7:17 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ವಿಶೇಷ ಚೇತನ ಮಕ್ಕಳ ಜತೆ ಖ್ಯಾತ ನಟ ಅನಂತನಾಗ್ 75ನೇ ಹುಟ್ಟುಹಬ್ಬ

05/09/2023, 13:47

ಮಂಗಳೂರು(reporterkarnataka.com): ದಿವ್ಯಾಂಗ ಮಕ್ಕಳನ್ನು ಬಹಳ ಪ್ರೀತಿಯಿಂದ ಸಲಹಿ, ಅವರ ಸರ್ವತ್ತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಅನಿರ್ವೇದ ಫೌಂಡೇಶನ್ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಖ್ಯಾತ ನಟ ಅನಂತನಾಗ್ ಹೇಳಿದರು.


ಅವರು ಕದ್ರಿ ಶಿವಭಾಗ್ ನಲ್ಲಿರುವ ಅನಿರ್ವೇದ ಫೌಂಡೇಶನ್ ಇದರ ಸ್ಥಳಾಂತರಿತ ನೂತನ ಕಟ್ಟಡ ಉದ್ಘಾಟಿಸಿ, ವಿಶೇಷ ಚೇತನ ಮಕ್ಕಳ ಜೊತೆಗೂಡಿ ತಮ್ಮ‌ 75 ನೇ ಜನ್ಮದಿನವನ್ನು ಆಚರಿಸಿದರು.
ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅನಂತನಾಗ್ ಅವರು ಮಕ್ಕಳಲ್ಲಿಯೇ ದೇವರನ್ನು ಕಾಣಬೇಕೆಂಬ ಉದಾತ್ತ ಚಿಂತನೆಯನ್ನು ಆನಂದಾಶ್ರಮದಲ್ಲಿ ತಮ್ಮ ಗುರುಗಳು ಹೇಳಿಕೊಟ್ಟಿದ್ದರು. ಇಂತಹ ದಿವ್ಯಾಂಗ ಮಕ್ಕಳಿಗೆ ದಾರಿದೀಪವಾಗಿರುವ ಸಂಸ್ಥೆಯ ಮುಖ್ಯಸ್ಥರಾದ ಡಾ. ಶ್ವೇತಾ ಅವರು ಮಕ್ಕಳ ಬಾಳಿನಲ್ಲಿ ದೇವರ ರೂಪವಾಗಿ ಬಂದಿದ್ದೀರಿ. ನಿಮ್ಮ ಸೇವೆ ಇನ್ನಷ್ಟು ದಿವ್ಯ ಚೇತನ ಮಕ್ಕಳಲ್ಲಿ ಬೆಳಕಾಗಿ ಬರಲಿ. ಈ ಸಂಸ್ಥೆಯ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಡಾ. ಶ್ವೇತಾ ಅವರು ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಎಲ್ಲರನ್ನು ವಂದಿಸಿದರು. ಕಾರ್ಪೋರೇಟರ್ ನವೀನ್ ಡಿಸೋಜ ಅವರು ಮಾತನಾಡಿ, ಪಾಲಿಕೆ ಮತ್ತು ವೈಯಕ್ತಿಕವಾಗಿ ಸಂಸ್ಥೆಗೆ ಅಗತ್ಯ ನೆರವನ್ನು ನೀಡಲು ಬದ್ಧ ಎಂದು ತಿಳಿಸಿದರು.‌
ಡಾ. ರವಿಚಂದ್ರ ಶುಭ ಹಾರೈಸಿದರು.‌‌‌ಅನಂತನಾಗ್ ಪತ್ನಿ ಗಾಯತ್ರಿ ನಾಗ್, ಮಗಳು ಅದಿತಿ, ಅಳಿಯ ವಿವೇಕ್, ಆತ್ಮೀಯರಾದ ಮಂಗಲ್ಪಾಡಿ ನರೇಶ್ ಶೆಣೈ, ಅಂಜನಾ ಕಾಮತ್ ಹಾಗೂ ಸಂಸ್ಥೆಯ ಮಕ್ಕಳ ಪೋಷಕರು, ಹಿತೈಷಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು