ಇತ್ತೀಚಿನ ಸುದ್ದಿ
Yadgiri | ನಾರಾಯಣಪುರ ಪೊಲೀಸ್ ಠಾಣೆ ಮುಂದೆ ವ್ಯಕ್ತಿಯ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ
27/04/2025, 16:14

ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gmail.com
ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆ ಮುಂದೆ ವ್ಯಕ್ತಿಯ ಶವವಿಟ್ಟು ಜೋಗಂಡಬಾವಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಜೋಗಂಡಬಾವಿ ಗ್ರಾಮದ ಗೌಡಪ್ಪ ಚವಾನಬಾವಿ ಎಂಬ ವ್ಯಕ್ತಿ ತನ್ನ ಹೊಲದ ಪಕ್ಕದ ಜಮೀನಿನವರೊಂದಿಗೆ ಬದುವಿನ ವಿಚಾರಕ್ಕೆ ಅನೇಕ ಬಾರಿ ಗಲಾಟೆ ನಡೆದಿದೆ. ಗಲಾಟೆಯ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ಬಂದರೆ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ ಎಂದು ಮೃತ ಗೌಡಪ್ಪನ ಪತ್ನಿ ಪೊಲೀಸರ ವಿರುದ್ಧ ಆರೋಪಿಸಿದ್ದಾರೆ.
ಗಲಾಟೆಯಿಂದ ನನ್ನ ಗಂಡ ಸಾವನ್ನಪ್ಪಿದ್ದಾರೆ. ಆತನ ಸಾವಿಗೆ ಪೊಲೀಸರು ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತ ಗೌಡಪ್ಪನ ಸಾವಿಗೆ ನ್ಯಾಯ ಒದಗಿ ಸಬೇಕು ಎಂದು ಮೃತನ ಸಂಬಂಧಿಕರು ಪೋಲಿಸ್ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತನ ಪತ್ನಿ ಆರೋಪಿಸಿರುವಂತೆ ಈ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಇದೆಯಾ ಅಥವಾ ಈತನ ಸಾವಿನ ಹಿಂದೆ ಏನಾದರೂ ಬೇರೆ ಕಾರಣವಿದೆಯಾ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬರಲಿದೆ.
ಈ ಪ್ರಕರಣದ ಕುರಿತು ಪ್ರತಿಭಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತ್ರಕರ್ತರೊಂದ. ಇದೇ ತಿಂಗಳು 20, ದಿನಾಕದಂದು ಅವರ ಸ್ವಂತ ಹೊಲದಲ್ಲಿ ಬಿದ್ದಿದರು ಅದನ್ನು ನೋಡಿದ ಅವರ ಧರ್ಮಪತ್ನಿ ಕೊಡಲೇ ಅವರ ಅವರ ಬಂದುಬಂಧವರಿಗೆ ವಿಷಯ ತಿಳಿಸಿ ಅವರನ್ನು ಬಾಗಲಕೋಟದ ಕೇರೋಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅವಾಗ ಅಲ್ಲೆಯೇ ಎಂ.ಎಲ್.ಸಿ. ಮಾಡಿಸಿದರೆ ಅವಾಗ ನಮ್ಮ ಗಮನಕ್ಕೆ ಬಂದಿರೋದು ಅದನ್ನ ತಿಳಿದ ತಕ್ಷಣವೇ ನಮ್ಮ ಸಿ.ಪಿ.ಐ. ರವಿಕುಮಾರ್ ಅವರು ಖುದ್ದಾಗಿ ಧವಿಸಿ ಅಲ್ಲಿಯ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಪೋಸ್ಟಮಾಟಮ್ ಮಾಡಿಸಿದರೆ .
ಸಾವಿಗೆ ಕಾರಣ ಇಂಟರ್ನಲ್ ಬಿಲ್ಡಿಂಗ್ ನಿಂದ ಸಾವನ್ನು ಅಪ್ಪಿದ್ದಾರೆ. ಪೋಸ್ಟಮಾಟಮ್ ರಿಪೋಟ್ ಬಂದಿಲ್ಲ ಬಂದ ತಕ್ಷಣ ಮುಂದಿನ ಕ್ರಮ ತಗೆದುಕೊಳ್ಳುತ್ತೇನೆ ಅಂದರು.
ಮೃತ ಪಟ್ಟವನ ಗೌಡಪ್ಪ ಎಂಬವರು 37 ವರ್ಷದ ವ್ಯಕ್ತಿ ಯಾಗಿದ್ದು ಇವರು ಜೋಗಂಡಭಾವಿ ನಿವಾಸಿ ಇವರಿಗೆ 5 ಜನ ಮಕ್ಕಳು ಇದ್ದರು 3 ಹೆಣ್ಣುಮಕ್ಕಳು 2 ಗಂಡು ಮಕ್ಕಳು ಇದ್ದರೆ.