4:37 AM Friday30 - January 2026
ಬ್ರೇಕಿಂಗ್ ನ್ಯೂಸ್
ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಏಪ್ರಿಲ್ ತಿಂಗಳ ಟಾಪರ್ ಆಗಿ ಭೀಮಪ್ಪ ಬೇನಾಳ ಮತ್ತು ರಿಶಾ ಆಯ್ಕೆ

12/05/2023, 14:33

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಏಪ್ರಿಲ್ ತಿಂಗಳ ಟಾಪರ್ ಆಗಿ ಭೀಮಪ್ಪ ಬೇನಾಳ ಹಾಗೂ ರಿಶಾ ಆಯ್ಕೆಯಾಗಿದ್ದಾರೆ.


ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ ಮಹೇಶ್ ಬೇನಾಳ ಹಾಗೂ ಚಂದ್ರಕಲಾ ಬೇನಾಳ ದಂಪತಿಯ ಪುತ್ರ ಭೀಮಪ್ಪ ಬೇನಾಳ. ಈತ ಬೆಂಗಳೂರಿನಲ್ಲಿ
2ನೇ ತರಗತಿ ವಿದ್ಯಾರ್ಥಿ. ಸಂಗೀತದಲ್ಲಿ ತುಂಬಾ ಆಸಕ್ತಿ ಹೊಂದಿದ್ದು, ಗುರುವಿಲ್ಲದೆ ಯೂಟ್ಯೂಬ್ ನೋಡಿಕೊಂಡು ತಂದೆಯ ಸಹಾಯದೊಂದಿಗೆ ಕೀಬೋರ್ಡ್ ನುಡಿಸುವುದು ಮತ್ತು ಹಾಡುವುದು ಕಲಿಯುತ್ತಿದ್ದಾನೆ. ಚಲನಚಿತ್ರ ಗೀತೆಗಳು, ಭಕ್ತಿಗೀತೆಗಳು, ದೇಶಭಕ್ತಿ ಗೀತೆಗಳು, ಜಾನಪದ ಗೀತೆಗಳು ಹಾಗೂ ದಾಸರ ಪದಗಳು ಮತ್ತು ವಚನಗಳನ್ನು, ಕೀಬೋರ್ಡ್ ನುಡಿಸುತ್ತಾ, ಹಾಡುತ್ತಾನೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಗಣೇಶನ ಹಬ್ಬ ಹೀಗೆ ಹಲವಾರು ಕಾರ್ಯಕ್ರಮದ ವೇದಿಕೆಗಳಲ್ಲಿ ಹಾಡಿ ಪ್ರಶಸ್ತಿಗಳನ್ನು ಪಡೆದಿದ್ದಾನೆ. ಆನ್ ಲೈನ್ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾನೆ. ಚಿತ್ರಕಲೆ ಹಾಗೂ ಕರಾಟೆಯಲ್ಲಿ ಬಹುಮಾನಗಳು ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ. ಪ್ರತೀ ದಿನ ವಾಯ್ಸ್ ಆಫ್ ಆರಾಧನದಲ್ಲಿ ಭಾಗವಹಿಸಿ ಅಕ್ಟೋಬರ್ ತಿಂಗಳು-2022 ಮತ್ತು ಏಪ್ರಿಲ್ ತಿಂಗಳು-2023 ವಿಜೇತರಾಗಿದ್ದಾನೆ.
ರಿಶಾ, ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಸುದರ್ಶನ್ ಕಾಂಚನ್ ಮತ್ತು ಅಶ್ವಿನಿ ದಂಪತಿಯ ಪುತ್ರಿ. 4 ವರ್ಷದ ಪುಟಾಣಿ ರಿಶಾ ಕುಂದಾಪುರ ವೆಂಕಟರಮಣ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಎಲ್ ಕೆಜಿ ಓದುತಿದ್ದಾಳೆ. ಈಕೆ ಸಂಗೀತ ಮತ್ತು ಡಾನ್ಸ್ ನಲ್ಲಿ ಆಸಕ್ತಿಯನ್ನು ಹೊಂದಿರುತ್ತಾಳೆ. ಈಕೆ ಸಂಸ್ಕೃತಿ ಸಿರಿ ನಡೆಸಿದ ಮುದ್ದುಕೃಷ್ಣ ಸ್ಪರ್ಧೆ ಯಲ್ಲಿ ತೃತೀಯ ಸ್ಥಾನ, ವಿಕೆ ಫರ್ನಿಚರ್ ನಡೆಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಹೆಲ್ಪಿoಗ್ ಹ್ಯಾಂಡ್ ಕುಂದಾಪುರ ಇವರು ನಡೆಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ನಿಧಿ ಕ್ರಿಯೇಷನ್ಸ್ ಪುತ್ತೂರು ನಡೆಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪಥಮ ಸ್ಥಾನ, ಅಕ್ಷರ ಕೋಚಿಂಗ್ ಸೆಂಟರ್ ನಡೆಸಿದ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅವರು ನಡೆಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ವಿಶೇಷ ಬಹುಮಾನ ಮತ್ತು ವಾಯ್ಸ್ ಆಫ್ ಆರಾಧನಾ ನಡೆಸಿದ ಮಕ್ಕಳ ದಿನಾಚರಣೆಯ ಫೋಟೋ ಸ್ಪರ್ಧೆಯಲಿ ಮೆಚ್ಚುಗೆ ಪಡೆದಿರುತ್ತಾರೆ. ನಿಧಿ ಕ್ರಿಯೇಷನ್ಸ್ ರವರ ಕ್ಯೂಟ್ ಬೇಬಿ ಫೋಟೋ ಸ್ಪರ್ಧೆಯಲ್ಲಿ ಮೆಚ್ಚುಗೆಯನ್ನು ಪಡೆದಿರುತ್ತಾರೆ. ಹೀಗೆ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾಳೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಡಿಸೆಂಬರ್ ಮತ್ತು ಏಪ್ರಿಲ್ ತಿಂಗಳ ವಿಜೇತೆ ಆಗಿರುತ್ತಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು