6:11 AM Tuesday24 - March 2026
ಬ್ರೇಕಿಂಗ್ ನ್ಯೂಸ್
ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್… ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌: ಡಿಸಿಎಂ ಡಿ.ಕೆ. ಶಿವಕುಮಾರ್ ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ ರಷ್ಯಾದಿಂದ ಮಂಗಳೂರಿಗೆ ಕಚ್ಚಾತೈಲ ತಂದ ಹಡಗು: ಅನ್‌ಲೋಡಿಂಗ್‌ ಆರಂಭ; ಎಂಆರ್‌ಪಿಎಲ್‌ಗೆ ರವಾನೆ ಶುರು ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಒಂಟಿ ಸಲಗ ಸೆರೆ ಕೈಗೆ ಕಂಟಕ? | ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್… ಮಸ್ಕಿ ಪುರಸಭೆ ಮುಖ್ಯಾಧಿಕಾರಿಗೆ ಹೆಚ್ಚುವರಿ ಹೊಣೆ: ಹೆಚ್ಚುತ್ತಿರುವ ರಸ್ತೆ, ನೀರು, ಸ್ವಚ್ಛತೆ ಸಮಸ್ಯೆ ರಂಗೇರಿದ ದಾವಣಗೆರೆ ಉಪ ಚುನಾವಣೆ ಸಮರ: ಕೈ-ಕಮಲ ಅಭ್ಯರ್ಥಿಗಳ ಆಸ್ತಿ ವಿವರ ಘೋಷಣೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ್ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ

ಇತ್ತೀಚಿನ ಸುದ್ದಿ

ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ ಆಗಲಿದೆ ಕಣ್ಣೀರ ಕತೆ

31/07/2025, 18:05

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterarnataka@gmail.com

ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ನಡೆದ ಘಟನೆಯೊಂದು ಕೇರಳದಲ್ಲಿ ಸಿನಿಮಾ ಆಗಿ ರೂಪ ಪಡೆಯಲಿದೆ. ನಿಜ ಘಟನೆಗಳನ್ನು ಸಿನಿಮಾ ಮಾಡುವಲ್ಲಿ ಪರಿಣಿತರಾಗಿರುವ ಮಲಯಾಳಿ ಚಿತ್ರರಂಗದವರು ಕಳೆದ ವರ್ಷ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಮಾದವನ್ನು ಸಿನಿಮಾ ಮಾಡಲಿದ್ದಾರೆ. ಸಿನಿಮಾಕ್ಕೆ ಕತೆ ಬರೆಯಲಿರುವುದು ಕೇರಳದ ಶಾಸಕ ಎಕೆಎಂ ಅಶ್ರಫ್. ಕಳೆದ ವರ್ಷ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಗುಡ್ಡ ಕುಸಿದಿತ್ತು. ಆ ಘಟನೆಯಲ್ಲಿ ಬರೋಬ್ಬರಿ 11 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಇಬ್ಬರ ಶವ ಈ ವರೆಗೆ ಸಿಕ್ಕಿಲ್ಲ. ಮೃತಪಟ್ಟವರಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್ ಸಹ ಇದ್ದರು. ಆದರೆ ಅರ್ಜುನ್ ಮೃತದೇಹ ಸಿಗದೇ ಇದ್ದ ಕಾರಣ ಆತ ಬದುಕಿದ್ದಾನೆಂದು ನಂಬಲಾಗಿತ್ತು. ಕೇರಳದಲ್ಲಿ ಅರ್ಜುನ್ ಬದುಕಿ ಬರಲೆಂದು ಲಕ್ಷಾಂತರ ಮಂದಿ ಪ್ರಾರ್ಥಿಸಿದ್ದರು. ಸಾಮೂಹಿಕ ಪ್ರಾರ್ಥನೆಗಳನ್ನು ಸಹ ನಡೆಸಿದ್ದರು. ಆದರೆ ಸತತ ಕಾರ್ಯಾಚರಣೆ ಬಳಿಕವೂ ಸಹ ಅರ್ಜುನ್ ಬದುಕಲಿಲ್ಲ. ಬರೋಬ್ಬರಿ ಮೂರು ತಿಂಗಳ ಬಳಿಕ ಅರ್ಜುನ್ ಮೃತದೇಹ ಪತ್ತೆ ಆಯ್ತು. ಅರ್ಜುನ್ ಹುಡುಕಾಟದ ಕಾರ್ಯಾಚರಣೆ ವೇಲೆ ಶಾಸಕ ಅಶ್ರಫ್ ಸ್ಥಳದಲ್ಲಿಯೇ ಹಾಜರಿದ್ದರು. ಎಲ್ಲ ಕಾರ್ಯಾಚರಣೆಗಳನ್ನು ಅವರು ಹತ್ತಿರದಿಂದ ಗಮನಿಸಿದರು. ಇದೀಗ ಅಶ್ರಫ್ ಅವರು ತಮ್ಮ ಆ ಅನುಭವವನ್ನು ಆಧರಿಸಿ ಶಿರೂರು ಗುಡ್ಡ ಕುಸಿತದ ಬಗ್ಗೆ ಕತೆ ಬರೆಯಲಿದ್ದಾರೆ. ಆ ಕಥೆಯೇ ಸಿನಿಮಾ ಸಹ ಆಗಲಿದೆ. ಕೋಯಿಕೋಡಿನ ಅರ್ಜುನ್ ಶವ ಹೊರತೆಗೆಯುವ ಕಾರ್ಯಾಚರಣೆ ಬಲು ರೋಚಕವಾಗಿತ್ತು. ಆ ರೋಚಕತೆ ಮತ್ತು ಅವರ ಕುಟುಂಬದ ಭಾವುಕತೆ, ಕೇರಳದ ಜನರು ಅರ್ಜುನ್​ಗಾಗಿ ಮರುಗಿದ್ದು ಎಲ್ಲವೂ ಸಿನಿಮಾಕ್ಕೆ ವಸ್ತುವಾಗಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು