ಇತ್ತೀಚಿನ ಸುದ್ದಿ
ವಿಜಯಪುರದ ದೇವರಹಿಪ್ಪರಗಿಯಲ್ಲಿ ಅತೀ ಕಡಿಮೆ ತೂಕದ ಶಿಶು ಜನನ: ಮಗು ಬರೇ 575 ಗ್ರಾಂ ಅಷ್ಟೇ !
29/06/2021, 19:44
ಸಾಂದರ್ಭಿಕ ಚಿತ್ರ
ವಿಜಯಪುರ(reporterkarnataka news): ನವಜಾತ ಶಿಶು ಕನಿಷ್ಠ ಎರಡು ಮುಕ್ಕಾಲು ಕೆಜಿ ಇರುತ್ತದೆ. ವಿದೇಶಗಳಲ್ಲಿ ನವಜಾತ ಶಿಶುಗಳು 3 ಕೆಜಿ ಮೇಲಿರುತ್ತದೆ. ಆದರೆ ಇಲ್ಲೊಂದು ಶಿಶು ಬರೇ 575 ಗ್ರಾಂ. ಅಂದ್ರೆ ಅರ್ಧ ಕೆಜಿ ಮತ್ತು 75 ಗ್ರಾಂ. ಬರೇ ಸಣ್ಣ ಶಿಶು ಎಂಬ ಖ್ಯಾತಿ ಈ ಮಗುವಿದ್ದಾಗಿದೆ.
ಈ ಮಗು ಹುಟ್ಟಿದ್ದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಾಲವಾದ ಗ್ರಾಮದಲ್ಲಿ. ಅವಧಿಗೆ ಮುನ್ನವೇ ಶಿಶುವಿನ ಜನನವಾಗಿದೆ. ಇಡೀ ಜಿಲ್ಲೆಯಲ್ಲೇ ಇದು ಅತೀ ಕಡಿಮೆ ತೂಕದ ಮಗುವಾಗಿದೆ.
11 ದಿನಗಳ ಹಿಂದೆ ಜನಿಸಿರುವ ಅತೀ ಕಡಿಮೆ ತೂಕದ ಈ ಶಿಶು ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ. ಕಳೆದ ಜೂನ್ 15 ರಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಜನಿಸಿದೆ.
ಜಿಲ್ಲೆಯ ಇತಿಹಾಸದಲ್ಲಿಯೇ ಅತೀ ಕಡಿಮೆ ತೂಕದ ಶಿಶು ಇದಾಗಿದೆ. ಜಾಲವಾದ ಗ್ರಾಮದ ಬಸಮ್ಮ-ಮಾಂತೇಶ ನಾಯ್ಕೋಡಿ ದಂಪತಿಯ ಮೊದಲ ಮಗು ಮನೆಯಲ್ಲೇ ಜನಿಸಿತ್ತು. ಇದಕ್ಕೂ ಮುನ್ನ ಬಸಮ್ಮ ದೇವರಹಿಪ್ಪರಗಿ ಹಾಗೂ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಅಲ್ಲಿನ ವೈದ್ಯರು ಗರ್ಭಕೋಶದಲ್ಲಿ ನೀರಿನ ಪ್ರಮಾಣ ಕಡಿಮೆಯಿದೆ. ಅವಧಿ ಪೂರ್ವ ಹೆರಿಗೆಯಾಗುವ ಸಂಭವವಿದೆ ಎಂದು ಹೇಳಿದ್ದರು. ಇದಾದ ಬಳಿಕ ಬಸಮ್ಮನಿಗೆ ಮನೆಯಲ್ಲಿಯೇ ಹೆರಿಗೆಯಾಗಿದೆ. ಅವಧಿ ಪೂರ್ವ ಅಂದರೆ ಏಳು ತಿಂಗಳಿಗೆ ಹೆರಿಗೆಯಾಗಿ ಅತೀ ಕಡಿಮೆ 575 ಗ್ರಾಂ ತೂಕದ ಹೆಣ್ಣು ಶಿಶು ಜನನವಾಗಿದೆ. ಜಿಲ್ಲಾಸ್ಪತ್ರೆಗೆ ಮಗು ಮತ್ತು ತಾಯಿಯನ್ನು ದಾಖಲಿಸಲಾಗಿದೆ.