9:17 PM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ಜನವರಿ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಾನ್ವಿ ಹಾಗೂ ಪ್ರಾಪ್ತಿ ಶೆಟ್ಟಿ ಆಯ್ಕೆ

22/01/2022, 20:57

ಮಂಗಳೂರು(reporterkarnataka news): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಾನ್ವಿ ಎಸ್. ಜೋಯಿಸ್ ಹಾಗೂ ಪ್ರಾಪ್ತಿ ಶೆಟ್ಟಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಪದ್ಮನಾಭ ನಗರದ 9ರ ಹರೆಯದ ಸಾನ್ವಿ ಎಸ್ . ಜೋಯಿಸ್, ಕಾರ್ಮಲ್ ಸ್ಕೂಲ್ ನ ವಿದ್ಯಾರ್ಥಿನಿ. ತಂದೆ ಶ್ರೀಹರ್ಷ ಹಾಗೂ ತಾಯಿ ಸ್ವಾತಿ. ಸಾನ್ವಿ ಓರ್ವ ಬಹುಮುಖ ಪ್ರತಿಭೆಯ ಹುಡುಗಿ. ಅವಳಿಗೆ ಹಾಡುವುದು, ಚಿತ್ರಕಲೆ, ಪೇಂಟಿಂಗ್, ಆರ್ಟ್ ಅಂಡ್ ಕ್ರಾಫ್ಟ್ ಇನ್ನೂ ಹಲವು ವಿಷಯಗಳಲ್ಲಿ ತುಂಬಾ ಆಸಕ್ತಿ.

ಸಂಗೀತ ಸ್ಪರ್ಧೆಯಲ್ಲಿ ಅವಳಿಗೆ ಹಲವು ಬಹುಮಾನಗಳು ಬಂದಿವೆ. ಜೀ ಕನ್ನಡ ‘ಸರಿಗಮಪ’ ಮತ್ತು ಕಲರ್ಸ್ ಕನ್ನಡ ‘ಎದೆ ತುಂಬಿ ಹಾಡುವೆನು’ ಆಡಿಶನ್ ನಲ್ಲಿ ಭಾಗವಹಿಸಿದ್ದಳು. ಅವಳು ಜನಪದ ಗೀತೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಎರಡನೆ ಬಹುಮಾನ ಬಂದಿದೆ. 

ಮಂಗಳೂರಿನ ದಿನೇಶ್ ಶೆಟ್ಟಿ ಹಾಗೂ ರೂಪಾ ಶೆಟ್ಟಿ ಅವರ ಪುತ್ರಿಯಾದ ಪ್ರಾಪ್ತಿ ಶೆಟ್ಟಿ 11 ವರ್ಷದ ಬಹುಮುಖ ಪ್ರತಿಭೆಯ ಬಾಲಕಿ. ಮಂಗಳೂರಿನ ಕೊಂಚಾಡಿಯ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನಟನೆ, ಸಿಂಗಿಂಗ್, ಸ್ಪೀಚ್, ಫ್ಯಾನ್ಸಿ ಡ್ರೆಸ್ , ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾಳೆ. ಆ್ಯಕ್ಟಿಂಗ್ ಹಾಗೂ ಡ್ಯಾನ್ಸಿಂಗ್ ನಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದಾಳೆ.

ನಟನೆ ಹಾಗೂ ‘ಡ್ಯಾನ್ಸ್’ ಅನ್ನು ಮನೋಜ್ ಗಣೇಶ್ ಪುರ ಅವರ ಬಳಿ ಕೆಲವು ಸಮಯ ಅಭ್ಯಾಸ ಮಾಡಿದ್ದಾಳೆ. ಇತ್ತಿಚೀನ ಕೆಲವು ವರುಷಗಳಿಂದ ಯಾವುದೇ ಡ್ಯಾನ್ಸ್ ಕ್ಲಾಸ್ ಗೂ, ನಟನ ತರಗತಿಗೂ ಹೋಗದೇ ಅಭಿನಯಿಸುವ, ಡ್ಯಾನ್ಸ್  ಮಾಡುವ ಪ್ರತಿಭೆ ಹೊಂದಿದ್ದಾಳೆ. ‘ಕೃಷ್ಣ ವೇಷ’  , ‘ಡ್ಯಾನ್ಸ್’ , ‘Acting , ‘Singing , ‘speech ,  ‘fancy dress , ಹೀಗೆ ಹತ್ತಾರು ಹಲವಾರು ವೇದಿಕೆಗಳಲ್ಲಿ ಸನ್ಮಾನ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಮೀನ ಮತ್ತು ಚಿತ್ರಕಥೆ ಪ್ಲಸ್ ಕಥೆ ಕಿರುಚಿತ್ರದಲ್ಲಿ ಅಭಿ‌ನಯಿಸಿದ್ದಾಳೆ.


ಪ್ರೇಮ್ ಅವರ ಐದು ಭಾಷೆಗಳಲ್ಲಿ ತಯಾರಾದ album song ಗೆ ಹಿನ್ನಲೆ ಧ್ವನಿಯನ್ನು ನೀಡಿದ್ದಾಳೆ.ಸ್ಪೋರ್ಟ್ಸ್ ನಲ್ಲಿ ಜಿಲ್ಲಾ ಮಟ್ಟದಲ್ಲಿ , ಡ್ಯಾನ್ಸ್ ನಲ್ಲಿ ರಾಜ್ಯಮಟ್ಟದಲ್ಲಿ ಹಾಗೂ ಫ್ಯಾನ್ಸಿ ಡ್ರೆಸ್ ನಲ್ಲಿ ಜಿಲ್ಲಾ ಮಟ್ಟದಲ್ಲಿ  ಹಲವಾರು ಪ್ರಶಸ್ತಿಗಳು ಈಕೆಗೆ ಸಂದಾಯವಾಗಿದೆ.


ಇದೆಷ್ಟು ಅಲ್ಲದೇ ಹಲವಾರು ಶಾಲೆಗಳಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ action Song , ಯಕ್ಷಗಾನ fance dress , Dance ನಲ್ಲಿ ಹಲವಾರು ಬಹುಮಾನ ಪ್ರಶಸ್ತಿಗಳು ದೊರೆತಿವೆ. ಈಕೆಯ ಕಲಾಸಾಧನೆಯನ್ನು ಗುರುತಿಸಿ  2021ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು