12:38 PM Tuesday25 - November 2025
ಬ್ರೇಕಿಂಗ್ ನ್ಯೂಸ್
Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ… Chikkamagaluru | ಎನ್.ಆರ್.ಪುರ: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಜನರಲ್ಲಿ ಮತ್ತೆ… ಸಿದ್ದರಾಮಯ್ಯರ ಹಣಕಾಸು ಮಂತ್ರಿ ಮಾಡಿದ್ದೇ ನಾನು: ಸಿಎಂ ವಿರುದ್ದ ಮಾಜಿ ಪಿಎಂ ದೇವೇಗೌಡ…

ಇತ್ತೀಚಿನ ಸುದ್ದಿ

ವಿಜಯನಗರ ಜಿಲ್ಲಾ ಶಿಳ್ಳೇಕ್ಯಾತರ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ: ಗೌರಮ್ಮ ನೂತನ ಅಧ್ಯಕ್ಷೆ

21/09/2021, 08:58

ವಿ.ಜಿ.ವೃಷಭೇಂದ್ರ  ಕೂಡ್ಲಿಗಿ ವಿಜಯನಗರ 

info.reporterkarnataka@gmail.com

ಜಿಲ್ಲೆಯ ಶಿಳ್ಳೇಕ್ಯಾತರ ನೂತನ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಅಸ್ಥಿತ್ವಕ್ಕೆ ಬಂದಿದ್ದು,ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ  ರಾಜ್ಯ ಮುಖಂಡರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ನೂತನ ಸಂಘದ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ವಿಜಯನಗರ ಜಿಲ್ಲಾಧ್ಯಕ್ಷರಾಗಿ ಕೂಡ್ಲಿಗಿ ಪಟ್ಟಣದ ಬಿದಿಬದಿ ವ್ಯಾಪಾರಿ ಗೌರಮ್ಮ ಮಹಂತೇಶ ಸಿಂದೆರನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷೆ ಹನುಮಕ್ಕ, ಪ್ರಧಾನ ಕಾರ್ಯದರ್ಶಿ ಅಲಿಗಿಲಿವಾಡ ರೂಪ, ಸಂಘಟನಾ ಕಾರ್ಯದರ್ಶಿ ಕೊಟ್ಟೂರು ಕವಿತಾ, ಕೋಶಾಧ್ಯಕ್ಷರು ನಾಗರಕಟ್ಟೆ ಮಹಾದೇವಮ್ಮ, ದೀಪಾ, ಗಾಳೆಮ್ಮಗುಡಿ ಉಮಾದೇವಿ ಅವರನ್ನು ಸಭೆಯಲ್ಲಿ ಅಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರು ಮಹೇಂದ್ರ ರಾವ್ ಸಾಸನಿಕ್ ಅವರನ್ನು ನೇಮಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಶಿಳ್ಳೇಕ್ಯಾತ ಸ್ವಾಮೀಜಿ ಶ್ರೀಕಲ್ಲಿನಾಥ ಮಹಾಸ್ವಾಮಿ ಭೀಮಘಡ ಹಾಗೂ ಬಡೇಲಡಕು ಶ್ರೀವಸಂತಪ್ಪತಾತ ರವು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಧ್ಯಕ್ಷ ಡಾ. ಸಣ್ಣ ದೊಡ್ಮನಿ,ರಾಜ್ಯ ಕಾರ್ಯದರ್ಶಿ ಗಂಗೂರು ಮತ್ತಣ್ಣವಾಯ್, ರಾಜ್ಯಉಪಾಧ್ಯಕ್ಷ ಸುರೇಶ್ ವಾಯ್ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಶಿಳ್ಳೆಕ್ಯಾತರ ,ರಾಜ್ಯ ಸಂಚಾಲಕ ವಿಲಾಸಕುಮಾರ ಜಿ.ಶಿಂಧೆ,ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶೈಲಾ ಸೀತಾರಾಂ ಪಾಚಂಗೆ ಮತ್ತಿರರು ವೇದಿಕೆಯಲ್ಲಿದ್ದರು. ತೊಗಲುಗೊಂಬೆ ಕಲಾವಿದರಾದ ಬಡೇಲಡಕು ತಿಪ್ಪೇಸ್ವಾಮಿ ಹಾಗೂ ತಬಲಸಾತಿ ವೆಂಕಟೇಶ್ ಕಟ್ಟಿಮನಿ ಪ್ರಾರ್ಥಿಸಿದರು. ಮುತ್ತಣ್ಣ ವಾಯ್ ಕಟ್ಟಿಮನಿ ನಿರೂಪಿಸಿದರು,ಕೂಡ್ಲಿಗಿ ಮಂಜು ಸಿಂದೆ ಸ್ವಾಗತಿಸಿದರು, ಬಡೇಲಡಕು ವಿರುಪಾಕ್ಷಪ್ಪ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು