7:55 PM Sunday14 - September 2025
ಬ್ರೇಕಿಂಗ್ ನ್ಯೂಸ್
ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ…

ಇತ್ತೀಚಿನ ಸುದ್ದಿ

ವಿಶ್ವಕರ್ಮ ಸಮಾಜಕ್ಕೆ ಅವಮಾನ ಮಾಡುವಂತಹ ವಿಡಿಯೋ ಶೇರ್ ಮಾಡಿದ ಮಹಿಳೆ : ದೂರು ನೀಡಿದ ವಿವಿಧ ವಿಶ್ವಕರ್ಮ ಸಂಘಟನೆಗಳು

16/08/2021, 14:43

ಮಂಗಳೂರು(Reporterkarnataka.com)

ವಿಶ್ವಕರ್ಮ ಸಮಾಜದ ಮರದ ಕೆಲಸ ಮಾಡುವವರನ್ನು ಅವಹೇಳನ‌ ಮಾಡುವ ರೀತಿಯಲ್ಲಿ “ಕೆಲಸ ದಾಂತಿನ ಆಚಾರಿ ಬಾಲೆದ *** ಕೆತ್ತಿಯೆ” ಎನ್ನುವ ಮಾತನ್ನು ಅಳವಡಿಸಿದ ವಿಡಿಯೋ ತಯಾರಿಸಿ ಮಂಗಳೂರು ಸುರತ್ಕಲ್‌ನ ಸುಷ್ಮಾ ಎನ್ನುವವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದು, ಆದ್ದರಿಂದ ಸಮುದಾಯಕ್ಕೆ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಅವಮಾನ ಉಂಟಾಗಿದೆ ಎಂದು ಮೂಡಬಿದ್ರಿ ವಿಶ್ವಕರ್ಮ ಜಾಗೃತದಳ ಮೂಡಬಿದ್ರಿ ಪೋಲಿಸ್ ಠಾಣೆಗೆ ದೂರು ನೀಡಿದೆ.

ಸೋಷಿಯಲ್ ಮಿಡಿಯಾ (Instrgram) ಪೇಜ್‌ನಲ್ಲಿ ವಿಶ್ವಕರ್ಮ ಸಮಾಜವನ್ನು ದುರ್ಬಳಕೆ ಮಾಡಿ ಜಾತಿ ನಿಂದನೆ ಮಾಡಿದ ಅರೋಪದಡಿ ಸುರತ್ಕಲ್ ಕ್ರಷ್ಣಾಪುರ ನಿವಾಸಿ “ಸುಷ್ಮಾ” ಎಂಬವರ ವಿರುದ್ಧ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕೆಂದು ಮೂಡುಬಿದಿರೆ ವಿಶ್ವಕರ್ಮ ಜಾಗ್ರತದಳ , ಶ್ರೀ ಕಾಳಿಕಾಂಬಾ ಸೇವಾ ಸಮಿತಿ , ಕಾಷ್ಠ ಶಿಲ್ಪ , ಚಿನ್ನದ ಕೆಲಸಗಾರರ ಸಂಘ ದೂರಿನಲ್ಲಿ ತಿಳಿಸಿದೆ.

ವಿಶ್ವಕರ್ಮ ಒಕ್ಕೂಟದ ವತಿಯಿಂದ ಉಡುಪಿ ಸೆನ್ ಪೋಲಿಸ್ ಠಾಣೆಯಲ್ಲಿ ಸುಷ್ಮಾ ಮಯ್ಯ ವಿರುದ್ಧ ದೂರು ದಾಖಲಿಸಲಾಯ್ತು. ಈ ಸಂದರ್ಭದಲ್ಲಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ, ಪ್ರಧಾನ ಕಾರ್ಯದರ್ಶಿ ಮುರಳೀಧರ, ಅಲೆವೂರು ಯೋಗೀಶ ಆಚಾರ್, ಸತೀಶ್ ಆಚಾರ್ಯ ಪಡುಬಿದ್ರಿ,ಕಾಪು ವಿಶ್ವಕರ್ಮ ಯುವ ಸಂಘಟನೆ ಅಧ್ಯಕ್ಷರಾದ ಬಿಳಿಯಾರು ಸುಧಾಕರ ಆಚಾರ್ಯ, ಕಾರ್ಯದರ್ಶಿ ರತ್ನಾಕರ ಆಚಾರ್ಯ, ಹರೀಶ ಆಚಾರ್ಯ ಕಳತ್ತೂರು, ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಕಿಶೋರ್ ಆಚಾರ್ಯ, ವಿಶ್ವನಾಥ ಆಚಾರ್ಯ ಕಿದಿಯೂರು, ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು