ಇತ್ತೀಚಿನ ಸುದ್ದಿ
ವಾಯ್ಸ್ ಆಫ್ ಆರಾಧನಾ: ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ಸ್ಕಂದ ಶೆಟ್ಟಿ ಮತ್ತು ಮೋಕ್ಷಾ ಆಯ್ಕೆ
04/10/2023, 22:50
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ಸ್ಕಂದ ಶೆಟ್ಟಿ ಹಾಗೂ ಮೋಕ್ಷಾ ಆಯ್ಕೆಯಾಗಿದ್ದಾರೆ.
ಸ್ಕಂದ ಶೆಟ್ಟಿಯು ಹರೀಶ್ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿಯ ಪುತ್ರ. ಮೂಲತಃ ಕುಂದಾಪುರ ತಾಲ್ಲೂಕು ಉಳ್ತುರು ಗ್ರಾಮದ ನಿವಾಸಿ. ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ. ಧಾರವಾಡದ ವಿದ್ಯಾಗಿರಿ ಜೆ.ಎಸ್. ಎಸ್. ಆಂಗ್ಲ ಮಾಧ್ಯಮ ಶಾಲೆ ಒಂದನೇ ತರಗತಿಯಲ್ಲಿ ಓದುತಿದ್ದಾನೆ. ಈತನ ಹವ್ಯಾಸಗಳು ಚಿತ್ರಕಲೆ, ಸಂಗೀತ, ಕಥೆ ಹೇಳುದು, ನಟನೆ, ಯೋಗ. ಪ್ರಸ್ತುತ ಈತ ಸಂಗೀತವನ್ನು ಗುರುಗಳಾದ ಮೀನಾಕ್ಷಿ ಅವರಲ್ಲಿ, ಯೋಗವನ್ನು ಗುರುಗಳಾದ ಸ್ವಪ್ನಾ ಅವರಲ್ಲಿ ಕಲಿಯುತಿದ್ದಾನೆ. ಇವನು ದೇಶದ ರಾಜ್ಯಗಳು, ರಾಜಧಾನಿ, ರಾಜ್ಯದ ಜಿಲ್ಲೆಗಳು, ದೇಶದ ಪ್ರಧಾನ ಮಂತ್ರಿ ಹೆಸರು, ನದಿಗಳು ಮತ್ತು ಉಗಮಸ್ಥಾನಗಳು, ಜ್ಞಾನಪೀಠ ಪಡೆದವರ ಹೆಸರುಗಳು,300ಕ್ಕೂ ಅಧಿಕ ಸಾಮಾನ್ಯಜ್ಞಾನ ಪ್ರಶ್ನೆಗಳು, ಶ್ಲೋಕಗಳು , ಭಜನೆಗಳು ಹೀಗೆ ವಿವಿಧ ರೀತಿಯ ಪ್ರತಿಭೆಯನ್ನು ಗುರುತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಅವಾರ್ಡ್ 2022, Karnataka Achiever’s books Award, ವಾಯ್ಸ್ ಆಫ್ ಆರಾಧನಾ ವರ್ಷದ ಸಾಧಕ ಪ್ರಶಸ್ತಿ, ಚಿಣ್ಣರ ಜಗಲಿಯಲ್ಲಿ ಚಿತ್ರಕಲೆಗೆ ಪ್ರಶಸ್ತಿ, ವಿಜಯಪಥ ಅವರಿಂದ ವರ್ಷದ ಸಾಧಕ ಪ್ರಶಸ್ತಿ, ಅಕ್ಷರ ಫೌಂಡೇಶನ್ ನಿಂದ ಸ್ವರ್ಣ ಕನ್ನಡಿಗ ಪ್ರಶಸ್ತಿ, ಇಗ್ನೈಟ್ ಎಜುಕೇಷನಲ್ ಇನ್ಸ್ಟಿಟ್ಯೂಟ್ ನಿಂದ ಅಚೀವರ್ಸ್ ಅವಾರ್ಡ್ 2023, ಮಣಿಪಾಲ್ ರೇಡಿಯೋದಲ್ಲಿ ಚಿಣ್ಣರ ದನಿ ಹೀಗೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ.
ವಾಯ್ಸ್ ಆಫ್ ಆರಾಧನಾ ತಂಡದ ಬಾಲ ಪ್ರತಿಭೆ ಯಾದ ಮೋಕ್ಷಾ ಮಂಗಳೂರು 2015ರಂದು ಮಂಗಳೂರಿನಲ್ಲಿ ಜನಿಸಿದಳು. ಇವಳ ತಂದೆ ಲಕ್ಷ್ಮಿಕಾಂತ್ ಜೆ. ಬಂಗೇರ ಮಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ರೇಷ್ಮಾ ಆರ್ .ಅಮೀನ್ ವೃತ್ತಿಯಲ್ಲಿ ಟೀಚರ್. ಮೋಕ್ಷಾ ಕುಳಾಯಿಯ ರಾಯನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ತನ್ನ ಐದನೆಯ ವಯಸ್ಸಿನಲ್ಲಿಯೇ ಕಲಾ ಸಾರಥಿ ಕುಮಾರ್ ಮಾಲೆಮಾರ್ ಸಾರಥ್ಯದ ಅಂಬುರುಹ ಯಕ್ಷ ಕಲಾ ಕೇಂದ್ರದಲ್ಲಿ ಗುರುಗಳಾದ ‘ಮಹಿಮೆದ ಮಂತ್ರದೇವತೆ ಖ್ಯಾತಿಯ ವಿಜಿತ್ ಶೆಟ್ಟಿ ಆಕಾಶಭವನ ಅವರಿಂದ ಕಲಿಯುತ್ತಿದ್ದಾರೆ. ಭರತನಾಟ್ಯವನ್ನು ವಿದುಷಿ ಗೌರಿ ಶೈಲೇಶ್ ಅವರಿಂದ ಕಲಿಯುತ್ತಿದ್ದಾಳೆ. ಯೋಗವನ್ನು ಗುರುಗಳಾದ ಪ್ರತ್ಯಕ್ಷಾ ಅವರಿಂದ ಕಲಿಯುತ್ತಿದ್ದಾಳೆ. ಈಕೆ ತಮ್ಮ ಶಾಲೆಯಲ್ಲಿ ಸ್ಕೇಟಿಂಗ್ ಡ್ಯಾನ್ಸಿಂಗ್ ಮ್ಯೂಸಿಕ್, ಸ್ವಿಮ್ಮಿಂಗ್, ಹಾಗೂ ಕರಾಟೆಯನ್ನು ಕಲಿಯುತ್ತಿದ್ದಾಳೆ. ನಿರೂಪಣೆ ಮಾಡುವುದು, ಚಿತ್ರ ಬಿಡಿಸುವುದು, ನೃತ್ಯ ಮಾಡುವುದು ಈಕೆಯ ಹವ್ಯಾಸಗಳು. ಅಂಬುರುಹ ಯಕ್ಷ ಕಲಾ ಕೇಂದ್ರದವರು ನಡೆಸುತ್ತಿದ್ದ ‘ದಿನಕ್ಕೊಂಜಿ ಪ್ರಶ್ನೆ, ವಾರಡೊಂಜಿ ಬಹುಮಾನ’ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾಳೆ. ಬೆಂಗಳೂರಿನ ಕರಾವಳಿ ಉತ್ಸವದಲ್ಲಿ ಏರ್ಪಡಿಸಿದ ಛದ್ಮವೇಷ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅಭಿಮನ್ಯು ಪ್ರಿಮಿಯರ್ ಲೀಗ್ ಇವರು ನಡೆಸಿದ ಹಲವಾರು ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನವನ್ನು ಹಾಗೂ ಸಾಯಿ ಡ್ಯಾನ್ಸ್ ಇನ್ಸ್ಟಿಟ್ಯೂಷನ್ ಇವರು ನಡೆಸಿದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಸಂಗೀತ, ಏಕಪಾತ್ರ ಅಭಿನಯ ಮುಂತಾದ ಹಲವಾರು ಚಟುವಟಿಕೆಗಳಲ್ಲಿ ಪ್ರಥಮ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ. ಅಂಬುರುಹ ಯಕ್ಷ ಕಲಾ ಕೇಂದ್ರದ ಯಕ್ಷಪಂಚಮಂ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದ್ದಾರೆ. ಯೋಗ ಗುರುಗಳಾದ ಶ್ರೀರಂಗಪ್ಪ ಅವರ ತಪಸ್ವಿ ಯೋಗ ಕೇಂದ್ರದಲ್ಲಿ ಪ್ರಶಸ್ತಿ ಪತ್ರ ಸ್ಮರಣಿಕೆ ನೀಡಿ ಗೌರವಿಸಲಾಗಿದೆ.
ಆಕಾಶಭವನ ಎ1 ಫ್ರೆಂಡ್ಸ್ ಆಯೋಜಿಸಿದ್ದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಭರತನಾಟ್ಯವನ್ನು ಪ್ರದರ್ಶಿಸಿ, ಸ್ಮರಣಿಕೆಯನ್ನು ಪಡೆದುಕೊಂಡಿದ್ದಾಳೆ. ಪ್ರಸ್ತುತ ಪದ್ಮಶ್ರೀ ನಿಡ್ಡೋಡಿ ನಾಯಕತ್ವದ ‘ವಾಯ್ಸ್ ಆಫ್ ಆರಾಧನಾ’ ತಂಡದಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದು ತನ್ನ ಕಲಾ ನೈಪುಣ್ಯತೆಯನ್ನು ಎಲ್ಲೆಡೆ ಪಸರಿಸುವಲ್ಲಿ ಕಾರ್ಯಶೀಲರಾಗಿದ್ದಾಳೆ.