6:36 AM Thursday16 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಜನವರಿ ತಿಂಗಳ ವಿಜೇತರಾಗಿ ಶ್ರೀಮಾನ್ಯಾ ಭಟ್ ಕಡಂದಲೆ ಹಾಗೂ ನಿಹಾರಿಕ ದಾವಣಗೆರೆ ಆಯ್ಕೆ

07/02/2023, 23:47

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ಟಾಪರ್ ಆಗಿ
ಶ್ರೀಮಾನ್ಯಾ ಭಟ್ ಕಡಂದಲೆ ಹಾಗೂ ನಿಹಾರಿಕಾ ದಾವಣಗೆರೆ ಅವರು ಆಯ್ಕೆಯಾಗಿದ್ದಾರೆ.

ಕಡಂದಲೆ ಸುಬ್ರಮಣ್ಯ ಭಟ್ ಮತ್ತು ಶ್ರೀವಿದ್ಯಾ ಭಟ್ ದಂಪತಿಯ ಪುತ್ರಿಯಾದ ಶ್ರೀಮಾನ್ಯಾ ಭಟ್ ಕಡಂದಲೆ 4ರ ಹರೆಯದ ಪುಟ್ಟ ಬಾಲಕಿ. ಕಟೀಲು ಶ್ರೀದುರ್ಗಾಪರಮೇಶ್ವರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್.ಕೆ.ಜಿ ವಿದ್ಯಾರ್ಥಿನಿ. ಶ್ರೀಮಾನ್ಯಾ ಭಟ್ ಕಡಂದಲೆ ಬಹುಮುಖ ಪ್ರತಿಭೆಯ ಬಾಲಕಿ. ಸಂಗೀತ, ಭರತ್ಯನಾಟ್ಯ, ನೃತ್ಯ, ಸಿನೆಮಾ ಹಾಡು, ಭಗವದ್ಗೀತೆ, ವಿಷ್ಣು ಸಹಸ್ರನಾಮ, ಕ್ರೀಡೆ ಮುಂತಾದ
ಕ್ಷೇತ್ರಗಳಲ್ಲಿ ಅಪಾರ ಭರವಸೆ ಮೂಡಿಸಿರುವ ಪ್ರತಿಭೆ. ಈಗಾಗಲೇ ಅರವತ್ತು ಸಂವತ್ಸರಗಳು, ಹನ್ನೆರಡು ತುಳು ಮಾಸಗಳು, ಇಪ್ಪತ್ತೇಳು ನಕ್ಷತ್ರಗಳು, ವಾರದ ಏಳು ಪ್ರತಿನಾಮಗಳು, ತಿಥಿಗಳು, ಮಾಸಗಳು, ಕಥೆಗಳು, ಸುಭಾಷಿತಗಳು, ಭಾಷಣ , ಮಾತುಗಾರಿಕೆ, ಯಕ್ಷಗಾನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುತ್ತಾಳೆ .ಹೀಗೆ ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಶ್ರೀಮಾನ್ಯಾ ೨೦೨೨-೨೩ ರಲ್ಲಿ ಮೂವತ್ತಕ್ಕೂ ಹೆಚ್ಚು ವೇದಿಕೆಯಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ೨೦ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದುಕೊಂಡಿದ್ದಾಳೆ. ಪ್ರತೀ ದಿನ ವಾಯ್ಸ್ ಆಫ್ ಆರಾಧನಾ ದಲ್ಲಿ ಭಾಗವಹಿಸಿ ನವಂಬರ್ ಹಾಗೂ ಜನವರಿ ತಿಂಗಳ ವಿಜೇತಳಾಗಿದ್ದಾಳೆ. ಫೇಸ್ಬುಕ್ನಲ್ಲಿ ಜನ ಮೆಚ್ಚಿದ ಸೂಪರ್ ಸ್ಟಾರ್ ಮೆಚ್ಚುಗೆ ಪಡೆದಿದ್ದಾಳೆ. ಯುಗಪುರುಷ ಕಿನ್ನಿಗೋಳಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲರ ಮೆಚ್ಚುಗೆ ಪಡೆದು ಛೋಟಾ ಗಾಯಕಿ ಗೌರವವನ್ನು ಪಡೆದಿದ್ದಾಳೆ. ಸಂಸ್ಕೃತ ಸಿರಿ, ಆಮಂತ್ರಣ ಪರಿವಾರ, ಕಲಾ ಪ್ರತಿಭೆ ಪರಿವಾರ, ದಾಸ್ ಕುಡ್ಲ ಯು ಟ್ಯೂಬ್ ಚಾನಲ್ , ದೈಜಿ ವರ್ಲ್ಡ್ ಟಿವಿ ಕಾರ್ಯಕ್ರಮ, ಸ್ಪಂದನ ಟಿವಿ ಕಾರ್ಯಕ್ರಮ, ಶಿವಳ್ಳಿ ಸ್ಪಂದನ ಮಂಗಳೂರು ವಲಯ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜ್ ನುಡಿ ಹಬ್ಬ, ಹೀಗೆ ಹಲವು ವೇದಿಕೆಗಳಲ್ಲಿ ಸ್ಮರಣಿಕೆ , ಉಡುಗೊರೆ, ಸನ್ಮಾನಗಳು ಲಭಿಸಿವೆ . ಜೀ ಕನ್ನಡದಲ್ಲಿ ಸರಿಗಮಪ ಫೈನಲ್ ರೌಂಡ್ ಆಡೀಷನ್ ವರೆಗೆ ಹೋಗಿರುತ್ತಾಳೆ.

ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಬೆಳದಿಂಗಳ ಸಮ್ಮೇಳನ ಸಮಿತಿ , ಮಕ್ಕಳ ರಾಜ್ಯೋತ್ಸವ ಪ್ರಶಸ್ತಿ,ಅಕ್ಷರ ದೀಪ, ಸಾಹಿತ್ಯ ಕಲಾ ವೇದಿಕೆ, ಧಾರವಾಡ- ಬೆಳಗಾವಿ , ರಾಷ್ಟ ಮಟ್ಟದ ಒನ್ಲೈನ್ ಪ್ರತಿಭಾನ್ವೇಷಣೆಯಲ್ಲಿ ಸ್ವರ್ಣ ಕಲಾ ಪ್ರಶಸ್ತಿ , ವಿಜಯ ಪಥ ಯು ಟ್ಯೂಬ್ ಚಾನೆಲ್ ನಲ್ಲಿ
ನಡೆದ ಸಂಸ್ಕೃತ ಪಠಣ ಮತ್ತು ಅಭಿನಯ ಗೀತೆಯಲ್ಲಿ ಛೋಟಾ ಚಾಂಪಿಯನ್ ಪ್ರಶಸ್ತಿ ಲಭಿಸಿದೆ. ಅಜೆಕಾರಿನಲ್ಲಿ ಬಾಲ ಪ್ರತಿಭೋತ್ಸವ
ಮಕ್ಕಳ ಸಿರಿ ಗೌರವ, ಸನ್ಮಾನ ಸಿಕ್ಕಿರುತ್ತದೆ. ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಬಹುಮಾನ ಉಡುಗೊರೆ, ಸನ್ಮಾನ , ಗೌರವವನ್ನು ಪಡೆದಿರುತ್ತಾಳೆ.

ಬೆಂಗಳೂರಿನ ನವೀನ್ ಎಚ್. ಎಂ. ಹಾಗೂ ದೀಪಾ ಕೆ.ಎಚ್. ದಂಪತಿಯ ಪುತ್ರಿ ನಿಹಾರಿಕ ದಾವಣಗೆರೆ. ಈಕೆ ಬೆಂಗಳೂರಿನ ಕೆ.ಎಲ್.ಇ ವಿದ್ಯಾ ಸಂಸ್ಥೆಯಲ್ಲಿ ೨ನೇ ತರಗತಿಯನ್ನು ಓದುತ್ತಿದ್ದು ಇದರ ಜೋತೆ ಸಂಗೀತ ಕೀ ಬೋರ್ಡ್, ಭರತನಾಟ್ಯ, ಚಿತ್ರಕಲೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಇಂಡಿಯಾ ಬುಕ್ ಆಫ್ ರೆಕಾಡ್೯ ಮತ್ತು APJ ಅಬ್ದುಲ್ ಕಲಾಂ ವಲ್ಡ್ ರೆಕಾಡ್೯ ಮಾಡಿದ್ದಾಳೆ. 2022ರ ವಷ೯ದ ಸಾಲಿನ ಕಲಾದಪ೯ಣ ವಾಷಿ೯ಕ ಪ್ರಶಸ್ತಿ ಹಾಗೂ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾಳೆ. ವಾಯ್ಸ್ ಆಫ್ ಆರಾಧನ ದಲ್ಲಿ ಸಕ್ರೀಯ ವಾಗಿ ಭಾಗವಹಿಸುತ್ತಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು