ಇತ್ತೀಚಿನ ಸುದ್ದಿ
ವಿಜಯಪುರ: ಜುವೆಲ್ಲರಿ ಶಾಪ್ ಮಾಲೀಕನ ಮೇಲೆ ತಂಡದಿಂದ ಗುಂಡಿನ ದಾಳಿ ಯತ್ನ; ಇಬ್ಬರು ಪೊಲೀಸ್ ವಶಕ್ಕೆ
14/02/2023, 22:15
ವಿಜಯಪುರ(reporterkarnataka.com): ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಶಾಂತಿವೀರ ಮಠದ ಬಳಿಯ ಚಿನ್ನದ ಅಂಗಡಿ ಮಾಲೀಕನ ಮೇಲೆ 5 ಮಂದಿಯ ತಂಡ
ಗುಂಡಿನ ದಾಳಿಗೆ ಯತ್ನಿಸಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಕಾಳು ಪತ್ತಾರ ಎಂಬಾತನ ಮೇಲೆ ಐವರ ತಂಡ
ಫೈರಿಂಗ್ ಮಾಡಲು ಯತ್ನಿಸಿದೆ.



ಈ ವೇಳೆ ಗುಂಡು ಪಕ್ಕಕ್ಕೆ ತಗುಲಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯೂ ಚಾಮುಂಡೇಶ್ವರಿ ಜ್ಯುವೇಲರ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ಸಿಂದಗಿ ಪೊಲೀಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.














