11:05 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ವಿವಿ ಅಂತಾರಾಷ್ಟ್ರೀಯ ಯೋಗ ಕಾರ್ಯಾಗಾರದಲ್ಲಿ ಪುತ್ತೂರಿನ ನೃತ್ಯೋಪಾಸನದಿಂದ ‘ನೃತ್ಯೋಹಂ’

30/01/2024, 15:22

ಕೊಣಾಜೆ(reporterkarnataka.com): ಮಂಗಳೂರು ವಿಶ್ವವಿದ್ಯಾಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಹಾಗೂ ಧರ್ಮನಿಧಿ ಯೋಗಪೀಠವು ದಕ್ಷಿಣ ಕೊರಿಯಾದ ವಾಂಕ್ ವಾಂಗ್ ಡಿಜಿಟಲ್ ಯುನಿವರ್ಸಿಟಿ ಸಹಯೋಗದೊಂದಿಗೆ ಏರ್ಪಡಿಸಿದ ‘ ಇಂಟರ್ ನ್ಯಾಷನಲ್ ಯೋಗ ಟೀಚರ್ಸ್ ಟ್ರೈನಿಂಗ್ ಕಾರ್ಯಾಗಾರದಲ್ಲಿ ಪುತ್ತೂರಿನ ವಿದುಷಿ ಶಾಲಿನಿ ಆತ್ಮಭೂಷಣ್ ಅವರ ನೃತ್ಯೋಪಾಸನಾ ಕಲಾ ಅಕಾಡೆಮಿ (ರಿ.) ಪುತ್ತೂರು ಇವರಿಂದ ನೃತ್ಯೋಹಂ ಭರತನಾಟ್ಯ ಕಾರ್ಯಕ್ರಮ ವಿವಿಯ ವೀರೇಂದ್ರ ಹೆಗ್ಗಡೆ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ವಿದೇಶದಿಂದ ಬಂದ ಯೋಗ ಪ್ರತಿನಿಧಿಗಳಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಏರ್ಪಡಿಸಿದ ಈ ಕಾರ್ಯಕ್ರಮವು ಪುಷ್ಪಾಂಜಲಿಯೊಂದಿಗೆ ಆರಂಭಗೊಂಡಿತು. ಒಂದೂವರೆ ಗಂಟೆಗಳ ಕಾಲ ನಡೆದ ಈ ನೃತ್ಯ ಕಾರ್ಯಕ್ರಮದಲ್ಲಿ ಅರ್ಧನಾರೀಶ್ವರ ಸ್ತುತಿ, ವೇಲವ ಎಂದು ಆರಂಭಗೊಂಡ ಸುಬ್ರಹ್ಮಣ್ಯನ ಕುರಿತಾದ ನೃತ್ಯ, ಭಜನ್ ಶೈಲಿಯ ಮರಾಠಿ ಹಾಡಿನ ಬೊಮ್ಮ ಬೊಮ್ಮ, ಕನ್ನಡ ಗೀತೆಗಳಾದ ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ, ಕುವೆಂಪು ಅವರ ಕುಣಿಯೋಣಾರು, ಕಾಂತಾರದ ಜನಪ್ರಿಯ ಹಾಡಾದ ವರಾಹರೂಪಂ,ತುಳು ಗೀತೆ ಎಂಚೆಂಚಿ ಪುಣ್ಣುಲು ಎಂಕುಲತ್ತ್ ಮೊದಲಾದ ಬಹುಭಾಷೆ ಮತ್ತು ಸಂಸ್ಕೃತಿಯ ಭಾವವನ್ನು ತಂಡ ನೃತ್ಯರೂಪದಲ್ಲಿ ಪ್ರದರ್ಶಿಸಿತು.
ಕೊನೆಯಲ್ಲಿ ಯೋಗ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಪ್ರೊ.ಕೃಷ್ಣಶರ್ಮ ಮತ್ತು ದಕ್ಷಿಣ ಕೊರಿಯಾ ವಿವಿಯ ಪ್ರತಿನಿಧಿಗಳು ವಿದುಷಿ ಶಾಲಿನಿ ಆತ್ಮಭೂಷಣ್ ಇವರನ್ನು ಗೌರವಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು