ಇತ್ತೀಚಿನ ಸುದ್ದಿ
‘ಯಾಸ್’ ಚಂಡಮಾರುತದ ಭೀತಿ : ಮೇ 29 ರವರೆಗೆ 25 ರೈಲುಗಳ ಸಂಚಾರ ರದ್ದು
25/05/2021, 07:27
ನವದೆಹಲಿ(reporterkarnataka news) :
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ‘ಯಾಸ್’ ಚಂಡಮಾರುತವಾಗಿ ಪರಿವರ್ತನೆಗೊಂಡು ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಮೇ 24 ರಿಂದ ಮೇ 29ರ ನಡುವೆ 25 ರೈಲುಗಳನ್ನು ರದ್ದು ಗೊಳಿಸಲಾಗಿದೆ ಎಂದು ಪೂರ್ವ ರೈಲ್ವೆ ತಿಳಿಸಿದೆ.
ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಶನಿವಾರ ಬೆಳಿಗ್ಗೆ ರೂಪುಗೊಂಡ ಕಡಿಮೆ ಒತ್ತಡದ ಪ್ರದೇಶವು
ವಾಯುಭಾರ ಕುಸಿತಕ್ಕೆ ತೀವ್ರಗೊಂಡಿದೆ.
ಸೋಮವಾರ ಅದು ಯಾಸ್ ಚಂಡಮಾರುತವಾಗಿ ರೂಪುಗೊಂಡಿದೆ.
ಚಂಡಮಾರುತ ಮೇ 26ರ ಸಂಜೆ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿಗಳನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ
ಡಾ. ಮೊಹಾಪಾತ್ರ ಮಾಹಿತಿ ನೀಡಿದ್ದಾರೆ.
ಚಂಡಮಾರುತದ ಗಾಳಿಯ ವೇಗವು ಗಂಟೆಗೆ ಸುಮಾರು 155-165 ಕಿ.ಮೀ. ಎಂದು ಐಎಂಡಿ ಊಹಿಸಿತ್ತು, ಇದು ಗಂಟೆಗೆ 185 ಕಿ.ಮೀ. ವೇಗದಲ್ಲಿ ಬೀಸುತ್ತದೆ.