ಇತ್ತೀಚಿನ ಸುದ್ದಿ
ವಿಜಯಪುರ: ಭೀಕರ ರಸ್ತೆ ಅಪಘಾತಕ್ಕೆ 3 ಮಂದಿ ಸ್ಥಳದಲ್ಲೇ ಸಾವು; ಬೈಕಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ
18/09/2022, 13:52
ವಿಜಯಪುರ(reporterkarnataka.com): ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ತಿಗಣಿ ಬಿದರಿ ಗ್ರಾಮದ ಸಂತೋಷ್(25), ಈಶ್ವರ ಶಿಂಧೆ(26) ಹಾಗೂ ಸಾರವಾಡ ಗ್ರಾಮ ಜಗದೀಶ ಕಿಡಿ(28) ಎಂದು ಗುರುತಿಸಲಾಗಿದೆ.
ಈ ಮೂವರು ಸಾರಾವಾಡ ಗ್ರಾಮದ ಬಳಿ ತಡರಾತ್ರಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಈ ಘೋರ ದುರಂತ ನಡೆದಿತ್ತು. ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.