6:07 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ ತಂಡದಿಂದ ಸರಕಾರಿ ಶಾಲಾ ಯೋಜನೆ ಶುರು: ಪೆಂಚಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಕೊಡುಗೆ

28/11/2023, 22:47

ಮೂಡುಬಿದರೆ(reporterkarnataka.com): ವಾಯ್ಸ್ ಆಫ್ ಆರಾಧನಾ ತಂಡದ ವತಿಯಿಂದ ಸರಕಾರಿ ಶಾಲಾ ಮೊದಲ ಯೋಜನೆಯಾಗಿ ಮೂಡುಬಿದಿರೆ ತಾಲೂಕಿನ ಪೆಂಚಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರಿಂಟರ್ ನೀಡಲಾಯಿತು.
ಈ ಸಂದರ್ಭದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಸ್ನೇಹಲತಾ ಶ್ರೀಕಾಂತ ಭಟ್, ಅಭಿಷೇಕ್ ಶೆಟ್ಟಿ ಐಕಳ, ಶಾಲಾ ಯೋಜನೆಗೆ ಸಹಕರಿಸಿದ ತಂಡದ ಸದಸ್ಯರಾದ ಬಹುಮುಖ ಪ್ರತಿಭೆಗಳಾದ ಮನ್ಯು ಸಹೋದರರು, ಶ್ರೇಯಾ ಸುಳ್ಯ, ಮೋನಿಷ್ ವಿಟ್ಲ, ಮಾಹಿ ವಿಟ್ಲ,
ಮಾನ್ಯ ಭಟ್ ಕಡಂದಲೆ, ಗಾಯಕ ಅಶ್ಮಿತ್ ಎ.ಜೆ. ಮಂಗಳೂರು, ಉದ್ಯಮಿ ಅರುಣ್ ಅಜೆಕಾರು, ಬಸವರಾಜ ಮಂತ್ರಿ, ಬಾಲಪ್ರತಿಭೆಗಳಾದ ಸುಭೀಕ್ಷಾ ಪ್ರತೀಕ್ಷಾ, ಕೃಷಿಕರಾದ ಡಾ. ನಾಗರಾಜ ಶೆಟ್ಟಿ ಅಂಬೂರಿ, ಬಾಲಪ್ರತಿಭೆ ಶಾರ್ವಿ ಕಟ್ಟಾವು, ಮಜಾಭಾರತ ಖ್ಯಾತಿಯ ಆರಾಧನ ಭಟ್, ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುತ್ತಾ ಬರುತ್ತಿರುವ ಈ ತಂಡ ಇದರ ಜೊತೆ ಸರಕಾರಿ ಶಾಲಾ ಯೋಜನೆಯನ್ನು ಹಮ್ಮಿ ಕೊಂಡಿದೆ.


ಅರೋಗ್ಯದ ಜೊತೆ ಶಾಲೆಗೂ ಸೇವೆ ನೀಡಲಿದೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀವಾಣಿ ಮಯ್ಯ,ಶಿಕ್ಷಕಿ ಅರ್ಚನಾ, ಗೌರವ ಶಿಕ್ಷಕಿ ಗೀತಾ, ಪೋಷಕರಾದ ಜಯಕರ ಶೆಟ್ಟಿ, ಪ್ರಶಾಂತ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು