3:45 AM Wednesday7 - January 2026
ಬ್ರೇಕಿಂಗ್ ನ್ಯೂಸ್
ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ… ಬಾಂಗ್ಲಾದವರು ನುಸುಳುವವರೆಗೆ ಕೇಂದ್ರ ಗೃಹ ಇಲಾಖೆ ನಿದ್ದೆಗೆ ಜಾರಿತ್ತಾ?: ಸಚಿವ ಕೃಷ್ಣ ಬೈರೇಗೌಡ… ಇನ್ಫೋಸಿಸ್ ನಿಂದ 53.5 ಎಕರೆ ಭೂಮಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ: ತನಿಖೆಗೆ… ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ ಉಪಮುಖ್ಯಮಂತ್ರಿ ಒಲವು ಲಾರಿ- ಬೈಕ್ ಡಿಕ್ಕಿ: ಗಾಯಾಳು ಬೈಕ್ ಸವಾರ ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ಸಾವು ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ ಜನರ ಆಶೀರ್ವಾದಿಂದ ಸಾಧ್ಯವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ; ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ: ಮುಖ್ಯಮಂತ್ರಿ Kodagu | ಸಾರ್ವಜನಿಕವಾಗಿ ಬಂದೂಕು ಪ್ರದರ್ಶನ: 3 ಮಂದಿ ಆರೋಪಿಗಳ ಬಂಧನ ಸೋಶಿಯಲ್ ಮೀಡಿಯಾ ಪವರ್: 60 ವರ್ಷದ ವೃದ್ದನನ್ನು ಕುಟುಂಬದೊಂದಿಗೆ ಮತ್ತೆ ಒಂದಾಗಿಸಿದ ರೀಲ್ಸ್! ಜಗತ್ತಿನ 3ನೇ ಅತಿ ಎತ್ತರದ ಮೌಂಟ್ ಕೆನ್ಯಾ ಪರ್ವತ ಏರಿದ ಮಂಗಳೂರು ಮೂಲದ…

ಇತ್ತೀಚಿನ ಸುದ್ದಿ

ಅರಸ್ ದೀರ್ಘಕಾಲ ಸಿಎಂ ಆಗಿದ್ದಾಗ ಅವರ ಜೊತೆ ನನ್ನ ತಂದೆ ಇದ್ದರು, ಈಗ ಸಿದ್ದರಾಮಯ್ಯ ಜತೆ ನಾನಿದ್ದೇನೆ: ಸ್ಪೀಕರ್ ಖಾದರ್ ಸಂತಸ

06/01/2026, 20:53

ಬೆಂಗಳೂರು(reporterkarnataka.com): ದೇವರಾಜ್ ಅರಸ್ ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದಾಗ ಅವರ ಜೊತೆ ನನ್ನ ತಂದೆ ಯು.ಟಿ.ಫರೀದ್ ಶಾಸಕರಾಗಿ ಜೊತೆಗಿದ್ದರು. ಈಗ ಸಿದ್ದರಾಮಯ್ಯರವರು ದೀರ್ಘಕಾಲ ಮುಖ್ಯ ಮಂತ್ರಿಯಾಗಿರುವಾಗ ಅವರ ಜೊತೆ ನಾನು ಉನ್ನತ ಹುದ್ದೆಯಲ್ಲಿರುವುದು ಸಂತೋಷದ ವಿಚಾರ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ರಾಜ್ಯದ ದೀರ್ಘಾವದಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸುತ್ತಿರುವ ಸಿದ್ದರಾಮಯ್ಯನವರಿಗೆ ತುಂಬು ಹೃದಯದ ಶುಭಾಶಯಗಳು!
ರಾಜ್ಯದ ರಾಜಕೀಯದಲ್ಲಿ ಕಾಲಘಟ್ಟವನ್ನ ಸ್ಥಾಪಿಸಿದವರು ನೀವು. ಸಿದ್ದರಾಮಯ್ಯನವರ ಕಾಲ ಎಂದು ಜನ ಗರ್ವದಿಂದ ಹೇಳಿಕೊಳ್ಳುವ ಅವಧಿ ಕೊಟ್ಟಿದ್ದೀರಿ.ನಿಮ್ಮ ಅವಧಿಯಲ್ಲಿ ನಾವು ಜೊತೆಗಿದ್ದೆವು ಎಂಬುದು ನಮಗೂ ಹೆಮ್ಮಯ ವಿಷಯ. ಈ ಹಿಂದೆ ದೇವರಾಜ್ ಅರಸು ಅವರು ದಾಖಲೆ ಮಾಡಿದ್ದ ಸಂದರ್ಭದಲ್ಲಿ ನಮ್ಮ ತಂದೆ ಫರೀದ್ ಅವರ ಜೊತೆ ಶಾಸಕರಾಗಿ ಕೆಲಸ ಮಾಡಿದ್ದರು.ಈಗ ನಿಮ್ಮ ಜೊತೆ ನಾನು ಸಹ ಉನ್ನತ ಜವಾಬ್ದಾರಿ ನಿರ್ವಹಿಸುತ್ತಿರುವುದು ಖುಷಿಯ ವಿಚಾರ.ಒಡೆಯುವ ಈ ಜಗತ್ತಿನಲ್ಲಿ ನೀವು ಒಂದಾಗಿಸುವವರಿಗೆ ನಾಯಕತ್ಬ ನೀಡಿದ್ದಿರಿ. ನೀವು ಹಿಡಿದಿರುವ ಸಮಾನತೆಯ ಹಣತೆಗೆ ನಾವು ಕೈಜೋಡಿಸುತ್ತೇವೆ.ಶೋಷಿತ ಪೀಡಿತ ಹಾಗೂ ದಮನಿತರ ಪರ ನಿಮ್ಮ ದನಿಗೆ ನಾವು ದನಿಗೂಡಿಸುತ್ತೇವೆ. ಈ ಸುಸಂದರ್ಭದಲ್ಲಿ ಸಮಾಜದ ಪಣ ಇನ್ನಷ್ಟು ಗಟ್ಟಿಗೊಳಸೋಣ…!
ಮಗದೊಮ್ಮೆ ಶುಭಾಶಯಗಳು ಮುಖ್ಯಮಂತ್ರಿಗಳೇ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು