9:08 PM Sunday19 - April 2026
ಬ್ರೇಕಿಂಗ್ ನ್ಯೂಸ್
ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:… ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಕಡೆಗೂ ಸಿಕ್ತು ಸರ್ಕಾರಿ ನೌಕರಿ… ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಸನದಲ್ಲಿ ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ ಬಳ್ಳಾರಿ | ಪ್ಯಾರಚೂಟ್ ತರಬೇತಿ ವೇಳೆ ತಾಂತ್ರಿಕ ದೋಷ: 50 ಅಡಿ ಎತ್ತರದಿಂದ… ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು Udupi | ಕಾಪು ಬಳಿ ಭೀಕರ ಲಾರಿ-ಕಾರು ಅಪಘಾತ: ಓರ್ವ ಸಾವು; ಇಬ್ಬರು… ಮಂತ್ರಾಲಯದ ಬಳಿ ಭೀಕರ ಅಪಘಾತ: 8 ಮಂದಿ ಸಾವು, ತರೀಕೆರೆ ತಾಲೂಕಿನ ಇಬ್ಬರು…

ಇತ್ತೀಚಿನ ಸುದ್ದಿ

ಅರಸ್ ದೀರ್ಘಕಾಲ ಸಿಎಂ ಆಗಿದ್ದಾಗ ಅವರ ಜೊತೆ ನನ್ನ ತಂದೆ ಇದ್ದರು, ಈಗ ಸಿದ್ದರಾಮಯ್ಯ ಜತೆ ನಾನಿದ್ದೇನೆ: ಸ್ಪೀಕರ್ ಖಾದರ್ ಸಂತಸ

06/01/2026, 20:53

ಬೆಂಗಳೂರು(reporterkarnataka.com): ದೇವರಾಜ್ ಅರಸ್ ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದಾಗ ಅವರ ಜೊತೆ ನನ್ನ ತಂದೆ ಯು.ಟಿ.ಫರೀದ್ ಶಾಸಕರಾಗಿ ಜೊತೆಗಿದ್ದರು. ಈಗ ಸಿದ್ದರಾಮಯ್ಯರವರು ದೀರ್ಘಕಾಲ ಮುಖ್ಯ ಮಂತ್ರಿಯಾಗಿರುವಾಗ ಅವರ ಜೊತೆ ನಾನು ಉನ್ನತ ಹುದ್ದೆಯಲ್ಲಿರುವುದು ಸಂತೋಷದ ವಿಚಾರ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ರಾಜ್ಯದ ದೀರ್ಘಾವದಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸುತ್ತಿರುವ ಸಿದ್ದರಾಮಯ್ಯನವರಿಗೆ ತುಂಬು ಹೃದಯದ ಶುಭಾಶಯಗಳು!
ರಾಜ್ಯದ ರಾಜಕೀಯದಲ್ಲಿ ಕಾಲಘಟ್ಟವನ್ನ ಸ್ಥಾಪಿಸಿದವರು ನೀವು. ಸಿದ್ದರಾಮಯ್ಯನವರ ಕಾಲ ಎಂದು ಜನ ಗರ್ವದಿಂದ ಹೇಳಿಕೊಳ್ಳುವ ಅವಧಿ ಕೊಟ್ಟಿದ್ದೀರಿ.ನಿಮ್ಮ ಅವಧಿಯಲ್ಲಿ ನಾವು ಜೊತೆಗಿದ್ದೆವು ಎಂಬುದು ನಮಗೂ ಹೆಮ್ಮಯ ವಿಷಯ. ಈ ಹಿಂದೆ ದೇವರಾಜ್ ಅರಸು ಅವರು ದಾಖಲೆ ಮಾಡಿದ್ದ ಸಂದರ್ಭದಲ್ಲಿ ನಮ್ಮ ತಂದೆ ಫರೀದ್ ಅವರ ಜೊತೆ ಶಾಸಕರಾಗಿ ಕೆಲಸ ಮಾಡಿದ್ದರು.ಈಗ ನಿಮ್ಮ ಜೊತೆ ನಾನು ಸಹ ಉನ್ನತ ಜವಾಬ್ದಾರಿ ನಿರ್ವಹಿಸುತ್ತಿರುವುದು ಖುಷಿಯ ವಿಚಾರ.ಒಡೆಯುವ ಈ ಜಗತ್ತಿನಲ್ಲಿ ನೀವು ಒಂದಾಗಿಸುವವರಿಗೆ ನಾಯಕತ್ಬ ನೀಡಿದ್ದಿರಿ. ನೀವು ಹಿಡಿದಿರುವ ಸಮಾನತೆಯ ಹಣತೆಗೆ ನಾವು ಕೈಜೋಡಿಸುತ್ತೇವೆ.ಶೋಷಿತ ಪೀಡಿತ ಹಾಗೂ ದಮನಿತರ ಪರ ನಿಮ್ಮ ದನಿಗೆ ನಾವು ದನಿಗೂಡಿಸುತ್ತೇವೆ. ಈ ಸುಸಂದರ್ಭದಲ್ಲಿ ಸಮಾಜದ ಪಣ ಇನ್ನಷ್ಟು ಗಟ್ಟಿಗೊಳಸೋಣ…!
ಮಗದೊಮ್ಮೆ ಶುಭಾಶಯಗಳು ಮುಖ್ಯಮಂತ್ರಿಗಳೇ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು