3:43 PM Sunday14 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ಜನಿತ್ ಜೆ.ಎನ್. ಹಾಗೂ ಪ್ರಾಪ್ತಿ ಎಂ. ಆಯ್ಕೆ

11/10/2022, 14:26

ಮೂಡುಬಿದರೆ(reporter Karnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ಜನಿತ್ ಜೆ.ಎಸ್. ಹಾಗೂ ಪ್ರಾಪ್ತಿ ಎಂ. ಆಯ್ಕೆಗೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಜಯಾನಂದ ಮತ್ತು ಅನಿತಾ ದಂಪತಿಯ ಪ್ರಥಮ ಮಗನೇ ಜನಿತ್ ಜೆ.ಎನ್. ಪ್ರಸ್ತುತ ಈತ ಸುರತ್ಕಲ್ ನ ಹೊಸಬೆಟ್ಟುವಿನಲ್ಲಿ ವಾಸವಾಗಿರುತ್ತಾನೆ. 13 ರ ಹರೆಯದ ಈತ ಸುರತ್ಕಲ್ ನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತನ ಹವ್ಯಾಸಗಳೆಂದರೆ ನೃತ್ಯ, ಭಾಷಣ ಮಾಡುವುದು, ಡ್ರಾಯಿಂಗ್, ಭಜನೆ, ಓದುವುದು ಇತ್ಯಾದಿ.


ನೃತ್ಯಾಭ್ಯಾಸವನ್ನು ಸ್ವಿಂಗ್ ಡ್ಯಾನ್ಸ್ ಕ್ರ್ಯೂ ಕುಳಾಯಿ ಇಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಇವನಿಗೆ ಭಾಷಣ ಸ್ಪರ್ಧೆಯಲ್ಲಿ ಶಾಲಾ ಮಟ್ಟದಲ್ಲಿ ಅನೇಕ ಬಹುಮಾನಗಳು ಬಂದಿರುತ್ತದೆ. ಕೃಷ್ಣವೇಷ, ಛದ್ಮ ವೇಷ ಸ್ಪರ್ಧೆಗಳಲ್ಲಿ ಕೂಡಾ ಬಹುಮಾನಗಳು ಬಂದಿರುತ್ತದೆ. ಹಾಗೇನೆ ವಾಯ್ಸ್ ಆಫ್ ಆರಾಧನದ ತಿಂಗಳ ವಿಜೇತ ಕೂಡಾ ಆಗಿದ್ದಾನೆ. ಇನ್ನೂ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಯಾವುದಕ್ಕೂ ಕಡಿಮೆಯೇನು ಇಲ್ಲ. ಇವನು ಅನೇಕ ಕಡೇ ಸ್ಟೇಜ್ ಗಳಲ್ಲಿ ಡ್ಯಾನ್ಸ್ ಕಾರ್ಯಕ್ರಮ ನೀಡಿರುತ್ತಾನೆ.
ಒಂದು ವರ್ಷದಿಂದ ವಾಯ್ಸ್ ಅಫ್ ಆರಾಧನದಲ್ಲಿ ಸಕ್ರೀಯ ಸದಸ್ಯನಾಗಿರುವುದರಿಂದ ಅವರು ನೀಡಿದಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಸ್ಪಂದನ ಟಿ.ವಿ, ಚಾನೆಲ್ 9 ಇದರಲ್ಲಿ ನೃತ್ಯ ಕಾರ್ಯಕ್ರಮವನ್ನು ಕೂಡಾ ಕೊಟ್ಟಿರುತ್ತಾನೆ. ಅನೇಕ ಕಡೇ ವಾಯ್ಸ್ ಆಫ್ ಆರಾಧನದ ಮುಖಾಂತರ ಸ್ಟೇಜ್ ಕಾರ್ಯಕ್ರಮ ನೀಡಿರುತ್ತಾನೆ. ಸಯನ್ಸ್ ಮಾಡೆಲ್ ಇದರಲ್ಲಿ ತುಂಬಾನೇ ಅಸಕ್ತಿ. ಹಾಗೇನೆ ವಾಲಿಬಾಲ್, ಕಬಡ್ಡಿಗಳೆಂದರೆ ಇವನ ಪಂಚಪ್ರಾಣ.

ಬಂಟ್ವಾಳ ತಾಲೂಕಿನ ವಿಟ್ಲದ ಮಾಮೇಶ್ವರ.ಎಂಬ ಊರಿನ ಮಧುಚಂದ್ರ ಗೌಡ ಹಾಗೂ ಶ್ರೀಲತಾ ದಂಪತಿಯ ಮಗಳಾಗದ ಪ್ರಾಪ್ತಿ ಎಂ.ವಿಟ್ಲದ ಸೈಂಟ್ ರೀಟಾ ಆಂಗ್ಲ ಮಾಧ್ಯಮದಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾಳೆ.. ಡಾನ್ಸ್ ಯಕ್ಷಗಾನ ಡ್ರಾಯಿಂಗ್ ಇವಳ ಹವ್ಯಾಸ. ವಿಟ್ಲದ ಶಿವಂ ಡಾನ್ಸ್ ಅಕಾಡೆಮಿ ಯಲ್ಲಿ ನೃತ್ಯವನ್ನು, ಆರ್.ಕೆ.ಯಕ್ಷಗಾನ ಕಲಾಕೇಂದ್ರದಲ್ಲಿ ಗುರುಗಳಾದ ಸಬ್ಬಣ್ಣಕೊಡಿ ರಾಮ ಭಟ್ ಇವರಲ್ಲಿ ಯಕ್ಷಗಾನ ತರಬೇತಿ ಪಡೆಯುತ್ತಿದ್ದಾಳೆ. ಕಳೆದ 10 ತಿಂಗಳಿಂದ ವಾಯ್ಸ್ ಆಫ್ ಆರಾಧನ ತಂಡದಲ್ಲಿ ಬಾಗವಹಿಸುತ್ತಿದ್ದಳೆ.100ಕ್ಕೂ ಅಧಿಕ ವೇದಿಕೆಗಳಲ್ಲಿ ನೃತ್ಯವನ್ನು ನೀಡಿರುತ್ತಾರೆ ಹಾಗೂ ಸ್ಪಂದನ ನಮ್ಮ ಕುಡ್ಲ ಕುಡ್ಲgot ಟ್ಯಾಲೆಂಟ್ TV ಶೋ ಗಳಲ್ಲಿ ಭಾಗವಹಿಸಿದ್ದಾಳೆ.

ಕರ್ನಾಟಕ ಜನಸ್ಪಂದನ ಟ್ರಸ್ಟ್ ನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಷಣ ಸ್ಪರ್ದೆಯಲ್ಲಿ ತೃತೀಯ ಬಹುಮಾನ ಪಡೆದಿರುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು