲಾವಿದ ಅಶ್ವಥ್ ಕುಲಾಲ್ ಮಂಜನಾಡಿಯವರ ನಿರ್ದೇಶನದಲ್ಲಿ ಜುಲೈ ೨೩ರಂದು ಪೊಸಳ್ಳಿ ಕುಲಾಲ ಭವನದಲ್ಲಿ ನಡೆಯುವ ತುಳು ಯಕ್ಷಗಾನ ಮಹಿಮೆದ ಬಾಲೆ ಸಿರಿಕೃಷ್ಣೆ ಇದರಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಯಕ್ಷರಸಿಕರನ್ನೂ ರಂಜಿಸಲಿದ್ದಾರೆ. ನಾಟಕ ರಂಗದಲ್ಲಿ ಹಾಸ್ಯಪಾತ್ರದಲ್ಲಿ ಮೇಲುಗೈ ಸಾಧಿಸಿ ಕಳೆದ ೨೦ ವರ್ಷಗಳಿಂದ ಚಾಪರ್ಕದಲ್ಲಿಯೂ ಹಾಸ್ಯ ಕಲಾವಿದರಾಗಿ ಈಗ ಮುಖ್ಯ ಪಾತ್ರದಾರಿಯಾಗಿ ನಟಿಸಿದ್ದು, ತುಳು ಸಿನೆಮಾ, ಕನ್ನಡ ಸಿನೆಮಾ ಮತ್ತು ಧಾರವಾಹಿಯಲ್ಲೂ ನಡೆಯಲ್ಲಿ ಸೈ ಎನಿಸಿದ್ದಾರೆ.

ಬಿ.ಸಿ.ರೊಡಿನ ಬೋರುಗುಡ್ಡೆಯ ರಾಮ ಮೂಲ್ಯ ಮತ್ತು ಲೀಲಾ ದಂಪತಿಗಳ ಎರಡನೇಯ ಪುತ್ರ ಸುರೇಶ್ ಕುಲಾಲ್. ಈತ ಕಲಿತದ್ದು ೬ನೇ ತರಗತಿಯವರೆಗೆ. ಆದರೆ ಆಗಲೇ ಛದ್ಮವೇಷದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದರು. ನಾಟಕ ರಂಗವನ್ನು ಪ್ರವೇಶಿಸಿದ್ದು, ತಮ್ಮ ೧೫ನೇಯ ವಯಸ್ಸಿನಲ್ಲಿ, ಶಾಂತರಾಮ ಕಲ್ಲಡ್ಕರ ಲೈನ್ ತಾಗ್ಂಡಾ ನಾಟಕದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಅದರಲ್ಲಿನ ಅವರ ಪೋಲಿಸ್ ಕಾನ್‌ಸ್ಟೇಬಲ್ ಪಾತ್ರ ಹಾಸ್ಯದಿಂದ ಕೂಡಿದುದಾಗಿತ್ತು. ಮುಂದೆ ಅವರು ಹೆಚ್ಚಾಗಿ ನಟಿಸಿದ್ದು ಹಾಸ್ಯ ಪಾತ್ರಗಳಲ್ಲೇ. ಬಿ.ಆರ್ ಕುಲಾಲ್ ರ ಮಂಗಳ ಸೂತ್ರ, ಸತ್ಯ ಪನ್ಲೆ ನಾಟಕದಲ್ಲಿ ಅವರು ಬಣ್ಣ ಹಚ್ಚಿದ್ದಾರೆ.
ಚಿತ್ರ ನಟ ಚೇತನ್‌ರವರ ’ಕಲಾಮಾತೆ ಕಲಾವಿದೆರ್ ಪಾಣೆಮಂಗಳೂರು’ ಇದರ ನೆಂಪು ನಿನ್ನದೇ,’ ಪುಲ್ಯಾನಗ ನಾಟಕದಲ್ಲಿ ಇವರು ಅಭಿನಯಿಸಿದ್ದಾರೆ. ಎಚ್.ಕೆ.ನಯನಾಡು ಅವರ ಮುಕ್ಕಾಲ್ ಮೂಜಿ ಘಳಿಗೆ, ಕಂಬುಲ ನಾಟಕದ ವಿನ್ಸಿ ಪಾತ್ರದಲ್ಲಿ ಜನಮೆಚ್ಚುಗೆ ಗಳಿಸಿದ್ದಾರೆ. ಗೋಪಾಲ್ ಅಂಚನ್‌ರ ಮುತ್ತು ಶಾಂತರಾಮ್ ಕಲ್ಲಡ್ಕರವರ ’ ಆಲ್ ಎನ್ನ ತಂಗಡಿ’, ಕಣ್ಣ್‌ಗ್ ತೋಜುನ ದೇವೆರ್’ ನಾಟಕದಲ್ಲಿ ಅಭಿನಯಿಸಿದ್ದಾರೆ. ಇಷ್ಟೆಲ್ಲಾ ಅನುಭವ ಪಡೆದ ಇವರು ಮುಂದೆ ಪ್ರವೇಶಿಸಿದ್ದು ದೇವದಾಸ್ ಕಾಪಿಕಾಡ್‌ರ ’ಚಾಪರ್‍ಕ’ ತಂಡವನ್ನು. ಕಾಪಿಕಾಡ್ ರವರ ‘ಈರ್ ಉಂಡರಾ’ ನಾಟಕದ ನಾಯಕನ ಪಾತ್ರ ವಹಿಸಿದರು. ಮುಂದೆ ಮೋನೆಗ್ ತಕ್ಕ ಪಾತೆರೊಡ್ಚಿ’ ಸಿ. ಕುಮಾರ್‌ರ ’ ಬದ್‌ಕ್‌ದ್ ಒರಿಂಡ, ನಾಟಕದಲ್ಲೂ ಬಣ್ಣ ಹಚ್ಚಿದ್ದಾರೆ. ಹೀಗೆ ೨೦ ವರ್ಷಗಳಿಂದ ತಮ್ಮನ್ನು ತಾವು ಅಭಿನಯದಲ್ಲಿ ತೊಡಗಿಸಿಕೊಂಡಿದ್ದಾರೆ.
ನಟನೆ ಮಾಡಿದ ಸಿನಿಮಾಗಳೆಲ್ಲಾ ಹಿಟ್ : ನಾಟಕದ ನಟನೆಯಲ್ಲಿ ಮಾತ್ರವಲ್ಲದೇ ತುಳು ಸಿನಿಮಾಗಳಾದ ಬರ್ಸ, ಚಂಡಿಕೋರಿ, ಏರಾ ಉಲ್ಲೆರ್, ಅರೆಮರ್‍ಲೆರ್, ಚಾಲಿಪೋಲಿಲು, ಸೂಂಬೆ ಚಿತ್ರಗಳಲ್ಲಿ ಒಳ್ಳೆಯ ಪಾತ್ರ ನಿರ್ವಹಣೆ ಮಾಡಿರುತ್ತಾರೆ. ಇನ್ನು ತೆರೆಕಾಣಲಿರುವ ತುಳು ಚಿತ್ರಗಳಾದ ರಾಪಟ, ಐಸಾಅಬಾಸ್ ಮತ್ತು ಕನ್ನಡ ಚಿತ್ರ ಪುರುಷೋತ್ತಮನ ಪ್ರಸಂಗ ಹಾಗೂ ಕನ್ನಡ ಧಾರವಾಹಿ ಕಲರ್‍ಸ್ ಕನ್ನಡ ಶಾಂತಂ ಪಾಪಂ ನಟಿಸಿರುತ್ತಾರೆ. ಬಾಲ್ಯದಲ್ಲೇ ನಾಟಕದಲ್ಲಿ ನಟನೆ ಮಾಡಿದ ಅನುಭವದಿಂದ ಬಂಟ್ವಾಳ ತಾಲೂಕಿನಲ್ಲಿ ಕೆಲವು ತಂಡಗಳ ನಾಟಕಗಳಿಗೆ ನಿರ್ದೇಶನವನ್ನೂ ಮಾಡಿರುತ್ತಾರೆ.
ನಟನೆಗೂ ಹಾಗೂ ನಿರ್ದೇಶನ ಮಾಡಿದ ನಾಟಕಕ್ಕೂ ಪ್ರಶಸ್ತಿ : ತುಳು ಸಿನೆಮಾ ತೆಲಿಕೆದ ಬೊಳ್ಳಿ ಸಿನಿಮಾದ ಮುಖ್ಯ ಖಳನಾಟಕನ ಪಾತ್ರಪಾಯಿಸನ್ ಸಿರಿಧರೆ ಪಾತ್ರಕ್ಕೆ ಉತ್ತಮ ಅಭಿನಯ ಪ್ರಶಸ್ತಿ, ಮುರುಘೇಂದ್ರ ಮಿತ್ರ ಮಂಡಳಿ ಪುಂಜಾಲಕಟ್ಟೆ ಇವರು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಂತೆ ನಡೆಸಿದ ನಾಟಕ ಸ್ಪರ್ಧೆಯಲ್ಲಿ ರಮಾ ಬಿ.ಸಿ.ರೋಡು ನಿರ್ದೇಶನದ ’ ಈಜನ ಏರ್’ ನಾಟಕದ ’ ಪಿ.ಸಿ.ಕೊಗ್ಗಣ್ಣ’ ಪಾತ್ರಕ್ಕೆ ಹಾಸ್ಯನಟ ವಿಭಾಗದಲ್ಲಿ ಮೊದಲ ಬಹುಮಾನ ದೊರೆತದ್ದು ಅವರ ಪ್ರತಿಭೆಗೆ ಸಂದ ಗೌರವವಾಗಿದೆ, ಇವರು ನಿರ್ದೆಶನ ನೀಡಿದ ನಾಟಕಗಳಾದ ತೆಲಿಕೆದ ಕಲಾವಿದೆರ್ ಕೊಲ ತಂಡದ ನಿಕುಲು ಎನ್ನಿಲೆಕ ಅತ್ತ್, ಇನಿಮುಟ ಇಂಚ ಆತಿಜಿ, ಪೊರ್ಲು ತೂವೊಡ್ಚಿ ಮತ್ತು ಓಂಶ್ರೀ ಕಲಾವಿದೆರ್ ಪಚ್ಚಿನಡ್ಕ ತಂಡಕ್ಕೆ ನಿರ್ದೇಶನ ಮಾಡಿದ ಅಂದ್ಂದ ಅಂದ್ ಪನ್ಲೆ ನಾಟಕಕ್ಕೆ ಬಿ.ಸಿ.ರೋಡಿನ ನಡೆದ ತಾಲೂಕು ಮಟ್ಟದ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಿರ್ದೇಶನ ಪ್ರಶಸ್ತಿ ಪಡೆದಿರುತ್ತಾರೆ.
ಇವರು ನಾಟಕ ರಂಗದಲ್ಲಿ ಉತ್ತಮ ಹೆಸರು ಮಾಡುವಲ್ಲಿ ಅನೇಕರ ಮಾರ್ಗದರ್ಶನವಿದೆ. ಮೊದಲನೆಯದಾಗಿ ಅವರ ಸಹೋದರ ತಿಮ್ಮಪ್ಪ ಕುಲಾಲ್ ಅವರಿಗೆ ಪ್ರೇರಣೆಯಾಗಿದ್ದಾರೆ. ದಿ| ಕೃಷ್ನ ಬಿ. ಅಜೆಕಲರವರು ನಾಟಕದ ಬಗ್ಗೆ ಅವರಿಗೆ ಮಾರ್ಗದರ್ಶನವಿತ್ತಿದ್ದಾರೆ. ಮನೆಯವರ ಸಂಪೂರ್ಣ ಸಹಕಾರದೊಂದಿಗೆ ನಾನು ಈ ರಂಗದಲ್ಲಿ ಮುಂದುವರಿಯಲು ಸಾಧ್ಯವಾಗಿದೆ.ಈಗ ತನ್ನ ಜೀವನ ನಡೆಸಲು ಸಂಪೂರ್ಣವಾಗಿ ನಾಟಕ ರಂಗವನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದು ಮುಂದೆ ಯಕ್ಷಗಾನದ ಅಬಿನಯದಿಂದ ಯಕ್ಷರಂಗಕ್ಕೊಂದು ಕೊಡುಗೆ ನೀಡಲಿ ಎಂಬುದೇ ಹಾರೈಕೆ.

ಇತ್ತೀಚಿನ ಸುದ್ದಿ

ಜಾಹೀರಾತು