2:53 PM Wednesday28 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಮಾರ್ಚ್ ತಿಂಗಳ ಟಾಪರ್ ಆಗಿ ಹೆತಿಶ್ರೀ ಮತ್ತು ವರ್ಷಿಣಿ ಆಯ್ಕೆ

05/04/2023, 22:46

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಟಾಪರ್ ಆಗಿ
ಹೆತಿಶ್ರೀ ಹಾಗೂ ವರ್ಷಿಣಿ ಆಯ್ಕೆಗೊಂಡಿದ್ದಾರೆ.


ನವೀನ -ದೀಪಾ ದಂಪತಿಯ ಪುತ್ರಿ ಹೆತಿಶ್ರೀ ದಾವಣಗೆರೆ 5ರ ಹರೆಯದ ಬಾಲಕಿ. ಬೆಂಗಳೂರಿನ ಕೆ.ಎಲ್.ಇ ವಿದ್ಯಾಸಂಸ್ಧೆಯಲ್ಲಿ ಎಲ್ ಕೆಜಿ ಓದುತ್ತಿದ್ದಾಳೆ. ಈಕೆ ಸಂಗೀತ, ಡ್ಯಾನ್ಸ್ ಮತ್ತು ಡ್ರಾಯಿಂಗನ್ನು ಕಲಿಯುತ್ತಿದ್ದಾಳೆ. ಹೆತಿಶ್ರೀ ತನ್ನ 4ನೇ ವಷ೯ದಲ್ಲಿ ರಾಜ್ಯಮಟ್ಟದ ಆಕಷ೯ಕ ಫೋಟೋ ಸ್ಪಧೆ೯ಯಲ್ಲಿ ಭಾಗವಹಿಸಿ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಮತ್ತು ಇಂಡಿಯಾ ಬುಕ್ ಆಫ್ ರೆಕಾ೯ಡನಲ್ಲಿ ಪ್ರಶಂಸೆಯನ್ನು ಪಡೆದಿದ್ದಾಳೆ. ಕೆಲವು ಸಂಸ್ಧೆ ಮತ್ತು ಶಾಲೆಯ ವಿವಿಧ ಸ್ಪಧೆ೯ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾಳೆ. ವಾಯ್ಸ್ ಆಫ್ ಆರಾಧನ ಸಂಸ್ಧೆಯಿಂದ ಜನಮೆಚ್ಚುಗೆಯನ್ನು ಪಡೆದಿದ್ದಾಳೆ.
ವರ್ಷಿಣಿ ಬಹುಮುಖ ಪ್ರತಿಭೆಯ ಪುಟಾಣಿ.
ಓದೋದ್ರಲ್ಲಿ ಡಿಸ್ಟಿಂಕ್ಷನ್. ಈಕೆ ಮಿಥುನ್ ಮುದ್ದಯ್ಯ( ಡಿಕೆಡಿ ಸೀಸನ್5 contensnt ) ಜೊತೆ ಸ್ಟೇಜ್ ಪರ್ಫಾರ್ಮೆನ್ಸ್ ಕೊಟ್ಟು ಎಕ್ಸ್ಪ್ರೆಶನ್ ಕ್ವೀನ್ ಎಂಬ ಬಿರುದು ಪಡೆದಿದ್ದಾಳೆ. ಯೋಗದಲ್ಲಿ ನ್ಯಾಷನಲ್, ಇಂಟರ್ನ್ಯಾಷನಲ್ ಪ್ಲೇಯರ್ ಆಗಿದ್ದಾಳೆ. ಕೇಳೋ ಇಂಡಿಯಾದಲ್ಲಿ ಸೆಲೆಕ್ಟ್ ಆಗಿ ನಮ್ಮ ರಾಜ್ಯಕ್ಕೆ ಚಿನ್ನದ ಪದಕವನ್ನು ಪಡೆಯಲು ಹೆಜ್ಜೆ ಇಡುತ್ತಿದ್ದಾಳೆ. ಇವಳ ಗುರುಗಳಾದ ದೀಪಕ್ ಅವರ ಜೊತೆ ಒಲಂಪಿಕ್ ಗೆ ಸೆಲೆಕ್ಟ್ ಆಗಿದ್ದಾಳೆ. ಜತೆಗೆ ಭರತನಾಟ್ಯಂ ಕಲಿತಿದ್ದಾಳೆ.
ಶ್ಲೋಕವನ್ನು ತನ್ನ ತಂದೆಯಿಂದ ಕಲಿತು ಬೇರೆ ಮಕ್ಕಳಿಗೆ ಹೇಳಿ ಕೊಡುತ್ತಾಳೆ ಮತ್ತು ಸರಾಗವಾಗಿ ಹೇಳುತ್ತಾಳೆ. ವರ್ಷಿಣಿ ತಾಯಿಯ ಹೆಸರು ರಮ್ಯಾ, ತಂದೆ ಜಗದೀಶ್ ಅವರು. ವಾಯ್ಸ್ ಆಪ್ ಆರಾಧನ ದಲ್ಲಿ ಸಕ್ರೀಯ ವಾಗಿ ಭಾಗವಹಿಸಿ ಮೆಚ್ಚುಗೆ ಪಡೆದಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು