9:00 PM Saturday7 - March 2026
ಬ್ರೇಕಿಂಗ್ ನ್ಯೂಸ್
Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ

ಇತ್ತೀಚಿನ ಸುದ್ದಿ

ವಿದ್ಯಾರ್ಥಿನಿಗೆ ಮೊಬೈಲ್ ಲಿಂಕ್ ಕಳುಹಿಸಿ ಅನ್ಲೈನ್ ಮೂಲಕ 80 ಸಾವಿರಕ್ಕೂ ಹೆಚ್ಚು ಹಣ ಗುಳುಂ: ದೂರು ದಾಖಲು

20/02/2023, 22:53

ಉಡುಪಿ(reporterkarnataka.com): ವಿದ್ಯಾರ್ಥಿನಿಯೋರ್ವಳ ಮೊಬೈಲ್‌ಗೆ ಲಿಂಕ್ ಕಳಿಸಿ ಆಕೆಯ ಖಾತೆಯಿಂದ ಒಟ್ಟು 80,602 ರೂ. ಹಣವನ್ನು ಆನ್ ಲೈನ್ ವರ್ಗಾವಣೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ರೂಪಶ್ರೀ ಎಂ.ಸಿ. ಎಂಬ ವಿದ್ಯಾರ್ಥಿನಿ ಹಣ ಕಳೆದುಕೊಂಡವರು .
ವಿದ್ಯಾಭ್ಯಾಸಕ್ಕಾಗಿ ಪುಸ್ತಕಗಳನ್ನು ಆನ್ ಲೈನ್ ನಲ್ಲಿ ಖರೀದಿಸಲುವ ಆರ್ಡರ್ ಮಾಡಿ ಒಂದು ವಾರ ಕಳೆದರೂ ಪುಸ್ತಕಗಳು ಬಾರದಿದ್ದಾಗ ಗೂಗಲ್ ನಲ್ಲಿ ಕೋರಿಯರ್ ಸಂಸ್ಥೆಯ ವಿವರವನ್ನು ಹುಡುಕಾಡಿ ಕಂಡು ಬಂದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದ್ದಾರೆ. ಆಗ ವ್ಯಕ್ತಿಯೊಬ್ಬ ತಾನು ಕೋರಿಯರ್ ಸಂಸ್ಥೆಯವನೆಂದು ನಂಬಿಸಿ, ವಿದ್ಯಾರ್ಥಿನಿಯ ಮೊಬೈಲ್ ಗೆ ಲಿಂಕ್ ಒಂದನ್ನು ಕಳುಹಿಸಿ, ವಿವರ ಪಡೆದು, ಅದೇ ದಿನ ಕ್ರಮವಾಗಿ 19 ಟ್ರಾನ್ಸೆಕ್ಷನ್ ಮುಖೇನ ಆಕೆಯ ಹೆಚ್.ಡಿ.ಎಫ್.ಸಿ. ಬ್ಯಾಂಕ್, ಕುಂದಾಪುರ ಖಾತೆಯಿಂದ ಒಟ್ಟು ರೂಪಾಯಿ 80,602 ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಕೊಂಡಿದ್ದಾನೆ. ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು