2:08 AM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಜುಲೈ ತಿಂಗಳ ಟಾಪರ್ ಆಗಿ ಧನ್ವಿ ರೈ ಮತ್ತು ಸಮರ್ಥ ಭಾರಧ್ವಾಜ್ ಆಯ್ಕೆ

13/08/2023, 21:12

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜುಲೈ ತಿಂಗಳ ಟಾಪರ್ ಆಗಿ ಧನ್ವಿ ರೈ ಕೋಟೆ ಹಾಗೂ ಸಮರ್ಥ ಭಾರದ್ವಾಜ್ ಆಯ್ಕೆಯಾಗಿದ್ದಾರೆ.


ಪಾಣಾಜೆಯ ಧನ್ವಿ ರೈ ಕೋಟೆ, ರವಿಶಂಕರ್ ರೈ ಕೋಟೆ ಹಾಗೂ ವಿಜಯಲಕ್ಷ್ಮಿ ರೈ ಅವರ ಪುತ್ರಿ. ಪುತ್ತೂರಿನ
ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 8ನೇ ತರಗತಿ ಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ .
ಭರತನಾಟ್ಯ ವನ್ನು ಶಾಲಿನಿ ಆತ್ಮ ಭೂಷಣ್ ಅವರಲ್ಲಿ, ಯಕ್ಷಗಾನ ವನ್ನು ಬಾಲಕೃಷ್ಣ ಪೂಜಾರಿ ಉಡ್ಡಂಗಲ ಆರ್ಲಪದವು ಅವರಲ್ಲಿ, ಆಂಕರಿಂಗ್ ತರಬೇತಿಯನ್ನು ಕುಮಾರೇಶ್ ಕಣಿಯೂರು ಅವರಲ್ಲಿ, ಸಂಗೀತವನ್ನು ಗೀತಾ ಸಾರಡ್ಕ ಅವರಲ್ಲಿ ಹಾಗೂ ಮದ್ದಲೆ ತರಬೇತಿಯನ್ನು ಸುಧೀಶ್ ಪಾಣಾಜೆ ಅವರಲ್ಲಿ ಅಭ್ಯಸಿಸುತ್ತಿದ್ದಾರೆ. ಈಕೆ 100 ಕ್ಕೂ ಅಧಿಕ ವೇದಿಕೆಯಲ್ಲಿ ಊರ ಪರವೂರಲ್ಲಿ ತನ್ನ ಪ್ರತಿಭೆಯನ್ನು ಪರಿಚಯಿಸಿದ್ದಾಳೆ. ಹಲವಾರು ಸಂಘ ಸಂಸ್ಥೆಗಳು ಗೌರವಿಸಿ, ಸನ್ಮಾನಿಸಿ, ಪ್ರಶಸ್ತಿ ಪದಕ ಗಳನ್ನೂ ನೀಡಿವೆ. ಕೆಲವು ಸಭಾ ವೇದಿಕೆಗಳಲ್ಲಿ ಅತಿಥಿ ಯಾಗಿಯೂ ಭಾಗವಹಿಸಿರುತ್ತಾಳೆ. ಟಿವಿ ಕಾರ್ಯಕ್ರಮದಲ್ಲಿ ,ಭಾಷಣ, ನೃತ್ಯ ಹಾಗೂ ಮಾತುಕತೆ ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಿದ್ದಾಳೆ.
ಪುತ್ತೂರು ತಾಲೂಕು ಸುದ್ದಿ ವಾಹಿನಿ ಯವರ ಪ್ರತಿಭಾ ರಂಗದಿಂದ ಪ್ರತಿಭಾ ಪುರಸ್ಕಾರ, ಚಂದನ ಸಾಹಿತ್ಯ ವೇದಿಕೆ ಸುಳ್ಯ ಇವರಿಂದ ಚಂದನ ಕಲಾ ಪ್ರತಿಭೆ ಪ್ರಶಸ್ತಿ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜನ ಸ್ಪಂದನ ಟ್ರಸ್ಟ್ ವತಿಯಿಂದ ಕಲಾ ಸಿರಿ ರತ್ನ ಪ್ರಶಸ್ತಿ, ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ ಸಾಂಸ್ಕೃತಿಕ ಸಂಘ ಕಾಸರಗೋಡು ಇವರಿಂದ ಪ್ರಕ್ರತಿ ಕಲಾರತ್ನ ಪ್ರಶಸ್ತಿ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ದ ವತಿಯಿಂದ ರಾಷ್ಟ ಮಟ್ಟದ ಕರ್ನಾಟಕ ಪ್ರತಿಭಾ ರತ್ನ ಗೌರವ, ವಾಯ್ಸ್ ಆಫ್ ಆರಾಧನ ತಂಡದಿಂದ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ಮಕ್ಕಳ ಸಮ್ಮೇಳನ ದಲ್ಲಿ State Honor Award , ಆಮಂತ್ರಣ ಪರಿವಾರದಿಂದ ಮತ್ತು ಸಂಸ್ಕೃತ ಸಿರಿ ಪರಿವಾರದಿಂದ ಗೌರವ, ಪ್ರಗತಿ ಪರ ಸೇವಾ ಸಂಸ್ಥೆ ಮಂಡ್ಯ ಇವರಿಂದ ಕಲಾ ಸಿರಿ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯಿಂದ ಗೌರವ, ಪ್ರಗತಿ ಪರ ಸೇವಾ ಸಂಸ್ಥೆ (ರಿ) ಮಂಡ್ಯ ಇವರಿಂದ ಕಲಾಜ್ಯೋತಿ ಪ್ರಶಸ್ತಿ, ನೆಲಮಂಗಲ ಕನ್ನಡ ಹಬ್ಬ ದಲ್ಲಿ ಗೌರವ, ಚಂದನ ಕವಿ ಸಂಗಮ ದಲ್ಲಿ ಗೌರವವನ್ನು ಪಡೆದಿರುತ್ತಾಳೆ.
ಹಾಗೂ ಪ್ರೀವಂತ ಕ್ರಿಯೇಟಿವ್ ಸೆಂಟರ್ ನಿರ್ಮಾಣದ ಕಾರ್ಗಿಲ್ ಯೋಧರ ವಿಜಯೋತ್ಸವ ದ ವಿಶೇಷ ಕಾರ್ಯಕ್ರಮ ವನ್ನು ಮೊನ್ನೆ ಕಾರ್ಗಿಲ್ ದಿವಸದಂದು ಧನ್ವಿ ರೈ ನಡೆಸಿಕೊಟ್ಟಿರುತ್ತಾಳೆ.
ಸಮರ್ಥ ಭಾರಧ್ವಜ್
ಸುಳ್ಯ ತಾಲೂಕು ಬೆಳ್ಳಾರೆ ಚಾವಡಿಬಾಗಿಲು ಉಮಾಶಂಕರ ಭಟ್ ಮತ್ತು ಜಯಲಕ್ಷ್ಮಿ ಅವರ ಮಗ. ಸಮರ್ಥ ಭಾರದ್ವಾಜ್ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ಹವ್ಯಾಸ :ಯಕ್ಷಗಾನ ಚೆಂಡೆ ಮತ್ತು ಮದ್ದಲೆ, ಭಾಗವತಿಕೆ sports clay, modelling, drawings, dance, yoga vedaದಲ್ಲಿ ತೊಡಗಿಸಿಕೊಂಡಿದ್ದಾನೆ.
ಸಬ್ಬಣಕೋಡಿ ರಾಮ್ ಭಟ್ ಅವರ ಬಳಿ ಯಕ್ಷಗಾನ ಕಲಿಯುತ್ತಿದ್ದಾನೆ. ಚೆಂಡೆ ಮತ್ತು ಮದ್ದಲೆ ದೆಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಭಾಗವತಿಕೆ ಲಕ್ಷಿನಾರಾಯಣ ಭಟ್, ಯೋಗ ಸುಳ್ಯ ಕೇಶವಪುರ ಅವರಲ್ಲಿ ಕಲಿಯುತ್ತಿದ್ದಾನೆ‌. ಕೇಂದ್ರ ಸರಕಾರದ ರಾಷ್ಟ್ರ ಪರಿಷತ್ ನ
ಆಜಾದಿ ಮಹೋತ್ಸವ್ ನಲ್ಲಿ ಗೋಲ್ಡ್ ಮೆಡಲ್, 100 ಕ್ಕಿಂತ ಅಧಿಕ
ಯಕ್ಷಗಾನದಲ್ಲಿ ಪ್ರಶಸ್ತಿ ಲಭಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು