11:03 AM Thursday18 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ವಿಕೃತ ಮನಸ್ಥಿತಿಯಿಂದ ಬಿಜೆಪಿಯವರು ಹೊರಬರಲಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್

05/08/2023, 23:21

ಮಂಗಳೂರು(reporterkarnataka.com): ಬಿಜೆಪಿಯವರು ಅಧಿಕಾರ ಕಳೆದುಕೊಂಡು ವಿಚಲಿತರಾಗಿ, ಹತಾಶರಾಗಿ ಮನಬಂದಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು ತಿಂಗಳಲ್ಲಿ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಇಂಥ ಉತ್ತಮ ಕಾರ್ಯ ಮಾಡುತ್ತಿರುವಾಗ ವಿಪಕ್ಷದವರು ಸರ್ಕಾರದ ಜತೆ ಇರುವುದನ್ನು ಬಿಟ್ಟು, ಕೇವಲ ವಿರೋಧಕ್ಕಾಗಿ ವಿರೋಧ ಎಂಬಂತೆ ಟೀಕಿಸುವ ಕಾರ್ಯವನ್ನು ಮೊದಲು ಕೈಬಿಡಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದ್ದಾರೆ.

ರಾಜ್ಯದಲ್ಲಿ ಉತ್ತಮ, ದಕ್ಷ ಆಡಳಿತ ನೀಡುವ ಕುರಿತು ಎಐಸಿಸಿ, ಕೇಂದ್ರ ಮುಖಂಡರು ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳ ರಿವ್ಯೂವ್ ಮೀಟಿಂಗ್ ಕರೆದರೆ, ಅದಕ್ಕೆ ಟಾರ್ಗೆಟ್ ಫಿಕ್ಸ್ ಮಾಡಲು ಮೀಟಿಂಗ್ ಕರೆದಿದ್ದಾರೆ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರ ಬಾಲಿಶ ಹೇಳಿಕೆ ಬಿಜೆಪಿಯವರ ಮನಃಸ್ಥಿತಿಯನ್ನು ಅರ್ಥೈಸುತ್ತದೆ. ಉಡುಪಿಯ ಕಾಲೇಜಿನಲ್ಲಿ ನಡೆದಿರುವ ವಿಡಿಯೋ ಪ್ರಕರಣ ಗಂಭೀರ ವಿಷಯ. ಸರ್ಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಲು ತನಿಖಾಧಿಕಾರಿಯನ್ನು ಬದಲಾಯಿಸಿ ಪೂರಕ ಕ್ರಮ ಕೈಗೊಂಡರೂ ಬಿಜೆಪಿಯವರು ಅನಗತ್ಯವಾಗಿ ಅದೇ ವಿಷಯದ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವುದು ನಾಚಿಕೆಗೇಡು. ಇದರ ಜತೆಗೆ ಇತ್ತೀಚೆಗೆ ಉಡುಪಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಿರಿಯ ಅಧಿಕಾರಿಗಳಿಗೆ ಗಂಭೀರವಾಗಿ ತನಿಖೆ ನಡೆಸುವಂತೆಯೂ ನಿರ್ದೇಶನ ನೀಡಿದ್ದಾರೆ. ವಿಡಿಯೋ ಪ್ರಕರಣದ ಷಡ್ಯಂತರ ಒಂದು ವರ್ಷದ ಮೊದಲೇ ಇತ್ತು ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ. ಹಾಗಾದರೆ ಒಂದು ವರ್ಷದ ಮೊದಲು ನಿಮ್ಮದೇ ಸರ್ಕಾರ ಇರುವಾಗ ಯಾಕೆ ಕ್ರಮ ಕೈಗೊಂಡಿಲ್ಲ? ಯಾವುದೇ ಅಪರಾಧಗಳು ನಡೆದರೂ ಅದರಲ್ಲಿ ಧರ್ಮ ಎನ್ನುವುದು ಇಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರೇ. ಸಂವಿಧಾನದ ವಿರೋಧವಾಗಿ ಯಾರೂ ನಡೆದರೂ ಅದು ತಪ್ಪು. ಇಲ್ಲಿ ಯಾರನ್ನೂ ರಕ್ಷಿಸುವ ಪ್ರಮೇಯವೇ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಸುನೀಲ್ ಕುಮಾರ್, ಶಾಸಕರಾದ ವೇದವ್ಯಾಸ್ ಕಾಮತ್, ಯಶ್‌ಪಾಲ್ ಸುವರ್ಣರು ಎಸ್.ಸಿ- ಎಸ್ಟಿ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಅನುದಾನ ಕಡಿತಗೊಳಿಸಿದೆ ಎಂದು ಆರೋಪ ಮಾಡುತ್ತಿದ್ದಾರೆ. ನಿಮಗೆ ನಿಜವಾಗಿಯೂ ದಲಿತರ ಪರವಾದ ಕಾಳಜಿ ಇದೆಯೇ? ಒಂದು ವೇಳೆ ಇದೆ ಎಂದಾದರೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ನಿಮ್ಮದೇ ಸರ್ಕಾರ ಇರುವಾಗ ದಲಿತರ ಅಭಿವೃದ್ಧಿಗೆ ಯಾವ ಯೋಜನೆ ಮಾಡಿದ್ದೀರಿ ಎನ್ನುವುದನ್ನು ಬಹಿರಂಗಪಡಿಸಲಿ. ಅದೆಷ್ಟೋ ದಲಿತ ಮಹಿಳೆಯರ ಅತ್ಯಾಚಾರವಾದರೂ ಯಾಕೆ ಮಾತಾಡಲಿಲ್ಲ. ಇಂತಹ ಮೊಸಳೆ ಕಣ್ಣೀರು ಸುರಿಸುವುದು ಬೇಡ. ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದಿನಿಂದಲೂ ದಲಿತರ, ಹಿಂದುಳಿದವರ, ಬಡವರ ಪರವಾಗಿ ಉತ್ತಮ ಆಡಳಿತ ನೀಡುತ್ತಾ, ಅನೇಕ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ನಿಮ್ಮ ವಿಕೃತ ಮನಸ್ಸನ್ನು ಬಿಟ್ಟು ಒಳ್ಳೆಯ ಕೆಲಸದ ಕಡೆಗೆ ಗಮನಹರಿಸಲಿ ಎಂದು ಕಿವಿಮಾತು ನುಡಿದಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ನಿಮ್ಮ ಕಾರ್ಯಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಜನಪ್ರತಿನಿಧಿಗಳಾದವರು ಸದಾ ಒಳ್ಳೆಯ ಕೆಲಸದ ಕಡೆ ಗಮನಹರಿಸಲಿ. ಅದು ಬಿಟ್ಟು ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಕಾರ್ಯ ಮಾಡುವುದು ಬೇಡ. ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ಮಾಡುವಾಗ ಸಂವಿಧಾನಬದ್ಧವಾಗಿ ನಡೆಸಲಿ. ನೀವು ನೀಡುವ ಪ್ರತಿಯೊಂದು ಹೇಳಿಕೆ ಹಿತವಾಗಿ ಮತ್ತು ಜವಾಬ್ದಾರಿಯುತವಾಗಿರಲಿ. ಸಂವಿಧಾನ ವಿರೋಧಿ ಚಟುವಟಿಕೆ ನಡೆಸಲು ಕುಮ್ಮಕ್ಕು ನೀಡವಂತಹ ಹೇಳಿಕೆ ನೀಡಲು ಹೋಗುವುದು ಬೇಡ. ಒಂದು ವೇಳೆ ಯಾರೂ ಈ ರೀತಿ ಮಾಡಿರೂ ಸಂವಿಧಾನ ಪ್ರಕಾರ ತಪ್ಪು. ಸರ್ಕಾರವೂ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುತ್ತಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ 2018ರಲ್ಲಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ವೇಳೆ ರಾಜ್ಯದ ಸಾಲ 2ಲಕ್ಷದ 45 ಸಾವಿರ ಕೋಟಿ ರೂ. ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಸಾಲ 5 ಲಕ್ಷದ 64 ಸಾವಿರ ಕೋಟಿ ರೂ.ಗೆ ಏರಿದೆ. ಇಷ್ಟು ಇರುವಾಗ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ರಾಜ್ಯವನ್ನು ದಿವಾಳಿ ಮಾಡಿದವರು ಯಾರು? ಬಿಜೆಪಿಯವರು ಇಂತಹ ವಿಕೃತ ಮನಸ್ಥಿತಿಯಿಂದ ಹೊರಬಂದು ಬಡವರ, ದಲಿತರ, ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ಹಗಲಿರುಲು ಶ್ರಮಿಸುತ್ತಿರುವ ಸರ್ಕಾರದ ಪರವಾಗಿ ನಿಂತು ಕೋಮು ಸಾಮರಸ್ಯದ, ಕುವೆಂಪುರವರು ಹೇಳಿಂದಂತೆ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡಲು ಶ್ರಮಿಸಲಿ ಎಂದು
ಪದ್ಮರಾಜ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು