ಇತ್ತೀಚಿನ ಸುದ್ದಿ
‘ವಾಯ್ಸ್ ಆಫ್ ಆರಾಧನಾ’: ನವೆಂಬರ್ ತಿಂಗಳ ಟಾಪರ್ ಆಗಿ ಹನ್ವಿತಾ ಬಂಗಾರ ಹಾಗೂ ಅದಿತಿ ವಿಟ್ಲ ಆಯ್ಕೆ
01/12/2022, 21:10
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ನವೆಂಬರ್ ತಿಂಗಳ ಟಾಪರ್ ಆಗಿ ಹನ್ವಿತಾ ಬಂಗಾರ ಹಾಗೂ ಅದಿತಿ ವಿಟ್ಲ ಅವರು ಆಯ್ಕೆಗೊಂಡಿದ್ದಾರೆ.
ಹನ್ವಿತ ಬಂಗಾರ ಬೆಂಗಳೂರು ರಾಮನಗರದ ಪ್ರತಿಭೆ. ರಾಮನಗರ ಚನ್ನಮಾನಹಳ್ಳಿ ಕಿಂಗ್ಸ್ಟನ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
ರಮೇಶ್ ಎಚ್. ಆರ್. ಹಾಗೂ ರಂಜಿತಾ ಬಿ.ಎಲ್. ದಂಪತಿ ಪುತ್ರಿಯಾದ ಆಕೆ ಸ್ಟೇಜ್ ಶೋ – ಸಂಸ್ಕೃತ ಸಿರಿ ಕಾರ್ಯಕ್ರಮದಲ್ಲಿ ಫೋಟೋ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾಳೆ. ಆಮಂತ್ರಣ ಪರಿವಾರ ಹಾಗೂ ಕಲಾ ಪ್ರತಿಭೆಗಳು ಆಯೋಜಿಸಿದ ಗಾಯನ ಸ್ಪರ್ಧೆಯಲ್ಲಿ ವಿಜೇತಳಾಗಿದ್ದಾಳೆ. ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ನೃತ್ಯ ಸ್ಪರ್ಧೆ ಯಲ್ಲಿ ಬಹುಮಾನ ಪಡೆದಿದ್ದಾಳೆ. ಸ ರಿ ಗ ಮ ಪ ಲಿಟಲ್ ಚಾಂಪ್ 19ರ ಆಡಿಷನ್ ನಲ್ಲಿ ಫೈನಲ್ ತನಕ ಹೋಗಿದ್ದಾಳೆ. ಗಾಯನ, ನೃತ್ಯ,ಕಥೆ ಹೇಳೋದು, ಚಿತ್ರಕಲೆ, ಸ್ಪೋರ್ಟ್ಸ್ ಜನಪದ ಗೀತೆಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾಳೆ.
ಶ್ರೀ ಕೃಷ್ಣನ ವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಆಕೆಗೆ
ಬಂದಿತ್ತು. ಸ್ಕೂಲ್ ನಲ್ಲಿ ಬಂಗಾರ ಟಾಪರ್ ಕೂಡ ಹೌದು. ವಾಯ್ಸ್ ಆಫ್ ಆರಾಧನ ಪೇಜ್ ನಲ್ಲಿ ಪ್ರತಿ ದಿನ ಭಾಗವಹಿಸಿ 3 ಮಿಲಿಯನ್ ವೀವ್ಸ್ ಪಡೆದು ಜನ ಮನ ಗೆದ್ದಿದ್ದಾಳೆ.
ಆದಿತಿ ವಿಟ್ಲ 9 ವರ್ಷದ ಪೋರಿ. ವಿಟ್ಲದ ಆರ್ ಎಂ ಎಸ್ ಶಾಲೆಯಲ್ಲಿ ಕಲಿಯುತ್ತಿದ್ದಾಳೆ.
ಪ್ರಶಾಂತ್ ಹಾಗೂ ಪಲ್ಲವಿ ದಂಪತಿ ಪುತ್ರಿಯಾದ ಈಕೆಗೆ ಡಾನ್ಸ್ ತುಂಬಾ ಇಷ್ಟ. ಅವಳು ತನ್ನ 4ನೇ ವರ್ಷ ದಲ್ಲಿ ಮೈತ್ರಿ ಕಲಾ ತಂಡದಲ್ಲಿ ಸೇರಿ ತನ್ನ ಕಲೆ ಯನ್ನು ವೇದಿಕೆಯಲ್ಲಿ ಹಂಚಿಕೊಳ್ಳಲು ಪ್ರಾರಂಭ ಮಾಡಿದ್ದಾಳೆ. ಹಾಗೆ ಮೈತ್ರಿ ಕಲಾ ತಂಡದ ರೂವಾರಿಯಾದ ಮಹದೇವ್ ಅವರ ಮಾರ್ಗದರ್ಶನದಲ್ಲಿ ನಿಜ ಘಟನೆಯಾಧರಿತ “ಶಾಂತಂಪಾಪಂ” ನಲ್ಲಿ ಸಣ್ಣ ಸಣ್ಣ ಪಾತ್ರವನ್ನು ಮಾಡಿದ್ದಾಳೆ.
ಮಹಾದೇವಿ ಧಾರಾವಾಹಿ ಯಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದಾಳೆ. ಕುಮಾರಸ್ವಾಮೀ ರವರ 59ನೇ ಹುಟ್ಟುಹಬ್ಬದ ಪ್ರಯುಕ್ತ 59 ಸಾಧಕರಿಗೆ ಸ್ಫೂರ್ತಿ ಕಲಾ ಪ್ರಶಸ್ತಿ ಸಮಾರಂಭದಲ್ಲಿ ಡಾನ್ಸ್ ಪ್ರೋಗ್ರಾಮ್ ನೀಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. ಕರಾಟೆ, ಸಂಗೀತ ಜತೆಗೆ ಕಳೆದ ಒಂದು ವರ್ಷದಿಂದ ಭರತನಾಟ್ಯ ಕಲಿಯುತ್ತಿದ್ದಾಳೆ. ಹಲವಾರು ಸ್ಟೇಜ್ ಪ್ರೋಗ್ರಾಮ್ ನೀಡಿದ್ದಾಳೆ. ಪ್ರವೀಣ್ ವಿಟ್ಲ ಇವರ ಜತೆ ಆಲ್ಬಮ್ ಸಾಂಗ್ ಮಾಡಿದ್ದಾಳೆ. 2022ರ ಶಿವಂ ಡಾನ್ಸ್ ಅಕಾಡೆಮಿ ವಿಟ್ಲ ಇವರು ನಡೆಸಿದ ನೃತ್ಯ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾಳೆ. ಪ್ರಸ್ತುತ ನಮ್ಮ ಕುಡ್ಲ ಡಾನ್ಸ್ ರಿಯಾಲಿಟಿ ಶೋನಲ್ಲಿದ್ದಾಳೆ. ಶಿವಂ ಅಕಾಡೆಮಿ ವಿಟ್ಲ ಇವರ ನೇತೃತ್ವ ದಲ್ಲಿ ಡಾನ್ಸ್ ಕಲಿಯುತ್ತಿದ್ದಾಳೆ.
ನವಂಬರ್ 2022ರಂದು ಮಂಗಳೂರಿನಲ್ಲಿ ನಡೆದ ಮಕ್ಕಳ ಡಾನ್ಸ್ ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಅಫ್ ಪಾತ್ರಳಾದ ಅದಿತಿ,
ವಾಯ್ಸ್ ಆಫ್ ಆರಾಧನದಲ್ಲಿ ಪ್ರತಿ ದಿನ ಭಾಗವಹಿಸುತ್ತಾಳೆ.