ಇತ್ತೀಚಿನ ಸುದ್ದಿ
ವಿಜಯಪುರ: ಕೊಳವೆ ಬಾವಿಗೆ ಬಿದ್ದ ಮಗು; ಸತತ 20 ತಾಸುಗಳ ಕಾರ್ಯಾಚರಣೆ ಬಳಿಕ ಮೃತ್ಯುಂಜಯನಾದ ಸಾತ್ವಿಕ್
04/04/2024, 19:02

ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ
info.reporterkarnataka@gmail.com
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಚನಾ ಗ್ರಾಮದ ಹೊಲದಲ್ಲಿರುವ ಕೊಳವೆ ಭಾವಿಯಲ್ಲಿ ಬಿದ್ದ ಮಗುವನ್ನು ಸತತ 20 ತಾಸುಗಳ ಕಾರ್ಯಾಚರಣೆಯ ಬಳಿಕ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಲಚ್ಚನಾ ಗ್ರಾಮದ ಸಾತ್ವಿಕ್ ಎಂಬ ಮಗು ಹೊಲದಲ್ಲಿ ತೆರೆದ ಸ್ಥಿತಿಯಲ್ಲಿದ್ದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದಿತ್ತು. ಆದರೆ, ಎನ್ ಡಿಆರ್ ಎಫ್, ಅಗ್ನಿಶಾಮಕದಳ, ಪೊಲೀಸ್ ಪಡೆ, ವೈದ್ಯಕೀಯ ತಂಡದ ಸಂಯುಕ್ತ ಕಾರ್ಯಾಚರಣೆಯಲ್ಲಿ ಸುಮಾರು 20 ತಾಸುಗಳ ಕಾರ್ಯಾಚರಣೆ ನಡೆಸಿ ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಗಿದೆ. ಕೊಳವೆ ಬಾವಿಗೆ ಸಮನಾಂತರದಲ್ಲಿ ಗುಂಡಿ ಕೊರೆದು ನಂತರ ಮಗು ಇರುವ ಸ್ಥಳಕ್ಕೆ ಸುರಂಗ ಕೊರೆದು ಬಹಳ ಕ್ಲಿಷ್ಟಕರವಾದ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಸಾತ್ವಿಕ್ ಗೆ ಮೃತ್ಯುಂಜಯ ಅಂತ ಗ್ರಾಮಸ್ಥರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.