ಇತ್ತೀಚಿನ ಸುದ್ದಿ
ವಿಳಾಸ ಕೇಳುವ ನೆಪದಲ್ಲಿ ಹಾಡಹಗಲೇ ವೃದ್ದೆಯ ಕೊರಳಿನಿಂದ ಸರ ಎಗರಿಸಿದ ಖದೀಮರು: ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆ
13/06/2023, 15:54

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯ ಸುಗ್ಗಿಕಲ್ ರಸ್ತೆಯಲ್ಲಿ ಹಾಡಹಗಲೇ ಬೈಕ್ ನಲ್ಲಿ ಬಂದ ಕಳ್ಳರು ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಸರ ಎಗರಿಸಿದ ಘಟನೆ ನಡೆದಿದೆ.
ವೇಗವಾಗಿ ಬೈಕಿನಲ್ಲಿ ಬಂದು ಸರಗಳ್ಳರು ಕೊರಳಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದಾರೆ.
ಲೀಲಾವತಿ ಎಂಬ ವೃದ್ದೆಯ ಕೊರಳಿನಿಂದ ಚಿನ್ನದ ಸರ ಎಗರಿಸಲಾಗಿದೆ. ಸರ ಎಳೆಯುವ ರಭಸಕ್ಕೆ ವೃದ್ಧೆ ರಸ್ತೆಗೆ ಬಿದ್ದಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಇದೆಲ್ಲ ಸೆರೆಯಾಗಿದೆ. ಲೀಲಾವತಿ ಅವರು ಕೋಟೆ ಬಡಾವಣೆಯ ನಿವಾಸಿಯಾಗಿದ್ದಾರೆ. ಅವರು ಸುಗ್ಗಿಕಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸರಗಳ್ಳತನ ಮಾಡಲಾಗಿದೆ.
ಹಾಡಹಗಲೇ ಚಿನ್ನದ ಸರ ಕಳ್ಳತನ ಹಿನ್ನೆಲೆ ಮಹಿಳೆಯರಿಗೆ ಆತಂಕಗೊಂಡಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು